ದರ್ಶನ್ ಆಂಡ್ ಗ್ಯಾಂಗ್ (D gang) ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ (Renukaswamy murder case) ಸಂಬಂಧಪಟ್ಟಂತೆ, ಒಂದ್ಕಡೆ ಕೊಲೆ ಆರೋಪ, ಮತ್ತೊಂದ್ಕಡೆ ಜೈಲು ಬದಲಾವಣೆ ಆದರೂ ದರ್ಶನ್ ಗೆ ಕಾನೂನು ಕಂಟಕ ಮಾತ್ರ ಕಡಿಮೆಯಾಗಿಲ್ಲ.ಒಂದು ಕಡೆ ಜಾಮೀನು ಸಲ್ಲಿಕೆಗೆ ವಕೀಲರ ತಂಡ ಪ್ಲಾನ್ ಮಾಡಿದ್ರೆ, ಮತ್ತೊಂದು ಕಡೆ ದರ್ಶನ್ ಗೆ ಜಾಮೀನು ನೀಡದಂತೆ ಪೊಲೀಸರಿಂದ ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ.
ದರ್ಶನ್ ಜಾಮೀನು ಆಕ್ಷೇಪಣೆಗೆ ಪೊಲೀಸರಿಗೆ ಪ್ರಮುಖ ಅಸ್ತ್ರ ವಾಗಿರೋದು ಪರಪ್ಪನ ಅಗ್ರಹಾರ ಜೈಲಿನ (Parappana agrahara) ರಾಜಾಥಿತ್ಯ ಪ್ರಕರಣ. ಜೈಲಿನಲ್ಲಿ ಸಿಗರೇಟ್, ಕಪ್, ರೌಡಿಶೀಟರ್ ಜೊತೆ ಪೋಸ್ ಕೊಟ್ಟಿರೋ ಫೋಟೋ ವೈರಲ್ ಆದ ವಿಚಾರವನ್ನ ಪ್ರಮುಖವಾಗಿ ನ್ಯಾಯಾಲಯಕ್ಕೆ ತಿಳಿಸಲಿರೋ ಪೊಲೀಸರು, ಆ ಮೂಲಕ ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದ್ರ ಜೊತೆಗೆ ದರ್ಶನ್ ಗೆ ಪ್ರಭಾವಿಗಳ ಕಾಂಟ್ಯಾಕ್ಟ್ ಇದೆ,ರೌಡಿಶೀಟರ್ ಗಳ ಜೊತೆ ಕಾಂಟ್ಯಾಕ್ಟ್, ಪ್ರಭಾವಿಗಳ ಸಹಾಯದಿಂದ ಜೈಲಿನಲ್ಲೂ ರಾಜಾತಿಥ್ಯ ಸಿಕ್ಕಿದೆ.ಹೀಗಾಗಿ ಜಾಮೀನು ಕೊಟ್ರೆ ತನ್ನ ಪ್ರಭಾವ ಬಳಸಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ಕೋರ್ಟ್ ಗೆ ತಿಳಿಸಲಿದ್ದಾರೆ. ಹೀಗಾಗಿ ದರ್ಶನ್ ಗೆ ಜಾಮೀನು ಸಿಗೋದು ಕಷ್ಟವಾಗಬಹುದು.