ಕಿಡಿ ಹೊತ್ತಿದ ರಾಜಕಾರಣ, ಕಾಂಗ್ರೆಸ್ ಸರ್ವ ಸದಸ್ಯರ (Congress all members meeting) ಸಭೆ, ಈ ಇಲ್ಲದ ಮಧ್ಯೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish jarakiholi) ಕೊಂಚ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ತಮ್ಮ ಬ್ಯುಸಿ ಷೆಡ್ಯೂಲ್ ನಿಂದ ಬ್ರೇಕ್ ತಗೊಂಡು, ಮೈದಾನಕ್ಕಿಳಿದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish jarakiholi) ಕ್ರಿಕೆಟ್ ಆಟವಾಡಿದ್ದಾರೆ.
ಈ ವೇಳೆ ಸಚಿವ ಸಂತೋಷ್ ಲಾಡ್ (Santosh lad), ಶಾಸಕ ಚಿಕ್ಕಮಾದು ಸೇರಿದಂತೆ ಪಕ್ಷದ ಹಲವರು ಸಚಿವ ಸತೀಶ್ ಜಾರಕಿಹೊಳಿಗೆ ಸಾಥ್ ನೀಡಿದ್ದಾರೆ.ನ್ಯೂಬಿಇಎಲ್ ರಸ್ತೆಯಲ್ಲಿರುವ (New BEL road) ಕ್ರಿಕೆಟ್ ಮೈದಾನದಲ್ಲಿ ಹೀಗೆ ಬಿಂದಾಸ್ ಆಟವಾಡಿ ಸತೀಶ್ ಜಾರಕಿಹೊಳಿ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ.
ನಿನ್ನೆ ರಾತ್ರಿ ನಡೆದ ಸಿಎಲ್‌ಪಿ ಸಭೆಯಲ್ಲಿ (CLP meeting) ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಸಾಹುಕಾರ್ ತಿರುಗಿಬಿದ್ದಿದ್ದರು.ಡಿಸಿಸಿ ಕಟ್ಟಡ ನಿರ್ಮಾಣ ಸಂಬಂಧ ಅಸಮಾಧಾನ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.