
ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ 2025ರ ಕೇಂದ್ರ ಬಜೆಟ್‌ನಲ್ಲಿ ₹1.28 ಲಕ್ಷ ಕೋಟಿ ಅನುದಾನ ನೀಡಲಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 6.65% ಹೆಚ್ಚಳವಾಗಿದೆ. ಈ ಮಹತ್ವದ ಹೂಡಿಕೆಯಿಂದ ಶೈಕ್ಷಣಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು, ಕೃತಕ ಬುದ್ಧಿಮತ್ತೆ (AI) ಸಂಯೋಜನೆ ಮಾಡುವುದು ಹಾಗೂ IITಗಳು ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳ ಸಾಮರ್ಥ್ಯವನ್ನು ವಿಸ್ತರಿಸುವುದು ಉದ್ದೇಶಿಸಲಾಗಿದೆ.

ಉನ್ನತ ಶಿಕ್ಷಣ ಇಲಾಖೆಗೆ ₹50,067 ಕೋಟಿ ಹಾಗೂ ಪಠಶಾಲಾ ಶಿಕ್ಷಣ ಇಲಾಖೆಗೆ ₹78,572 ಕೋಟಿ ಅನುದಾನ ಹಂಚಲಾಗಿದೆ. ಈ ಬಜೆಟ್‌ನ ಪ್ರಮುಖ ಯೋಜನೆಯೆಂದರೆ “ಭಾರತೀಯ ಭಾಷಾ ಪುಸ್ತಕ” (Bharatiya Bhasha Pushtak) ಯೋಜನೆ, ಇದು ಭಾರತೀಯ ಭಾಷೆಗಳ ಪಠ್ಯಪುಸ್ತಕಗಳ ಡಿಜಿಟಲ್ ಆವೃತ್ತಿಗಳನ್ನು ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒದಗಿಸುವುದು. ಜೊತೆಗೆ, IIT ಪಾಟ್ನಾದ ವಿಸ್ತರಣೆ ಮತ್ತು ಹೊಸ ಐದು IITಗಳ ಅಭಿವೃದ್ದಿಗೆ ಮೂಲಸೌಕರ್ಯ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ, ಇದರಿಂದ ಹೆಚ್ಚುವರಿ 6,500 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಲಭಿಸಲಿದೆ.

ಸರ್ಕಾರ ಮುಂದಿನ ವರ್ಷದಲ್ಲಿ 10,000 ಹೊಸ ವೈದ್ಯಕೀಯ ಆಸನಗಳನ್ನು ಮತ್ತು ಮುಂದಿನ ಐದು ವರ್ಷಗಳಲ್ಲಿ ಒಟ್ಟು 75,000 ವೈದ್ಯಕೀಯ ಆಸನಗಳನ್ನು ಹೆಚ್ಚಿಸಲು ಯೋಜಿಸಿದೆ. ಇದಲ್ಲದೆ, IITಗಳು ಹಾಗೂ IIScನಲ್ಲಿ ತಂತ್ರಜ್ಞಾನ ಸಂಶೋಧನೆಗೆ 10,000 ಫೆಲೋಶಿಪ್‌ಗಳನ್ನು ನೀಡಲಾಗುವುದು.ಒಟ್ಟಿನಲ್ಲಿ, ಈ ಬಜೆಟ್ ಭಾರತದ ಶಿಕ್ಷಣ ಕ್ಷೇತ್ರದ ಗುಣಮಟ್ಟವನ್ನು ಉತ್ತಮಗೊಳಿಸಲು, ಹೊಸ ತಂತ್ರಜ್ಞಾನಗಳ ಅನುಷ್ಠಾನಕ್ಕೆ ಪ್ರೋತ್ಸಾಹ ನೀಡಲು ಹಾಗೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಬಲ ಶಿಕ್ಷಣ ಅವಕಾಶ ಕಲ್ಪಿಸಲು ಮಹತ್ತರ ಹೆಜ್ಜೆಯಾಗಿದೆ.






