ಬಿಗ್ ಬಾಸ್ (Bigboss) ಮಾಜಿ ಸ್ಪರ್ಧಿಗಳಾದ ರಜತ್, ವಿನಯ್ (Rajath & vinay) ಮಚ್ಚು ಹಿಡಿದು ರೀಲ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾನೂನು ಸಂಕಷ್ಟಕ್ಕೆ ಸಿಲುಕಿರುವ ಇಬ್ಬರೂ ಸದ್ಯ ಪರಪ್ಪನ ಅಗ್ರಹಾರ (Parapoana agrahara)ಜೈಲು ಸೇರಿದ್ದಾರೆ.

ಮಾರ್ಚ್ 25 ರ ರಾತ್ರಿ ಈ ಇಬ್ಬರನ್ನೂ ಬಂಧಿಸಿದ ಬಸವೇಶ್ವರ ನಗರ ಪೊಲೀಸರು 24 ನೇ ಎಸಿಜೆಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು ಈ ವೇಳೆ ಒಂದು ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.
ಇಂದು ಬೆಳಗ್ಗೆ ಮತ್ತೆ ನ್ಯಾಯಾಲಯದ ಮುಂದೆ ಈ ಇಬ್ಬರನ್ನು ಪೊಲೀಸರು ಹಾಜರುಪಡಿಸಲಿದ್ದು, ಕಸ್ಟಡಿ ಕೆಳಲಿದ್ದಾರೆ. ಈ ಬೆಳವಣಿಗೆಗಳ ಹಿನ್ನಲೆ ತಮ್ಮ ಪತಿಗಾಗಿ ಪೊಲೀಸ್ ಠಾಣೆ ಹಾಗೂ ಕೋರ್ಟ್ ಅಂತ ರತಾಜ್ ಪತ್ನಿ ಅಲೆದಾಡಿದ್ದು, ಪತಿ ಜೈಲಿಗೆ ಹೋಗೋದನ್ನ ಕಂಡು ಮರುಗಿದ ಪತ್ನಿ ಕಣ್ಣೀರು ಹಾಕಿದ್ದಾರೆ.

ರಜತ್ ಹಾಗೂ ವಿನಯ್ ರನ್ನ ಬಂಧಿಸಿದ ಬಳಿಕ ಕೋರಮಂಗಲದ ನ್ಯಾಯಾಧೀಶರ ಮನೆಗೆ ಇಬ್ಬರನ್ನೂ ಪೊಲೀಸರು ಹಾಜರುಪಡಿಸಿದ್ದ ವೇಳೆ ಜಡ್ಜ್ ನಿವಾಸದ ಬಳಿ ಬಂದಿದ್ದ ರಜತ್ ಪತ್ನಿ ನ್ಯಾಯಾಂಗ ಬಂಧನ ಆದೇಶ ತಿಳಿದು ಕಣ್ಣೀರು ಹಾಕಿ ದುಃಖ ವ್ಯಕ್ತಪಡಿಸಿದ್ದಾರೆ.