ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಸಾಮಾಜಿಕ ಮಾಧ್ಯಮ ಕಂಪನಿಯು ತನ್ನ ಅನುಯಾಯಿಗಳನ್ನು ಸೀಮಿತಗೊಳಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟರ್ ಮುಖ್ಯ ಕಾರ್ಯನಿರ್ವಾಹಕ ಕಚೇರಿ ಪರಾಗ್ ಅಗರವಾಲ್ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಎನ್ ಡಿ ಟಿವಿ ವರದಿ ಮಾಡಿದೆ.
ಡಿಸೆಂಬರ್ 27 ರಂದು ಬರೆದ ಪತ್ರದಲ್ಲಿ, ರಾಹುಲ್ ಗಾಂಧಿ ಅವರು ಅತ್ಯಂತ ಸಕ್ರಿಯವಾಗಿರುವ ತಮ್ಮ ಖಾತೆಯು ಸುಮಾರು 20 ಮಿಲಿಯನ್ ಅಥವಾ 2 ಕೋಟಿ ಅನುಯಾಯಿಗಳನ್ನು ಹೊಂದಿತ್ತು. ಪ್ರತಿದಿನ ಸರಾಸರಿ 8,000 ರಿಂದ 10,000 ಅನುಯಾಯಿಗಳು ಸೇರುತ್ತಿದ್ದರು. ಒಂದು ಉದಾಹರಣೆ ಉಲ್ಲೇಖಿಸುತ್ತಾ ಮೇ ತಿಂಗಳಲ್ಲಿ ತಮ್ಮ ಖಾತೆಯು 6.4 ಲಕ್ಷ ಹೊಸ ಅನುಯಾಯಿಗಳನ್ನು ಗಳಿಸಿದೆ ಎಂದು ತಿಳಿಸಿದ್ದಾರೆ.
ಫಾಲೋವರ್ಸ್ ಸಂಖ್ಯೆ ಕುಸಿತ
ನಂತರದ ದಿನಗಳಲ್ಲಿ ಏನೋ ವಿಚಿತ್ರ ಸಂಭವಿಸಿದೆ. ಆಗಸ್ಟ್ 2021 ರಿಂದ ನನ್ನ ಟ್ವೀಟರ್ ಅನುಯಾಯಿಗಳ ಸರಾಸರಿ ಸಂಖ್ಯೆ ಶೂನ್ಯಕ್ಕೆ ಕುಸಿದಿದೆ. ನನ್ನ ಟ್ವೀಟ್ಟರ್ ಖಾತೆಗೆ ಲಕ್ವಾ ಹೊಡೆದಂತೆ ತೋರುತ್ತಿದೆ. ಇದೇ ಅವಧಿಯಲ್ಲಿ ಅವರು ದಲಿತ ಬಾಲಕಿಯ ಅತ್ಯಾಚಾರ, ರೈತರ ಪ್ರತಿಭಟನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದಾಗಿ ರಾಹುಲ್ ಹೇಳಿದ್ದಾರೆ.
ನನ್ನ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ಸರ್ಕಾರವು ಒತ್ತಡ ಹೇರುತ್ತಿದೆ. ಟ್ವೀಟರ್ ಇಂಡಿಯಾದಲ್ಲಿ ಜನರು ವಿವೇಚನೆ ಅನುಗುಣವಾಗಿ ವಿಶ್ವಾಸಾರ್ಹತೆಯಿಂದ ಕೂಡದ ಮಾಹಿತಿಗಳನ್ನೇ ತಿಳಿಸಿದ್ದೇನೆ. ಆದರೂ ನನ್ನ ಟ್ವೀಟರ್ ಖಾತೆಯನ್ನು ಯಾವುದೇ ಕಾನೂನುಬದ್ಧ ಕಾರಣವಿಲ್ಲದೆ ನಿರ್ಬಂಧಿಸಲಾಗಿದೆ. ದೆಹಲಿಯ ಅತ್ಯಾಚಾರ, ಕೊಲೆ ಮತ್ತು ನಂತರ ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಹೇಳಲಾದ ಒಂಬತ್ತು ವರ್ಷದ ದಲಿತ ಬಾಲಕಿಯ ಕುಟುಂಬದ ಗುರುತನ್ನು ಬಹಿರಂಗಪಡಿಸುವ ಫೋಟೋವನ್ನು ಹಂಚಿಕೊಂಡಿದ್ದಕ್ಕಾಗಿ ಗಾಂಧಿಯವರ ಖಾತೆಯನ್ನು ಆಗಸ್ಟ್ ಆರಂಭದಲ್ಲಿ ಲಾಕ್ ಮಾಡಲಾಗಿದೆ. ಟ್ವೀಟರ್ ಒಂದು ವಾರದ ನಂತರ ಖಾತೆಯನ್ನು ಮತ್ತೆ ಸಕ್ರೀಯಗೊಳಿಸಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಸರ್ಕಾರ ಸೇರಿದಂತೆ ಇತರ ಬೇರೆ ಬೇರೆ ಟ್ವೀಟರ್ ಹ್ಯಾಂಡಲ್‌ಗಳು ಅದೇ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಆದರೆ ಅವುಗಳನ್ನು ನಿರ್ಬಂಧಿಸಲಾಗಿಲ್ಲ ಎಂದು ಕಾಂಗ್ರೆಸ್ ನಾಯಕರು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.
ಶತಕೋಟಿ ಭಾರತೀಯರ ಪರವಾಗಿ ಈ ಪತ್ರ
ಭಾರತದಲ್ಲಿ ಟ್ವೀಟರ್ ಒಂದು ನಗಣ್ಯವಾಗದಂತೆ ತಡೆಯಲು ನಾನು ಶತಕೋಟಿಗೂ ಹೆಚ್ಚು ಭಾರತೀಯರ ಪರವಾಗಿ ನಿಮಗೆ ಪತ್ರ ಬರೆಯುತ್ತಿದ್ದೇನೆ ಎಂದು ಗಾಂಧಿ ತಿಳಿಸಿದ್ದಾರೆ.
ಟ್ವೀಟರ್ ಭಾರತದಲ್ಲಿ ನಿರಂಕುಶಾಧಿಕಾರದ ಬೆಳವಣಿಗೆಗೆ ಸಕ್ರಿಯವಾಗಿ ಸಹಾಯ ಮಾಡುವುದಿಲ್ಲ. ಅಗಾಧವಾದ ಜವಾಬ್ದಾರಿ ಟ್ವೀಟರ್ ಮೇಲಿದೆ. ಕೆಲವು ತಾಂತ್ರಿಕ ತೊಡಕುಗಳಿಂದ ಅನುಯಾಯಿಗಳ ಸಂಖ್ಯೆಯಲ್ಲಿ ಬದಲಾವಣೆಗಳಾಗುತ್ತವೆ ಎಂದು ಟ್ವೀಟರ್ ವಕ್ತಾರರು ʼದಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ತಿಳಿಸಿದ್ದಾರೆ. Twitter ನ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರತಿ ವಾರ ಲಕ್ಷಾಂತರ ಖಾತೆಗಳನ್ನು ತೆಗೆದುಹಾಕಲಾಗುತ್ತದೆ ಎಂದು ವಿವರಿಸಿದ್ದಾರೆ.
ರಾಹುಲ್ ಗಾಂಧಿಯವರ ಕಚೇರಿಯ ಡಿಜಿಟಲ್ ಸಂವಹನವನ್ನು ನಿರ್ವಹಿಸುವ ಉಸ್ತುವಾರಿ ಶ್ರೀವತ್ಸ ವೈಬಿ ಅವರು ಈ ವಿವರಣೆಯನ್ನು ತಿರಸ್ಕರಿಸಿದ್ದು, “ಇದು ಸಂಪೂರ್ಣ ವಿವರಣಾತ್ಮಕ ಅಥವಾ ತೃಪ್ತಿದಾಯಕ ಪ್ರತಿಕ್ರಿಯೆಯಲ್ಲ” ಎಂದಿದ್ದಾರೆ.


