ಕೈಗಾರಿಕೋದ್ಯಮಿ ರತನ್ ಟಾಟಾ ಸೇರಿದಂತೆ ಹಲವರನ್ನು ಪಿಎಂ ಕೇರ್ ಫಂಡ್ ಟ್ರಸ್ಟ್ ಸದಸ್ಯರಾಗಿ ನೇಮಿಸಲಾಗಿದೆ.
ಟಾಟಾ ಸನ್ಸ್ ಮುಖ್ಯಸ್ಥರಾಗಿರುವ ರತನ್ ಟಾಟಾ, ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆಟಿ ಥಾಮಸ್, ಮಾಜಿ ಉಪಸಭಾಪತಿ ಕರಿಯಾ ಮುಂಡಾ ಅವರನ್ನು ಪಿಎಂ ಕೇರ್ ಫಂಡ್ ನ ನೂತನ ಟಸ್ಟಿಗಳಾಗಿ ನೇಮಕ ಮಾಡಲಾಗಿದೆ.
ಪಿಎಂ ಕೇರ್ಸ್ ಫಂಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ರಸ್ಟ್ ನ ಸದಸ್ಯರಾಗಿದ್ದಾರೆ. ನೂತನ ಟ್ರಸ್ಟಿಗಳ ನೇಮಕಕ್ಕೆ ಪ್ರಧಾನಿ ಕಚೇರಿ ಸ್ವಾಗತ ಕೋರಿದೆ.