ಹೆಚ್.ಡಿ ಕುಮಾರಸ್ವಾಮಿಯವರು ನಾನು ಶಾಸಕನ್ನಾಗಿದ್ದಾಗ ನಡೆಸಿಕೊಂಡ ರೀತಿ ಬೇಸರ ತಂದಿತ್ತು. ಹಾಗೆಯೇ ನನಗೆ ತಿಳಿಯದೇ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದರು, ಹಗುರವಾಗಿ ಮಾತನಾಡುತ್ತಿದ್ದರು, ನನಗೆ ಆಗ ಅರ್ಥವಾಗಿರಲ್ಲಿಲ್ಲ ನಾನು ಕುಮಾರಸ್ವಾಮಿ ಅವರನ್ನು ದೇವರ ತರ ಕಂಡಿದ್ದೆ. ಜೆಡಿಎಸ್ ಪಕ್ಷದ ಮೇಲೆ ಅಪಾರ ಅಭಿಮಾನಯಿಟ್ಟುಗೊಂಡಿದ್ದೆ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ ಎಂದು ಕಾಂಗ್ರೆಸ್ ಸೇರ್ಪಡೆಯಾದ ರಾಮನಗರದ ಮಾಜಿ ಜೆಡಿಎಸ್ ಶಾಸಕ ಕೆ ರಾಜಣ್ಣಾ ಹೇಳಿದ್ದಾರೆ.
ನನ್ನ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ಕಮಿಷನ್ದಂಧೆ ಎಂಬುವುದು ನನಗೆ ತಿಳಿದೇಯಿಲ್ಲ, ಪ್ರಾಮಾಣಿಕವಾಗಿ ಬಹಳ ಶಿಸ್ತುಬದ್ಧವಾಗಿ ಜೀವನ ಮಾಡಿಕೊಂಡು ಬಂದವನು, ಶಾಸಕನಾದ ನಂತರವೂ ಇದೇ ಶೈಲಿ ಮುಂದುವರೆಸಿಕೊಂಡು ಹೋಗಿದ್ದೆ, ಆದರೂ ಕೂಡ ಕುಮಾರಸ್ವಾಮಿ ಅವರು ನನ್ನ ಬಗ್ಗೆ ಒಂದೆರೆಡು ಒಳ್ಳೆ ಮಾತಾಡಲು ಬಯಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಅವರ ಮನಸ್ಸಿನಲ್ಲಿ ಏನಿತ್ತೋಗೊತ್ತಿಲ್ಲ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರು. ಆದರೆ ಜೆಡಿಎಸ್ ಪಕ್ಷದ ಕೆಲವು ನಾಯಕರು ನನ್ನ ಕುಮಾರಸ್ವಾಮಿ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲು ಪ್ರಯತ್ನಿಸಿದ್ದರು, ಅದು ಕೂಡ ಸಫಲವಾಗಿಲ್ಲ, ನಂತರದ ದಿನ ಚುನಾವಣೆಗೆ ಸಂಬಂಧಿಸಿದ ನನ್ನ ಸಂಪರ್ಕಿಸಿದ ಆನಂತರ ಕುಮಾರಸ್ವಾಮಿ ಅವರು ಯಾವುದೇ ವಿಚಾರದ ಬಗ್ಗೆ ನನ್ನ ಹತ್ತಿರ ಚರ್ಚೆ ಮಾಡಿಲ್ಲ ಎಂದಿದ್ದಾರೆ.
ಬಹಳ ಸಮಯದ ಹಿಂದೆಯೇ ಪಕ್ಷ ತೊರೆಯುವ ತೀರ್ಮಾನ ಕೈಗೊಂಡಾಗ, ಸ್ಥಳೀಯ ಮುಖಂಡರು, ಪಕ್ಷದ ಅಭಿಮಾನಿಗಳು ಪಕ್ಷ ಬಿಡಬೇಡಿ ಎಂದಿದ್ದರು, ಆಗ ಸುಮ್ಮನ್ನಾಗಿದ್ದೆ, ಉಪಚುನಾವಣೆ ಸಂಧರ್ಭದಲ್ಲಿ ಆಸಕ್ತಿಯಿಲ್ಲದಿದ್ದರು, ಮುಖಂಡರ ಒತ್ತಾಯದ ಮೇರೆಗೆ ಚುನಾವಣಾ ಕಾರ್ಯದಲ್ಲಿ ಭಾಗವಹಿಸಿದ್ದೆ, ಅದಾದ ನಂತರ ರಾಜಕೀಯವೇ ಬೇಡವೆಂದು ದೂರವಿದ್ದೆ, ಇದೀಗಾ ಕಾಂಗ್ರೆಸ್ ನಾಯಕರ ಕೋರಿಕೆ ಹಾಗು ಜೆಡಿಎಸ್ ಪಕ್ಷದದಲ್ಲಿ ಕುಮಾರಸ್ವಾಮಿಯವರು ನನ್ನ ಮೇಲೆ ಉದಾಸೀನತೆ ತೋರಿದ್ದರಿಂದ ಜೆಡಿಎಸ್ ತೊರೆದು ಯಾವುದೇ ಆಕಾಂಕ್ಷೆಯಿಲ್ಲದೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದೇನೆಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಕಾರಣ ಡಿಕೆ ಶಿವಕುಮಾರ್ ಮತ್ತು ಸುರೇಶ್ ಅವರ ಕ್ರಿಯಾಶೀಲತೆ, ಹೋರಾಟ ಗಮನಿಸಿ ಕಾಂಗ್ರೆಸ್ ಸೇರಲು ಇಚ್ಚಿಸಿದ್ದು ಎಂದು ಕೆ ರಾಜಣ್ಣಾ ತಿಳಿಸಿದ್ದಾರೆ.