ಬಿಗ್ ಬಾಸ್ ಕನ್ನಡ ಸೀಸನ್(Bigg Boss Kannada) 12ರ ಆಟ ಈಗೀಗ ರೋಚಕ ಹಂತಕ್ಕೆ ತಲುಪುತ್ತಿದ್ದು, ಒಂದಿಷ್ಟು ಸ್ಪರ್ಧಿಗಳು ಶತಾಯಗತಾಯ ಕೊಟ್ಟ ಟಾಸ್ಕ್‌ನಲ್ಲಿ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಈ ವಾರ ಜೋಡಿ ಟಾಸ್ಕ್ ನೀಡಲಾಗಿದ್ದು, ಈ ವಾರ ಅತಿ ಹೆಚ್ಚು ಆಟ ಗೆದ್ದ ಜೋಡಿ ಮುಂದಿನ ವಾರ ಮನೆಯ ಕ್ಯಾಪ್ಟನ್ ಆಗಲಿದೆ.

ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ಎರಡು ಟಾಸ್ಕ್‌ನಲ್ಲಿ ಮೊದಲ ಆಟವನ್ನು ರಕ್ಷಿತಾ(Rakshitha) ಹಾಗೂ ಮಾಳು(Malu) ಜೋಡಿ ಗೆದ್ದರೆ, ಎರಡನೇ ಟಾಸ್ಕ್‌ಅನ್ನು ರಘು(Raghu) ಹಾಗೂ ಅಶ್ವಿನಿ ಗೌಡ(Ashwini Gowda) ಜೋಡಿ ಗೆದ್ದಿದೆ. ಇಂದು ಮೂರನೇ ಹಾಗೂ ಕೊನೆಯ ಟಾಸ್ಕ್ ಆಗಿದ್ದು ಇಂದು ಸ್ಪರ್ಧಿಗಳಿಗೆ ಕೋಲಿನ ಸಹಾಯದಿಂದ ಚಂಡನ್ನು ಸಾಗಿಸುವ ಟಾಸ್ಕ್ ನೀಡಲಾಗಿದೆ.

ಈ ವೇಳೆ ಯಾರಿಗೂ ಜೋಡಿಯಾಗದೇ ಒಂಟಿಯಾಗಿದ್ದ ಧ್ರುವಂತ್ ಉಸ್ತುವಾರಿ ವಹಿಸಿದ್ದು, ರಕ್ಷಿತಾ ಹಾಗೂ ಮಾಳು ಜೋಡಿಗೆ ಉಸ್ತುವಾರಿ ಮಾಡಿದ್ದಾರೆ. ಈ ವೇಳೆ ಧ್ರುವಂತ್ ಹಾಗೂ ರಕ್ಷಿತಾ ನಡುವೆ ಮಾತಿನ ಚಕಮಕಿ ನಡೆದಿದ್ದು, ಧ್ರುವಂತ್ ಉಸ್ತುವಾರಿಯಿಂದ ತಾಳ್ಮೆ ಕಳೆದುಕೊಂಡ ರಕ್ಷಿತಾ ಶೆಟ್ಟಿ ಕೂಗಾಡಿ ನೀರು ಎರಚಾಡಿದ್ದಾರೆ. ಈ ಮೂಲಕ ರಕ್ಷಿತಾ ಶೆಟ್ಟಿ ತಮ್ಮ ಕೈಯಾರೆ ಆಟ ಹಾಳು ಮಾಡಿಕೊಂಡರಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೇ ಈ ವಾರದ ನಾಮೀನೆಷನ್‌ನಲ್ಲಿಯೂ ರಕ್ಷಿತಾ ಶೆಟ್ಟಿ ಕೊಟ್ಟ ಕಾರಣ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.












