ಕತಾರ್ ಏರ್‌ವೇಸ್ ಭಾರತಕ್ಕೆ ಉಚಿತವಾಗಿ ಸಹಾಯವನ್ನು ನೀಡಲಿದೆ: ಕತಾರ್ ಏರ್‌ವೇಸ್ CEO ಅಲ್ ಬಾಕರ್

ಯಾರಾದರು ಸಮಸ್ಯೆಯಿಂದ ಬಳಲುತ್ತಿದ್ದರೆ ಮನುಷ್ಯರಾದ ನಾವು ಸಹಾಯ ಮಾಡುವುದು ಮಾನವೀಯತೆಯಲ್ಲವೇ: ಕತಾರ್ ಏರ್‌ವೇಸ್ ನ ಸಿಇಒ ಅಕ್ಬರ್ ಅಲ್ ಬಾಕಲ್

ಇಡೀ ಭಾರತಕ್ಕೆ ಭಾರತವೇ ಕರೋನ ಮಹಾಮಾರಿಯಿಂದ ತತ್ತರಿಸುತ್ತಿರಿಸುತ್ತಿರುವುದು ಒಂದುಕಡೆಯಾದರೆ, ಮತ್ತೊಂದು ಕಡೆ ಕರೋನ ವಿರುದ್ಧ ಹೋರಾಡಲು ಸೂಕ್ತ ಮೆಡಿಕಲ್ ಸಲಕರಣೆಗಳಲ್ಲದೆ ಜನಸಾಮಾನ್ಯರು ಮೃತಪಡುತ್ತಿದ್ದಾರೆ. ಇಡೀ ದೇಶಕ್ಕೆ ದೇಶವೇ ಆಕ್ಸಿಜನ್, ವೆಂಟಿಲೇಟರ್, ಪಿಪಿಇ ಕಿಟ್, ಮಾಸ್ಕ್ ಅಭಾವ ಉತ್ತುಂಗಕ್ಕೇರಿರು ಸಮಯದಲ್ಲಿ ಕತಾರ್ ಏರ್‌ವೇಸ್ ಭಾರತಕ್ಕೆ ವೈದ್ಯಕೀಯ ಸಲಕರಣೆಗಳ ಸಹಾಯ ನೀಡಿದ್ದಲ್ಲದೆ ಭಾರತಕ್ಕೆ ಉಚಿತವಾಗಿ ಸಹಾಯ ಸಾಮಾಗ್ರಿಗಳನ್ನು ವಿತರಿಸುವುದನ್ನು ಮುಂದುವರಿಸುವಿದಾಗಿ ಕತಾರ್ ಏರ್‌ವೇಸ್ ನ ಸಿಇಒ ಅಕ್ಬರ್ ಅಲ್ ಬಾಕಲ್ ಅವರು ತಿಳಿಸಿದ್ದಾರೆ.

ಹೌದು ಕತಾರ್ ಏರ್‌ವೇಸ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಕ್ಬರ್ ಅಲ್ ಬಾಕರ್ ಅವರು ಕತಾರ್ ಏರ್ವೇಸ್ ಭಾರತಕ್ಕೆ ಉಚಿತವಾಗಿ ಸಹಾಯ ಸಾಮಗ್ರಿಗಳನ್ನು ವಿತರಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಭಾರತಕ್ಕೆ ನೆರವು ಸರಕುಗಳನ್ನು ತಲುಪಿಸಲು ಹೊರಟಿರುವ ಮೂರು ವಿಮಾನಗಳು ಮಾತ್ರವಲ್ಲ, ವಿಶ್ವದ ಯಾವುದೇ ಮೂಲೆಯಿಂದ ಬೇಕಾದ್ರೂ ಭಾರತಕ್ಕೆ ತಲುಪಿಸಬೇಕಾದ ಸಹಾಯವನ್ನು ನಮ್ಮ ಕತಾರ್ ಏರ್ವೇಸ್ ಉಚಿತವಾಗಿ ಕೊಂಡೊಯ್ಯಲಿದೆ ” ಎಂದು ಕತಾರ್ನ ಖಾಸಗಿ ವಾಹಿನಿಯಾದ ಸ್ಕೈ ನ್ಯೂಸ್ ಜೊತೆ ಮಾತನಾಡಿದ ಅವರು ಹೇಳಿದ್ದಾರೆ. ಸಂದರ್ಶನದ ವೀಡಿಯೋವನ್ನು ಕತಾರ್ ಏರ್ವೇಸ್ ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ.

ಅವರ ಪ್ರಕಾರ ‘ಕತಾರ್ ಏರ್-ವೇಸ್ ಪ್ರಸ್ತುತ ವಿಶ್ವದ ಯಾವುದೇ ಭಾಗದಿಂದ ಮಾನವೀಯ ನೆಲೆಯಲ್ಲಿ ಭಾರತಕ್ಕೆ ಸಿಗುತ್ತಿರುವ ಆಕ್ಸಿಜನ್, ಪಿಪಿಇ ಕಿಟ್, ವೈದ್ಯಕೀಯ ಉಪಕರಣಗಳು ಇತ್ಯಾದಿಗಳನ್ನು ಉಚಿತವಾಗಿ ರವಾನಿಸಲು ಉದ್ದೇಶಿಸಿದೆ.’ ಹೌದು ಕತಾರ್ ನ ವಿಮಾನಯಾನ ಸಂಸ್ಥೆ ಯಾವುದೇ ಹಣ ತೆಗೆದುಕೊಳ್ಳದೇ ವಿಶ್ವದ ಯಾವುದೇ ಮೂಲೆಯಿಂದ ಬೇಕಾದ್ರೂ ಭಾರತಕ್ಕೆ ತಲುಪಿಸಬೇಕಾದ ಸಹಾಯವನ್ನು ತಲುಪಿಸಲಿದೆ.

ನಾವು ಭಾರತದೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದೇವೆ ಮತ್ತು ಉಪಖಂಡದ ದೇಶಗಳಿಗೆ ಸಹಾಯ ಮಾಡಲು ನಾವು ಯಾವಾಗಲೂ ಜೊತೆ ಇರುತ್ತೇವೆ. ನಾವು ಭಾರತದೊಂದಿಗೆ ಬಹಳ ಹಿಂದಿನಿಂದಲೂ ಆರ್ಥಿಕ ಮತ್ತು ರಾಜಕೀಯ ಸಂಬಂಧವನ್ನು ಹೊಂದಿದ್ದೇವೆ. ನಮ್ಮ ಸ್ನೇಹಿತರ ಅಗತ್ಯತೆಗಳ ಸಮಯದಲ್ಲಿ ಯಾವಾಗಲೂ ಇರುವುದೇ ನಮ್ಮ ಕತಾರ್ ಏರ್ಲೈನ್ಸ್ ಸಂಸ್ಕೃತಿಯಾಗಿದೆ ಎಂದು ತಿಳಿಸಿದ್ದಾರೆ.

ಯಾರಾದರು ಸಮಸ್ಯೆಯಿಂದ ಬಳಲುತ್ತಿದ್ದರೆ ಮನುಷ್ಯರಾದ ನಾವು ಸಹಾಯ ಮಾಡುವುದು ಮಾನವೀಯತೆಯಲ್ಲವೇ ಎಂದು ತಿಳಿಸಿದ್ದಾರೆ

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...