ರಾಜೀವ್ ಚಂದ್ರಶೇಖರ್.. ಕೇರಳ ಮೂಲದ ಉದ್ಯಮಿ ಕಮ್ ಪೊಲಿಟಿಷಿಯನ್. ಕರ್ನಾಟಕದಿಂದ ಎರಡು ಬಾರಿ ರಾಜಗ್ಯಸಭೆಗೆ ಆಯ್ಕೆ ಆಗಿದ್ದರು. ಎಂದೂ ಕರ್ನಾಟಕದ ಬಗ್ಗೆ ಮಾತನಾಡಿದ್ದು ಕಂಡು ಬರಲಿಲ್ಲ. ಆದರೆ ಈ ಬಾರಿ ಲೋಕಸಭಾ ಚುನಾವಣೆಗೆ ಕೇರಳದ ತಿರುವನಂತಪುರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಏನಂದರೆ ರಾಜೀವ್ ಚಂದ್ರಶೇಖರ್ (Rajeev Chandrashekar) ಹೆಸರಲ್ಲಿ ಇದ್ದಂತಹ ಆಸ್ತಿ ಇದ್ದಕ್ಕಿದ್ದಂತೆ ಕಡಿಮೆ ಆಗಿದ್ದು ಹೇಗೆ..? ಎನ್ನುವುದು. ಕೇರಳದಲ್ಲಿ ನಾಮಪತ್ರ ಸಲ್ಲಿಕೆ ಮಾಡುವಾಗ ಸಲ್ಲಿಸಿರುವ ಅಫಿಡವಿಟ್ನಲ್ಲಿ ತನ್ನ ಆಸ್ತಿ 36 ಕೋಟಿ ರೂಪಾಯಿಗಳು ಮಾತ್ರ ಎಂದಿದ್ದಾರೆ. ಇದು ಹೇಗೆ ಸಾಧ್ಯ..?
ಕರ್ನಾಟಕದಲ್ಲಿ ಏಷ್ಯಾ ನೆಟ್ ಸುವರ್ಣ ನ್ಯೂಸ್ ಒಡೆತನ ಹೊಂದಿರುವ ರಾಜೀವ್ ಚಂದ್ರಶೇಖರ್ ಆಸ್ತಿ ಸರಿ ಸುಮಾರು 8 ಸಾವಿರ ಕೋಟಿ ರೂಪಾಯಿಗಳು ಎಂದು ಅಂದಾಜಿಸಿರುವ ಕೇರಳ ಕಾಂಗ್ರೆಸ್ (Congress) ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸುಳ್ಳು ಅಫಿಡವಿಟ್ (Fake Affidavit) ಸಲ್ಲಿಕೆ ಮಾಡಿದ್ದಾರೆ ಎನ್ನುವುದು ಕೇರಳ ಕಾಂಗ್ರೆಸ್ ಆರೋಪ. ಷೇರು ಬಂಡವಾಳ, ಬಾಂಡ್ಸ್ ಮೇಲಿನ ಹೂಡಿಕೆ, ಡಿಬೆಂಚರ್ಸ್ (ಸಾಲಪತ್ರ)ಗಳ ಬಗ್ಗೆ ಬೇರೆ ಬೇರೆ ರೀತಿಯ ಲೆಕ್ಕ ತೋರಿಸಿದ್ದಾರೆ. ಒಂದು ಕಡೆ 9 ಕೋಟಿ ಎಂದು ಹೇಳಿದ್ರೆ ಮತ್ತೊಂದು ಕಡೆ 13 ಕೋಟಿ ಮಾತ್ರ ಎಂದಿದ್ದಾರೆ ಎಂದು ಕೇರಳ (Kerala) ಕಾಂಗ್ರೆಸ್ ದೂರಿದೆ.
ತನ್ನ ಒಡೆತನದ ಆಸ್ತಿಯನ್ನು ಘೋಷಣೆ ಮಾಡಿಕೊಳ್ಳದೆ ರಾಜೀವ್ ಚಂದ್ರಶೇಖರ್ ಆಸ್ತಿಯನ್ನು ಕಡಿಮೆ ಎನ್ನುವಂತೆ ತೋರಿಸಿಕೊಂಡಿದ್ದಾರೆ ಎಂದಿರುವ ಕೇರಳ ಕಾಂಗ್ರೆಸ್, ಕೋರಮಂಗಲದ ನಿವಾಸದ ಸ್ಥಳದಲ್ಲೇ ಕೋಟಿ ಕೋಟಿ ಬೆಲೆ ಬಾಳುವ ಎರಡು ಸೈಟ್ಗಳ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಒಂದು 9,600 ಚದರ ಅಡಿ ಹಾಗು ಮತ್ತೊಂದು 3,500 ಚದರ ಅಡಿ ಅಳತೆಯ ಸೈಟ್ಗಳಿವೆ. ಲ್ಯಾಂಬೋರ್ಗಿನಿ (Complaint) ಕಾರು ಹೊಂದಿದ್ದಾರೆ. ಪ್ರೈವೇಟ್ ಜೆಟ್ ಇಟ್ಟುಕೊಂಡಿದ್ದಾರೆ. ಹತ್ತಾರು ಮೋಟಾರ್ ಬೈಟ್ ಹೊಂದಿದ್ದಾರೆ. ಜುಪಿಟರ್ ಕ್ಯಾಪಿಟಲ್, BPL ಟೆಲಿಕಾಂ ಸೇರಿದಂತೆ ಸಾಕಷ್ಟು ಕಡೆ ಹೂಡಿಕೆ ಮಾಡಿದ್ದ ಬಗ್ಗೆ ಮಾಹಿತಿ ಇತ್ತು. ಮಾಧ್ಯಮಗಳಲ್ಲೂ ಬಂದಿತ್ತು. ಆದರೆ ಈ ಬಗ್ಗೆ ಎಲ್ಲಿಯೂ ಉಲ್ಲೇಖ ಮಾಡದೆ ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗ್ತಿದೆ. (Complaint)
ಜುಪಿಟರ್ ಗ್ಲೋಬಲ್( jupiter global), ವೆಕ್ಟ್ಟ್ರಾ ಕನ್ಸಲ್ಟೆನ್ಸಿ, RC ಸ್ಟಾಕ್, RC ಅಡ್ವೈಸರ್ಸ್ನಲ್ಲಿ ಘೋಷಣೆ ಮಾಡಿಕೊಂಡಿರುವ ಆಸ್ತಿ ಮೌಲ್ಯ ನೂರಾರು ಕೋಟಿ ರೂಪಾಯಿ ಆಗಿದೆ. ಆದರೆ ಅಫಿಡವಿಟ್ನಲ್ಲಿ ಸಲ್ಲಿಸಿರುವ ಮಾಹಿತಿ ಕೆಲವೇ ಕೆಲವು ಕೋಟಿಗಳು ಮಾತ್ರ. ಇದೆಲ್ಲವೂ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಎಂದಿದೆ ಕೇರಳ ಕಾಂಗ್ರೆಸ್. ಈ ಬಗ್ಗೆ ಚುನಾವಣಾ ಆಯೋಗಕ್ಕೂ (Complaint) ದೂರು ನೀಡಲಾಗಿದೆ. ಆದರೆ ಇಲ್ಲೀವರೆಗೂ ಯಾವುದೇ ಕ್ರಮ ಆಗಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಇದಕ್ಕೆ ಅಲ್ಲವೇ ಕಾಂಗ್ರೆಸ್ ಪಕ್ಷ ಮೋದಿ (Nareandra modi) ಅವರ ‘ಬಿಜೆಪಿ ವಾಷಿಂಗ್ ಮಷೀನ್’ ಎಂದು ಲೇವಡಿ ಮಾಡಿದ್ದು..? ಬಿಜೆಪಿ ನಾಯಕರು ಏನು ಮಾಡಿದರೂ ಅಲ್ಲವೂ ಒಪ್ಪಿತ.. ಬೇರೆಯವರನ್ನು ಮಾಡಿದಾಗ ಮಾತ್ರ ಬಂಧನ, ವಿಚಾರಣೆ ಅನ್ನೋ ಡ್ರಾಮಾ..?