ದ್ವಿತೀಯ ಪಿಯುಸಿ (PUC written examination)ಲಿಖಿತ ಪರೀಕ್ಷೆಯಲ್ಲಿ ಅವಧಿ ಇಳಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಆದೇಶ ಮಾಡಿದೆ. ದ್ವಿತೀಯ ಪಿಯುಸಿ ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ಇಳಿಕೆ ಮಾಡಲಾಗಿದೆ. 3 hours ಗಂಟೆಗಳ ಕಾಲ ಬರೆಯಬೇಕಿದ್ದ ಪರೀಕ್ಷೆಯನ್ನು ಈ ಸಾಲಿನ ಶೈಕ್ಷಣಿಕ ವರ್ಷದಿಂದ 2 ಗಂಟೆ 45 ನಿಮಿಷಕ್ಕೆ ನಿಗಧಿ ಮಾಡಿ ಆದೇಶ ಹೊರಡಿಸಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷಾ ಹಾಲ್‌ನಲ್ಲಿ ಮೂರು ಗಂಟೆಗಳ ಕಾಲ ಇರಲೇಬೇಕು. ಪರೀಕ್ಷೆಯ ಆರಂಭದಲ್ಲಿನ 15 ನಿಮಿಷವನ್ನು ಪ್ರಶ್ನೆಗಳನ್ನು ಓದಿಕೊಳ್ಳಲು ಬಳಸಲು ಅವಕಾಶ ಕೊಡಲಾಗಿದೆ. ಲಿಖಿತ ಬರವಣಿಗೆಗೆ ಮಾತ್ರ 2 ಗಂಟೆ 45 ನಿಮಿಷಗಳ ಕಾಲಾವಕಾಶ ಬಳಸಿಕೊಳ್ಳಬೇಕು. ಈ ಅವಧಿಯಲ್ಲಿ 100 ಅಂಕಕ್ಕೆ ಬದಲು 80 ಅಂಕಕ್ಕೆ ಲಿಖಿತ ಪರೀಕ್ಷೆ ಬರೆಯಬಹುದು. ಈ ಹಿಂದೆ ಪ್ರಶ್ನೆಗಳನ್ನು ಓದಿಕೊಳ್ಳಲು 15 ನಿಮಿಷವನ್ನು ಹೆಚ್ಚುವರಿಯಾಗಿ ಕೊಡಲಾಗುತ್ತಿತ್ತು. ಅಂದರೆ 3 ಗಂಟೆ 15 ನಿಮಿಷಗಳ ಕಾಲಾವಕಾಶ ಸಿಗುತ್ತಿತ್ತು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆಗೆ ಕೃಪಾ ಸಂಘಟನೆ ಅಸಮಾಧಾನ ಹೊರ ಹಾಕಿದೆ.ಮಂಡಳಿ ದಿನಕ್ಕೊಂದು ಆದೇಶ ಹೊರಡಿಸುತ್ತಾರೆ. ಈ ರೀತಿಯ ನಿರ್ಧಾರಗಳಿಂದ ಮಕ್ಕಳ ಮೇಲೆ ವೈಜ್ಞಾನಿಕವಾಗಿ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದು ಕೂಡ ಗೊತ್ತಿಲ್ಲ ಒಂದು ಆದೇಶ ಮಾಡುವಾಗ ಕನಿಷ್ಠ ಜ್ಞಾನ ಇರಬೇಕು ಅದಕ್ಕೆ ಸಂಬಂಧಪಟ್ಟ ಪ್ರಾಂಶುಪಾಲರು, ಪೋಷಕ ಸಂಘಟನೆಗಳು, ಶಿಕ್ಷಣ ತಜ್ಞರ ಜೊತೆ ಚರ್ಚೆ ಮಾಡದೇ ನಿರ್ಧಾರ ಮಾಡೋದು ಸರಿಯಲ್ಲ ಎಂದಿದ್ದಾರೆ.
ಪರೀಕ್ಷಾ ಅವಧಿಯನ್ನ ಮೂರು ಗಂಟೆಯಿಂದ 2 ಗಂಟೆ 45 ನಿಮಿಷಕ್ಕೆ ಇಳಿಕೆ ಮಾಡಿದ್ದಾರೆ. 15 ನಿಮಿಷಗಳ ಅವಧಿ ಕಡಿತ ಮಾಡಿದ್ದಾರೆ. ಆದ್ರೆ ಇದರಿಂದ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.ಇದು ಕೃಪಾ ಸಂಘಟನೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಶ್ನೆ ಮಾಡಿದೆ. 15 ನಿಮಿಷ ಸಮಯ ಇಳಿಕೆ ಮಾಡಿರುವ ಉದ್ದೇಶವಾದ್ರು ಏನು..? ಈ ಆದೇಶವನ್ನ ಬೋರ್ಡ್ ಕೂಡಲೇ ಹಿಂಪಡೆಯಬೇಕು ಎಂದು ಕೃಪಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯ ಮಾಡಿದ್ದಾರೆ.