
ದಾವಣಗೆರೆ: BJP ಬಂಡಾಯ ನಿಲ್ಲಿಸಿ ಅಂತಾ ಹೈಕಮಾಂಡ್ ಎಷ್ಟು ಬಾರಿ ಹೇಳಿದ್ರೂ ಬಂಡಾಯ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಇದೀಗ ಒಡೆದ ಬಿಜೆಪಿ ಮನಸ್ಸುಗಳನ್ನು ಒಂದು ಮಾಡಲು ಶ್ರೀರಾಮುಲು ಯಾತ್ರೆ ಕೈಗೊಂಡಿದ್ದಾರೆ. ಒಡೆದ ಮನಸ್ಸು ಒಂದಾಗಿಸಲು ರಾಜ್ಯಾದ್ಯಂತ ಬಿ ಶ್ರೀರಾಮುಲು ಯಾತ್ರೆ ಕೈಗೊಂಡಿದ್ದಾರೆ.

ಬಿಜೆಪಿ ಪಕ್ಷ ಕಟ್ಟಲು ಶ್ರೀ ರಾಮುಲು ಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರದ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಮಾಜಿ ಸಚಿವ ಶ್ರೀ ರಾಮುಲು ಸ್ಪೋಟಕ ಹೇಳಿಕೆ ನೀಡಿದ್ದು, ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಮುಂದೆ ಕರ್ನಾಟಕದಲ್ಲೂ ಬಿಜೆಪಿಗೆ ಬಹುಮತ ಬರುತ್ತದೆ. ಈ ಹಿನ್ನಲೆ ಪಕ್ಷದಲ್ಲಿ ಒಡೆದ ಮನಸ್ಸುಗಳನ್ನ ಒಂದುಗೂಡಿಸುವ ಪ್ರಯತ್ನ ನಾನು ಮಾಡುತ್ತೇನೆ ಎಂದಿದ್ದಾರೆ.
ಬಿಜೆಪಿ ನಾಯಕರು, ಹಿಂದೂ ಮುಖಂಡರನ್ನ ಒಗ್ಗೂಡಿಸಲು ಯಾತ್ರೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಿಂದೂಪರ ಸಂಘಟನೆಗಳು ಸೇರಿದಂತೆ ಎಲ್ಲರನ್ನೂ ಒಗ್ಗೂಡಿಸುವೆ ಎಂದಿರುವ ಶ್ರೀರಾಮುಲು, ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ. ಒಡೆದ ಮನಸ್ಸುಗಳನ್ನು ಒಂದು ಮಾಡುವ ಯಾತ್ರೆ ಮಾಡುತ್ತೇನೆ. ಯಾವುದೋ ಕಾರಣಕ್ಕೆ ನೋವಾಗಿ ಒಡೆದ ಮನಸ್ಸುಗಳನ್ನು ನಾನು ಒಂದು ಮಾಡುತ್ತೇನೆ ಎಂದಿದ್ದಾರೆ.

ಒಡೆದ ಮನಸ್ಸುಗಳನ್ನು ಒಂದು ಮಾಡಲು ರಾಜ್ಯಾದ್ಯಂತ ಯಾತ್ರೆ ಶುರು ಮಾಡುತ್ತೇನೆ, ಸಮಾನ ಮನಸ್ಕರನ್ನು ಒಂದು ಪ್ಲಾಟ್ ಫಾರಂನಲ್ಲಿ ತರುವ ಕೆಲಸ ಮಾಡುತ್ತೇನೆ ಎಂದಿದ್ದು, ಎಲ್ಲಾ ಜಿಲ್ಲೆಗಳಲ್ಲಿ ನಾನು ಯಾತ್ರೆ ನಡೆಸಿ ಎಲ್ಲರನ್ನು ಒಂದು ಮಾಡುತ್ತೇನೆ. ಎಲ್ಲಾ ಕಡೆಗಳಲ್ಲಿ ನಾನು ಈಗಾಗಲೇ ಕರೆ ಮಾಡಿ ಮಾತನಾಡಿದ್ದೇನೆ. ನನ್ನ ಯಾತ್ರೆ ಉದ್ದೇಶ ಸ್ವಾರ್ಥ ಇಲ್ಲ, ಎಲ್ಲರನ್ನು ಒಂದು ಮಾಡುವ ಕೆಲಸ ಮಾತ್ರ ಎಂದಿದ್ದಾರೆ.

ಬಿಜೆಪಿ ನಾಯಕರನ್ನು, ಹಿಂದೂ ಕಾರ್ಯಕರ್ತರನ್ನು, ಸಂಘದವರನ್ನು ಒಂದು ಮಾಡುವ ಕೆಲಸದಲ್ಲಿ ನಾನು ತೊಡಗುತ್ತೇನೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಕರೆದರೆ ನಾನು ಹೋಗಿ ಮಾತನಾಡುತ್ತೇನೆ ಎಂದಿದ್ದಾರೆ. ಜೊತೆಗೆ ರೆಡ್ಡಿ – ರಾಮುಲು ಒಂದಾಗ್ತಾರ ಅನ್ನೋ ಪ್ರಶ್ನೆಗೆ ರಾಮುಲು ಉತ್ತರ ಕೊಟ್ಟಿದ್ದು, ಈ ಯಾತ್ರೆಯಲ್ಲಿ ಎಲ್ಲರು ಬರ್ತಾರೆ ಎಂದು ಹೇಳಿದ ಶ್ರೀರಾಮುಲು, ಒಡೆದ ಮನಸ್ಸುಗಳು ಎಂದರೆ ಎಲ್ಲರೂ ಸೇರುತ್ತೇವೆ ಎನ್ನುವ ಮೂಲಕ ರೆಡ್ಡಿ ಶ್ರೀರಾಮುಲು ಒಗ್ಗಟ್ಟು ಮಂತ್ರದ ಬಗ್ಗೆ ಹೇಳಿದ್ದಾರೆ.














