ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಮಾಯಾವತಿಯ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಮೈತ್ರಿಕೂಟದ ಬಗ್ಗೆ ಶನಿವಾರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಮತ್ತು ಬಿಎಸ್ಪಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾ ಇಬ್ಬರು ಶುಕ್ರವಾರ ಚಂಡೀಗಡವನ್ನು ತಲುಪಿದ್ದು ಮೈತ್ರಿಕೂಟದ ಕುರಿತು ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸುವ ನಿರೀಕ್ಷೆಯಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಹೋರಾಡಿದ ಅಕಾಲಿ ದಳ ಮತ್ತು ಬಿಎಸ್ಪಿಯ ಮತ ಪಾಲು ಶೇಕಡಾ 30 ಕ್ಕಿಂತ ಹೆಚ್ಚು. ಮೈತ್ರಿ ಮಾಡಿಕೊಂಡರೆ ಈ ಅಂಕಿಅಂಶಗಳನ್ನು ಇನ್ನೂ ಹೆಚ್ಚುಗೊಳಿಸಬಹುದು. ಇದರ ಹೊರತಾಗಿ, ಈ ಮೈತ್ರಿಕೂಟ ಕಾಂಗ್ರೆಸ್ಗೆ ದೊಡ್ಡ ಸವಾಲಾಗುವುದಂತು ಸತ್ಯ. ಪಂಜಾಬ್‌ನ ಸುಮಾರು 32 ಪ್ರತಿಶತದಷ್ಟು ದಲಿತ ಮತದಾರರು ಹೊಂದಿದ್ದು ಇಲ್ಲಿ ಬಿಎಸ್‌ಪಿ ಪ್ರಬಲ ಉಪಸ್ಥಿತಿಯನ್ನು ಹೊಂದಿರುವುದರಿಂದ, ಅಕಾಲಿ ದಳ ಮತ್ತು ಬಿಎಸ್‌ಪಿ ಎರಡೂ ಒಟ್ಟಿಗೆ ಕೆಲಸಮಾಡುವುದರಿಂದ ಚುನಾವಣಾ ಕಾರ್ಯಕ್ಷಮತೆಗೆ ಖಂಡಿತವಾಗಿಯೂ ಪ್ರಯೋಜನವನ್ನು ನೀಡುತ್ತದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಅಕಾಲಿ ದಳ ಬಿಎಸ್ಪಿಗೆ 18 ಸ್ಥಾನಗಳನ್ನು ನೀಡಲು ಸಿದ್ಧವಾಗಿದೆ ಎನ್ನಲಾಗಿದೆ. ಕಳೆದ ವರ್ಷ ಹೊಸ ಕೃಷಿ ಮಸೂದೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಅಕಾಲಿ ದಳ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಹೊರ ಬಂದಿತ್ತು.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಏಕಪಕ್ಷೀಯವಾಗಿ ಹೋರಾಡಲಿದೆ.
ಕಳೆದ ವರ್ಷ ಕೇಂದ್ರ ಬಿಜೆಪಿ ಸರ್ಕಾರ ತಂದ ಮೂರು ಕೃಷಿ ಕಾನೂನಿನ ವಿರುದ್ಧ ಅಕಾಲಿ ದಳ ಬಿಜೆಪಿ ಜೊತೆಗಿನ ಮೈತ್ರಿಕೂಟವನ್ನು ಮುರಿದು ಹೊರಬಂದಿತ್ತು. ಇದಾದ ನಂತದ ಪಂಜಾಬ್ ಬಿಜೆಪಿ ಘಟಕ ರಾಜ್ಯದ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತು. ಅಕಾಲಿ ದಳ ಹಿರಿಯ ಪಕ್ಷವಾಗಿದ್ದು, ಆದ್ದರಿಂದ 94 ಸ್ಥಾನಗಳಲ್ಲಿ ಹೋರಾಡಿದರೆ, ಬಿಜೆಪಿ ಕೇವಲ 23 ಸ್ಥಾನಗಳಲ್ಲಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಪಂಜಾಬ್‌ನ 13 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 3 ಮತ್ತು ಶಿರೋಮಣಿ ಅಕಾಲಿ ದಳ 10 ಸ್ಪರ್ಧಿಸಿದೆ.