ವಲಸೆ ನಾಯಕರಿಂದ ಪದೇ ಪದೇ ಮುಜುಗರಕ್ಕೊಳಗಾಗುವ ಬಿಎಸ್ ವೈ ಸರ್ಕಾರ

ಮೈತ್ರಿ ಸರ್ಕಾರವನ್ನು ಕೆಡವಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಬಿಜೆಪಿ ಸರ್ಕಾರಕ್ಕೆ ಒಂದಲ್ಲ ಒಂದು ರೀತಿ ತೊಡಕಾಗಿರುವ ಈ ವಲಸೆ ನಾಯಕರ ವರ್ತನೆ. ಅಧಿಕಾರದ ಆಸೆಗಾಗಿ 17 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜಿನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರವನ್ನು ಕೆಡವಿದನ್ನು ನಾಡಿನ ಜನ ನೋಡಿದ್ದಾರೆ. ಆದರೆ ರಾಜಿನಾಮೆ ನೀಡಿದ ಬಹುತೇಕ ಜನರು ಸಚಿವ ಸ್ಥಾನಕ್ಕೇರಿದ್ದಾದರು ಎಷ್ಟರ ಮಟ್ಟಿಗೆ ಅವರ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಈಗ ಜನಸಾಮಾನ್ಯರ ಪ್ರಶ್ನೆ.

ರಮೇಶ್ ಜಾರಕಿಹೊಳಿಯಿಂದಾಗಿ ಬಿಜೆಪಿ ಸರ್ಕಾರಕ್ಕೆ ಮುಜುಗರ

ಅಧಿಕಾರವನ್ನು ದುರ್ಬಳಕೆ ಮಾಡಿ ಹೆಣ್ಣನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪವಿರುವ ರಮೇಶ್ ಜಾರಕಿಹೊಳಿಯರ ಸಿಡಿ ನಾಡಿನಾದ್ಯಂತ ವೈರಲ್ ಆಗಿತ್ತು. ಆದರೆ ಈ ವಿಡಿಯೋದಲ್ಲಿರುವುದು ನಾನಲ್ಲ, ಇದು ಷಡ್ಯಂತ್ರ ಅಂತೆಲ್ಲ ಮೊದಲು ಹೇಳಿ, ಈಗ ಸಿಡಿಯಲ್ಲಿ ಇರುವುದು ನಾನೇ ಎಂದು ಒಪ್ಪಿಕೊಂಡಿರುವ ಸುದ್ದಿ ವರದಿಯಾಗಿದೆ. ಇದು ಬಿಎಸ್‌ವೈ ಸರ್ಕಾರಕ್ಕೆ ದೊಡ್ಡ ಹೊಡೆತದ ಜೊತೆಗೆ ನಾಡಿನ ಜನತೆಯ ಮುಂದೆ ಮುಜುಗರಕ್ಕೊಳಗಾಗಿದ್ದಾರೆ. ಈ ಒಂದು ಪ್ರಕರಣವನ್ನು ದೀರ್ಘಕಾಲ ತೆಗೆದುಕೊಂಡು ಹೋಗದೆ ತನಿಖೆ ಮಾಡಿದರೆ ಯಡಿಯೂರಪ್ಪ ಸರ್ಕಾರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲೇಬೇಕು ಎಂಬ ಮಾತು ಜನಸಾಮಾನ್ಯದ್ದು.

ಇನ್ನೂ ಮೊದಲದಿನದಿಂದಲೂ ಹಳ್ಳಿ ಹಕ್ಕಿ ಎಚ್. ವಿಶ್ವನಾಥ್ ಅವರ ಮಾತುಗಳು ಯಡಿಯೂರಪ್ಪ ಸರ್ಕಾರಕ್ಕೆ ನುಂಗಲಾರದ ತುಪ್ಪವಾಗಿರುವುದು ಸುಳ್ಳಲ್ಲ.

ಉಪ ಚುನಾವಣೆಯಲ್ಲಿ ಸೋತ ಹುಣಸೂರು ಮಾಜಿ ಶಾಸಕ ಹಾಲಿ ಎಂಎಲ್‌ಸಿ ಎಚ್.ವಿಶ್ವನಾಥ್ ಅವರು ಬಿಜೆಪಿಗೆ ಸೇರ್ಪಡೆಯಾದ ದಿನದಿಂದಲು ಅವರ ವಿರುದ್ಧವೇ ಅನೇಕ ಮಾತುಗಳನ್ನಾಡಿರುವುದನ್ನು ಗಮನಿಸಬಹುದು. ಚುನಾವಣೆ ಸೋತ ಮರುದಿನವೇ ನನ್ನ ಸೋಲಿಗೆ ಸಿ.ಪಿ ಯೋಗೇಶ್ವರ್ ಕಾರಣ ಅಂತೆಲ್ಲ ಹೇಳಿದ ವಿಶ್ವನಾಥ ಅವರು ಈಗ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದೆವಲ್ಲ ಎಂದು ವ್ಯಥೆಯಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಜಿಂದಾಲ್ ಕಂಪನಿಗೆ ಭೂಮಿ ನೀಡಬಾರದು ಎಂದು ಇದೇ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯವರು ವಿಧಾನಸೌದದ ಒಳಗೆ ಧರಣಿ ನಡೆಸಿದರು. ಆದರೆ ಇಂದು ಇದೇ ಬಿಜೆಪಿಯವರು 1 ಕೋಟಿ ರೂ. ಗೆ ಬೆಲೆಬಾಳುವ 3,667 ಎಕರೆ ಜಮೀನನ್ನು ಕೇವಲ 1.12 ಲಕ್ಷ ರೂಗಳಿಗೆ ಮಾರಾಟ ಮಾಡಿರುವುದು ದುರದೃಷ್ಟಕರ. ಇಂತಹ ಸರ್ಕಾರವನ್ನು ನಾವು ಅಧಿಕಾರಕ್ಕೆ ತಂದೆವಲ್ಲ ಎಂಬ ವ್ಯಥೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಾಕ್ಡೌನ್ ಮಾಡಿದರೆ ಜನರ ಪರಿಸ್ಥಿತಿ ಏನು ಎಂಬುದನ್ನು ತಿಳಿದಿದ್ದೀರ? ಜನ ಕೋವಿಡ್ ನಿಂದ ಸಾಯುವುದಿಲ್ಲ, ಸಂಸಾರ ನಡೆಸಲು ಆಗದೆ ಸಾಯುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಒಂದು ವೇಳೆ ನೀವು ಲಾಕ್ ಡೌನ್ ಮಾಡಲೇ ಬೇಕು ಎನ್ನುವುದಾದರೆ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನೀಡಿ ನಂತರ ಲಾಕ್ಡೌನ್ ಮಾಡಿ ಎಂದು ತನ್ನ ಸರ್ಕಾರವನ್ನೇ ಒತ್ತಾಯಿಸಿದರು.

ಸಿ.ಪಿ ಯೋಗೇಶ್ವರ್ ನಡಾವಳಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೆಡಕಾಗಿರುವುದು ಸುಳ್ಳಲ್ಲ

ಮೈತ್ರಿ ಸರ್ಕಾರವನ್ನು ಕೆಡವಲು ಪ್ರಮುಖರಲ್ಲಿ ಒಬ್ಬರಾದವರು ಎನ್ನಲಾದ ಯೋಗೇಶ್ವರ್ ನ ಇತ್ತಿಚಿನ ನಡವಳಿಕೆ ಬಿಜೆಪಿ ಸರ್ಕಾರಕ್ಕೆ ಮುಜುಗರ ತಂದಿದೆ. ನಾಡಿನ ಮುಖ್ಯಮಂತ್ರಿಗಳ ವಿರುದ್ಧ ಹೈಕಮಾಂಡ್ ಗೆ ದೂರು ನೀಡಲು ಹೋಗಿದ್ದಾರೆ ಎನ್ನುವುದನ್ನು ಬಿಜೆಪಿ ಪಕ್ಷದ ಶಾಸಕರು ಸಚಿವರೇ ಬಾಯಿ ಬಿಟ್ಟು ಹೇಳಿರುವುದು ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ಸಿ.ಪಿ ಯೋಗೇಶ್ವರ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ ಕೂಡ. ಅದರಲ್ಲೂ ರೇಣುಕಾಚಾರ್ಯ ಒಂದು ಹೆಜ್ಜೆ ಮುಂದೆ ಹೋಗಿ ಮೆಗಾಸಿಜಿ ಕೇಸಿನ ಯೋಗೇಶ್ವರ್ ಅನ್ನು ಬಂಧಿಸಿ ಎಂದು ಹೇಳಿರುವುದು ಅವರ ಪಕ್ಷಕ್ಕೆ ಅವರೇ ಮಾಡಿಕೊಳ್ಳುತ್ತಿರುವ ದೊಡ್ಡ ಪೆಟ್ಟು ಅನ್ನಬಹುದು. ಕರೋನ ಅಂತಹ ಪರಿಸ್ಥಿತಿಯಲ್ಲಿ ಇವರೆಲ್ಲ ಹೊಲಸು ರಾಜಕೀಯ ಮಾಡುತ್ತಿರುವುದನ್ನು ಜನಸಾಮಾನ್ಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...