ರಾಜ್ಯ ಬಿಜೆಪಿ(Bjp) ಪಾಳಯದಲ್ಲಿ ಹೊಸ ಬೆಳವಣಿಗೆಯಾಗಿದ್ದು ಮೂವರು ಶಾಸಕರಿಗೆ ಬಿಜೆಪಿ ಹೈ ಕಮಾಂಡ್ (Bjp highcommand) ನೋಟೀಸ್ ಜಾರಿ ಮಾಡಿದೆ.ಒಟ್ಟು ಮೂರು ಶಾಸಕರು ಹಾಗೂ ಇಬ್ಬರು ಮಾಜಿ ಶಾಸಕರಿಗೆ ಕೇಸರಿ ಹೈಕಮ್ಯಾಂಡ್ ಶೋಕಾಸ್ ನೋಟಿಸ್ (Shokas notice) ಜಾರಿ 72 ಗಂಟೆ ಒಳಗೆ ಶೋಕಾಸ್ ನೊಟೀಸ್ ಗೆ ಉತ್ತರ ಕೊಡುವಂತೆ ಸೂಚನೆ ನೀಡಲಾಗಿದೆ.

ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಪಕ್ಷದಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿರುವ ನಾಯಕರಾದ ಎಸ್.ಟಿ ಸೋಮಶೇಖರ್, ಬಿ.ಪಿ ಹರೀಶ್, ಶಿವರಾಮ್ ಹೆಬ್ಬಾರ್, ಮಾಜಿ ಶಾಸಕ ಎಂ. ಪಿ ರೇಣುಕಾಚಾರ್ಯ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಬಿಜೆಪಿ ಹೈಕಮಾಂಡ್ ನೋಟಿಸ್ ನೀಡಿದೆ.

ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿಮಾಡಿದ್ದು,ಪಕ್ಷದ ಶಿಸ್ತು ಉಲ್ಲಂಘಿಸಿದ ಬಿಜೆಪಿ ನಾಯಕರ ವಿರುದ್ಧ ಶಿಸ್ತುಕ್ರಮಕ್ಕೆ ಹೈಕಮಾಂಡ್ ಮುಂದಾದಂತಿದೆ. ತಮ್ಮ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟೀಕರಣ ಕೇಳಿ ಶೋಕಾಸ್ ನೊಟೀಸ್ ನೀಡಲಾಗಿದೆ.