ರಾಜ್ಯದಲ್ಲಿ ಸದ್ಯಕ್ಕೆ ಮಾತ್ರ ಸಿಎಂ ಬದಲಾವಣೆ (Cm seat sharing) ಚರ್ಚೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಒಂದೋ ಸ್ವತಃ ಕಾಂಗ್ರೆಸ್ ನಾಯಕರಿಂದ (Congress leaders) ಅಥವಾ ವಿರೋಧ ಪಕ್ಷಗಳಿಂದ ಈ ಚರ್ಚೆ ಸದಾ ಜೀವಂತವಾಗಿದೆ. ಇದೀಗ ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R ashok) ರಾಜಕೀಯ ಭವಿಷ್ಯ ನುಡಿಯುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ (Cm siddaramaiah) ಸಿಎಂ ಸ್ಥಾನ ತ್ಯಜಿಸುವುದು ಸತ್ಯ, ಡಿಕೆ ಶಿವಕುಮಾರ್ (Dk Shivakumar) ಅವರ ಸ್ಥಾನವನ್ನು ಆಕ್ರಮಿಸಿಕೊಳ್ಳುವುದು ಕೂಡ ಸತ್ಯ. ರಾಜ್ಯದಲ್ಲಿ ನವೆಂಬರ್ ತಿಂಗಳಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂದು ವಿಪಕ್ಷ ನಾಯಕ ಅಶೋಕ್ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಆದ್ರೆ ಇದಕ್ಕೂ ಮುನ್ನ ಇದೇ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೇಯೇ ಇಲ್ಲ ಎಂದು ಸಾರಾಸಗಟಾಗಿ ತಳ್ಳಿಹಾಕಿದ್ದು, ಅಧಿಕಾರ ಹಂಚಿಕೆಯ ಚರ್ಚೆ ಕಾವು ಹೆಚ್ಚಾಗಿದೆ. ಈ ಮಧ್ಯೆ ಆರ್ ಅಶೋಕ್ ಹೇಳಿಕೆ ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಮೂಡಿಸುವಲ್ಲಿ ಯಶಸ್ವಿಯಾಗಿದೆ.