ಬೆಂಗಳೂರಿನಲ್ಲಿ (Bengaluru) ಗೂಡ್ಸ್ ಆಟೋ ಒಂದು ಹಿಂಬದಿಯಿಂದ ಬಂದು ರಾಹುಲ್ ದ್ರಾವಿಡ್ (Rahul dravid) ಅವರ ಕಾರಿಗೆ ಟಚ್ ಮಾಡಿರುವ ಘಟನೆ ಇಂದು (ಫೆ ೪) ನಡೆದಿದೆ.ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ (Cunning ham road) ಸಂಜೆ ಈ ಘಟನೆ ನಡೆದಿದ್ದು, ಕಾರ್ ಗೆ ಆಟೋ ಟಚ್ ಆದ ಬಳಿಕ ಕಾರಿನಿಂದ ಕೆಳಗಿಳಿದು ರಾಹುಲ್ ದ್ರಾವಿಡ್ ತಮ್ಮ ಕಾರನ್ನು ಪರಿಶೀಲಿಸಿದ್ದಾರೆ.
ಈ ವೇಳೆ ರಾಹುಲ್ ದ್ರಾವಿಡ್ ಮತ್ತು ಗೂಡ್ಸ್ ಆಟೋ ಚಾಲಕನ ಮಧ್ಯೆ ಸಣ್ಣ ವಾಗ್ವಾದ ಕೂಡ ನಡೆದಿದೆ. ಆದ್ರೆ ರಾಹುಲ್ ದ್ರಾವಿಡ್ ಬಹಳ ಸಂಯಮದಿಂದಲೇ ವರ್ತಿಸಿದ್ದಾರೆ. ಹೈ ಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯದ ಮಾಹಿತಿಯ ಪ್ರಕಾರ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ.
ಇಂದು ಸಂಜೆ 6.30 ಕ್ಕೆ ನಡೆದಿರೋ ಘಟನೆ ಎನ್ನಲಾಗಿದ್ದು, ಇಂಡಿಯನ್ ಎಕ್ಸ್‌ಪ್ರೆಸ್ ನಿಂದ ಹೈಗ್ರೌಂಡ್ ಕಡೆ ಹೋಗುವಾಗ ಘಟನೆ ನಡೆದಿದೆ. ಟ್ರಾಫಿಕ್ ಜಾಮ್ ಇದ್ದಾಗ ನಿಂತಿದ್ದ ಕಾರಿಗೆ ಆಟೋ ಡಿಕ್ಕಿಯಾಗಿದೆ ಎನ್ನಲಾಗಿದೆ. ಮಾತುಕತೆ ಬಳಿಕ ಆಟೋ ಚಾಲಕನ ನಂಬರ್ ಪಡೆದು ದ್ರಾವಿಡ್ ಅಲ್ಲಿಂದ ತೆರಳಿದ್ದಾರೆ.