ಅಶ್ಲೀಲ ಸಿಡಿ ಪ್ರಕರಣ ಸಂಬಂಧಿಸಿದಂತೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತನ್ನ ತಪ್ಪನ್ನು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಕನ್ನಡ ಸುದ್ದಿ ವಾಹಿನಿ ವರದಿ ಮಾಡಿದೆ.
ಇಷ್ಟು ದಿನ ನನಗೆ ಆ ಯುವತಿ ಯಾರು ಎಂಬುದೇ ಗೊತ್ತಿಲ್ಲ ಎನ್ನುತ್ತಿದ್ದ ರಮೇಶ್ ಜಾರಕಿಹೊಳಿ ದಿಢೀರ್ ಎಂದು ಉಲ್ಟಾ ಹೊಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ತನಿಖಾಧಿಕಾರಿಗಳ ಮುಂದೆ ಗೌಪ್ಯವಾಗಿ ಹಾಜರಾಗಿ ವಿಚಾರಣೆ ಎದುರಿಸಿದ್ದ ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವುದು ನಾನೇ. ಮತ್ತು ನನ್ನ ಜೊತೆಗಿದ್ದ ಯುವತಿ ಪರಿಚಯ ಇದೆ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಸಿಡಿಯಲ್ಲಿರುವ ಯುವತಿ ಯಾವುದೊ ಪ್ರಾಜೆಕ್ಟ್ ವಿಷಯವಾಗಿ ಪರಿಚಯವಾದಳು. ಸಹಮತದಿಂದ ನಾವು ಲೈಂಗಿಕ ಸಂಪರ್ಕ ಹೊಂದಿದ್ದೇವೆ ಆದರೆ ನನಗೆ ಗೊತ್ತಿಲ್ಲದಾಗೆ ವಿಡಿಯೋ ಮಾಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.