ಬಿಕ್ಕಳಿಕೆ ಪ್ರತಿಯೊಬ್ಬರಿಗು ಬರುತ್ತದೆ.ಬಿಕ್ಕಳಿಕೆ ಬಂದಾಗ ಒಂದು ರೀತಿಯ ಹಿಂಸೆ,ಕಲವರು ಬಿಕ್ಕಳಿಕೆ ಬಂದ ತಕ್ಷಣ ಒಂದು ಲೋಟ ನೀರನ್ನು ಕುಡಿಯುತ್ತಾರೆ.ಇದರಿಂದ ಬಿಕ್ಕಳಿಕೆ ನಿಲ್ಲುತ್ತದೆ..ಇಲ್ಲವಾದಲ್ಲಿ ಒಂದು ಸ್ಪೂನ್ ಸಕ್ಕರೆಯನ್ನು ತಿಂದ್ರೆ ಬಿಕ್ಕಳಿಕೆ ತಕ್ಷಣಕ್ಕೆ ನಿಲ್ಲುತ್ತದೆ..ಇದೆಲ್ಲವೂ ಸರಿ..ಆದ್ರೆ ಬಿಕ್ಕಳಿಕೆ ಪ್ರಮುಖ ಕಾರಣಗಳೇನು ಗೊತ್ತಾ?

ಕಾರದ ಪದಾರ್ಥ
ಬಿಕ್ಕಳಿಗೆ ಮುಖ್ಯಾವಾಗಿ ಬರುವುದು,ಅತಿಯಾಗಿ ಕಾರವಿರುವ ಪದಾರ್ಥಗಳನ್ನು ಸೇವಿಸಿದಾಗ,ಮಸಾಲೆ ಹೆಚ್ಚಿದ್ದಾರೆ ಮಸಾಲೆಯುಕ್ತ ಆಹಾರವು ಉಸಿರಾಟವನ್ನು ನಿಯಂತ್ರಿಸುವ ನರಗಳನ್ನು ಇರಿಟೇಟ್ ಮಾಡುತ್ತದೆ , ಇದು ಬಿಕ್ಕಳಿಗೆ ಕಾರಣವಾಗುತ್ತದೆ.

ದೇಹದಲ್ಲಿ ನೀರಿನ ಕೊರತೆಯಾದಗ
ಪ್ರತಿದಿನ ೩-೪ ಲೀಟರ್ ಅಷ್ಟು ನೀರು ಕುಡಿಯುವುದು ಉತ್ತಮ..ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ..ದೇಹ ಡಿ ಹೈಡ್ರೇಟ್ ಆದಾಗ ಬಿಕ್ಕಳಿಕೆ ಶುರುವಾಗುತ್ತದೆ.
ಡಯಾಫ್ರಂ
ಹಾಗೂ ಮುಖ್ಯವಾಗಿ ಎದೆಯ ಕೆಳಭಾಗದಲ್ಲಿ ಹಾಗೂ ಹೊಟ್ಟೆಯ ಮೇಲ್ಭಾಗದಲ್ಲಿ ಡಯಾಫ್ರಂ ಎನ್ನುವ ಒಂದು ಪದರವಿರುತ್ತದೆ. ಇದು ಯಾವುದೇ ಕ್ಷಣದಲ್ಲಿ ಸಡನ್ ಆಗಿ ಸೆಳೆತಕ್ಕೆ ಒಳಗಾದರೆ ಅದರ ಪ್ರಭಾವದಿಂದ ನಮಗೆ ಬಿಕ್ಕಳಿಕೆ ಬರುತ್ತದೆ.
ತುಂಬಾ ವೇಗವಾಗಿ ಊಟ ಮಾಡುವುದು
ಆಹಾರವನ್ನು ನುಂಗುವುದರಿಂದ ಡಯಾಫ್ರಾಮ್ ಕಿರಿಕಿರಿಗೊಂಡು ಬಿಕ್ಕಳಿಕೆಗೆ ಕಾರಣವಾಗಬಹುದು.ಹಾಗಾಗಿ ಊಟ ಮಾಡುವಾಗ ನಿಧಾನ ಮತ್ತು ಸಮಾಧಾನವಾಗಿ ಊಟ ಮಾಡಬೇಕು.

ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದು
ಹೌದು ಹೆಚ್ಚು ಜನಕ್ಕೆ ಸೋಡಾ, ಬಿಯರ್ ಮತ್ತು ಸ್ಪಾರ್ಕ್ಲಿಂಗ್ ನೀರಿನಂತಹ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವ ಅಭ್ಯಾಸವಿರುತ್ತದೆ ಇದು ಡಯಾಫ್ರಾಮ್ ಅನ್ನು ಇರಿಟೇಟ್ ಮಾಡುತ್ತದೆ ಹಾಗೂ ಇದರಿಂದ ಬಿಕ್ಕಳಿಗೆ ಶುರುವಾಗುತ್ತದೆ .