ಅಬಕಾರಿ ನೀತಿ ಅಕ್ರಮ (Excise rule) ಪ್ರಕರಣದಲ್ಲಿ 9 ಬಾರಿ ಸಮ್ಮನ್ಸ್ ಜಾರಿ ಮಾಡಿದರು ವಿಚಾರಣೆಗೆ ಹಾಜರಾಗದ ಹಿನ್ನೆಲೆ , ಇಡಿ (ED) ದೆಹಲಿಯ ಸಿಎಂ ಅರವಿಂದ್ ಕೆಜರಿವಾಲರನ್ನ (Aravind kejriwal) ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿ , ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಲೋಕಸಭಾ ಚುನಾವಣೆಗೆ ಮುನ್ನ ಜಾಮೀನು ಪಡೆದು ಹೊರಬರುವ ನಿರೀಕ್ಷೆಯಲ್ಲಿದ್ದ ಅರವಿಂದ್ ಕೇಜ್ರಿವಾಲ್ ಗೆ ದೆಹಲಿ ಹೈಕೋರ್ಟ್ (delhi highcourt) ಶಾಕ್ ನೀಡಿದೆ. ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಜಾಮೀನಿಗಾಗಿ ಸಲ್ಲಿಸಿದ ಅರ್ಜಿಯನ್ನ ಹೈಕೋರ್ಟ್ ವಜಗೊಳಿಸಿದೆ ಆ ಮೂಲಕ ಅರವಿಂದ್ ಕೇಜ್ರಿವಾಳರ ಜೈಲುವಾಸ ಮುಂದುವರೆಯಲಿದೆ.

ಅಬಕಾರಿ ನೀತಿ (Excise policy) ಅಕ್ರಮ ಪ್ರಕರಣದಲ್ಲಿ ಮಾರ್ಚ್ 29ರಂದು ರಾತ್ರಿ ದೆಹಲಿ ಸಿಎಂ (Delhi Cm ) ಅರವಿಂದ್ ಕೇಜ್ರಿವಾಲ್ (Aravind Kejriwal) ರನ್ನ ಬಂಧಿಸಿದ್ದ ಇಡಿ ಅಧಿಕಾರಿಗಳು (ED officers) 7 ದಿನ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು. ನಂತರ ಕೋರ್ಟ್ ಮುಂದೆ ಹಾಜರು ಪಡಿಸಿದ್ದರು ಅಧಿಕಾರಿಗಳು 10 ದಿನ ಕಸ್ಟಡಿಗೆ ಕೇಳಿದ್ದರು. ಆದ್ರೆ ಕೋರ್ಟ್ 7 ದಿನ ಕಸ್ಟಡಿಗೆ ನೀಡಿತ್ತು.

ಈ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಿಂಗ್ ಪಿನ್ (King pin) ಎಂದು ಪ್ರತಿಪಾದಿಸಿದ್ದ ಇಡಿ, 10 ದಿನಗಳ ಕಸ್ಟಡಿಗೆ (10 days custody) ನೀಡಬೇಕು ಎಂದು ಕೋರ್ಟ್ ಬಳಿ ಕೇಳಿತ್ತು. ವಿಚಾರಣೆಯ ಸಂಧರ್ಬದಲ್ಲಿ ಕೇಜ್ರಿವಾಲ್ (Kejriwal) ಆರೋಗ್ಯದಲ್ಲಿ ಏರುಪೇರಾಗಿತ್ತು. ಇದ್ದಕ್ಕಿದ್ದ ಹಾಗೆ ಅವರ ಬಿಪಿ ಲೋ (Low BP) ಆಗಿದ್ದು ತಕ್ಷಣ ಇಡಿ ಅಧಿಕಾರಿಗಳು ಅವರನ್ನ ಆಸ್ಪತ್ರೆಗೆ ಕೊಂಡೊಯ್ದಿದ್ದರು.