ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi hebbalkar) ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಿಚಿತ ಕಂಟೇನರ್ (Container) ವಾಹನ ಚಾಲಕನ ವಿರುದ್ಧ FIR ದಾಖಲು ಮಾಡಲಾಗಿದೆ.ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಸಚಿವೆ ಹೆಬ್ಬಾಳ್ಕರ್ ಕಾರು ಚಾಲಕ ಶಿವಾನಂದ ನೀಡಿದ ದೂರು ಅನ್ವಯ ಈ ಎಫ್ ಐ ಆರ್ (FIR) ಹಾಕಲಾಗಿದೆ.

ಬೆಳಿಗ್ಗೆ ಐದು ಗಂಟೆಗೆ ಅಂಬಡಗಟ್ಟಿ ಸಮೀಪ ಕಂಟೇನರ್ ವಾಹನ ಚಾಲಕ ಯಾವುದೇ ಮುನ್ಸೂಚನೆ ನೀಡದೆ ಕಂಟೈನರ್ ಅನ್ನು ಎಡಕ್ಕೆ ತಿರುಗಿಸಿದ್ದ ಎಂದು ಚಾಲಕ ಆರೋಪಿಸಿದ್ದಾರೆ.

ಈ ವೇಳೆ ನನ್ನ ಕಾರು ಎರಡಕ್ಕೆ ತಿರುಗಿಸಿದೆ. ಆಗ ಕಂಟೇನರ್ ಬಲಕ್ಕೆ ತಿರುಗಿಸಿ ನನ್ನ ವಾಹನಕ್ಕೆ ತಾಗಿಸಿದ.ಅಪಘಾತ ತಪ್ಪಿಸಲು ನಾನು ರಸ್ತೆ ಪಕ್ಕದ ಮರಕ್ಕೆ ಕಾರನ್ನು ಡಿಕ್ಕಿ ಹೊಡಿದಿದೆ.ಕಾರಿನಲ್ಲಿ ಇದ್ದ ನಾಲ್ವರಿಗೂ ಗಾಯಗಳು ಆಗಿವೆ.ಈ ವೇಳೆ ಟ್ರಕ್ ನಿಲ್ಲಸದೇ ಹೋಗಿದ್ದು ಅಪರಾಧ ಎಂದು ಎಫ್ ಐ ಆರ್ ದಾಖಲು ಮಾಡಲಾಗಿದೆ.