ಬಿಜೆಪಿ ಯಲ್ಲಿ ಬಂಡಾಯದ ಬಾವುಟ ಹಾರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಾವು ಕಾಂಗ್ರೆಸ್ ತೊರೆದ ಕಾರಣ ಬಿಚ್ಚಿಟ್ಟಿದ್ದಾರೆ.ತಾವು ಕಾಂಗ್ರೆಸ್ ಪಕ್ಷ ತೊರೆಯಲು ಆ ಒಬ್ಬ ವ್ಯಕ್ತಿ ಕಾರಣ ಅಂತ ಹೇಳಿದ್ದಾರೆ.
ಆ ಮೂಲಕ ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ. ಗೊಕಾಕ್ನಲ್ಲಿ ನಡೆದ ರಾಜ ಋಷಿ ಭಗೀರಥ ಮಹರ್ಷಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ರಮೇಶ ಜಾರಕಿಹೊಳಿ ಇಂದು ಭಾಗಿಯಾಗಿದ್ರು.
ಈ ವೇಳೆ ನಾನು ಬಿಜೆಪಿಗೆ ಅನಿವಾರ್ಯ ಕಾರಣಗಳಿಂದ ಬಂದಿದ್ದೇನೆ.ಆದ್ರೆ ಈ ಹಿಂದೆ ನಾನು ಕಾಂಗ್ರೆಸ್ ನಿಂದ ಐದು ಬಾರಿ ಶಾಸಕನಾಗಿದ್ದೆನೆ .ನನಗೆ ಕಾಂಗ್ರೆಸ್ ಪಕ್ಷ ಯಾವುದೇ ರೀತಿ ಕೆಟ್ಟದ್ದು ಮಾಡಿರಲಿಲ್ಲ. ಆದ್ರೆ ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ರು ಎಂದು ಹೇಳಿದ್ದಾರೆ.