ನಿನ್ನೆ RCB ಹಾಗೂ CSK ನಡುವಿನ ಮಹತ್ವದ ಪಂದ್ಯದಲ್ಲಿ ಆರ್ಸಿಬಿ ಅಭಿಮಾನಿಗೆ ಯುವತಿ ಪ್ರೇಮ ನಿವೇದನೆ ಮಾಡಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಈ ಪ್ರಸಂಗ ನಡೆದಿದ್ದು ಎಲ್ಲರು ಪ್ರೇಮಿಗಳಿಗೆ ಶುಭ ಹಾರೈಸಿದ್ದಾರೆ.
ಪ್ರೇಕ್ಷಕರ ಗ್ಯಾಲರಿಯಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಯುವಕಮ ಬಳಿ ಹೋದ ಯುವತಿ ಉಂಗುರ ಮುಂದಿಟ್ಟು ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ ಮರುಕ್ಷಣವೇ ಯುವಕ ಒಪ್ಪಿಕೊಂಡಿದ್ದು ನೆರದಿದ್ದ ಪ್ರೇಕ್ಷಕರೆಲ್ಲರು ನವ ಜೋಡಿಗೆ ಶುಭಹಾರೈಸಿದ್ದಾರೆ.
ವೈರಲ್ ವಿಡಿಯೋವನ್ನು ಟ್ವೀಟ್ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಯುವಕ ಹಾಗು ಯುವತಿಗೆ ಶುಭ ಹಾರೈಸಿದ್ದಾರೆ.