ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆಗೆ 2 ವಿಶೇಷ ತಂಡಗಳನ್ನು ರಚಿಸಿ ಡಿಜಿಪಿ ಆದೇಶ ಹೊರಡಿಸಿದ್ದಾರೆ.
ಸಿಐಡಿ ಡಿಜಿಪಿ ಪಿ.ಎಸ್. ಸಂಧು ಶನಿವಾರ ಪಿಎಸ್ ಐ ಅಕ್ರಮದ ತನಿಖೆ ಚುರುಕಾಗಿ ನಡೆಯಲು ತನಿಖೆ ಹಾಗೂ ವಿಚಾರಣೆಗಾಗಿ ಎಡಿಜಿಪಿ ನೇತೃತ್ವದಲ್ಲಿ ಎರಡು ತಂಡಗಳನ್ನು ನೇಮಿಸಿದ್ದಾರೆ.
7 ಡಿವೈಎಸ್ ಪಿ, 12 ಇನ್ ಸ್ಪೆಕ್ಟರ್ ಮತ್ತು 25 ಸಿಬ್ಬಂದಿ ಅವರನ್ನೊಳಗೊಂಡ ಒಂದು ತಂಡ ಹಾಗೂ ಓರ್ವ ಡಿವೈಎಸ್ ಪಿ ಮತ್ತು 9 ಸಿಬ್ಬಂದಿ ಒಳಗೊಂಡ ತಾಂತ್ರಿಕ ತಂಡವನ್ನು ರಚಿಸಲಾಗಿದೆ.
ಡಿಐಜಿಪಿ ರಮೇಶ್ ಬಾನೂತ್ ನೇತೃತ್ವದಲ್ಲಿ ತಂಡಗಳು ಕಾರ್ಯ ನಿರ್ವಹಿಸಲಿದ್ದು, ಸಿಐಡಿ ಆರ್ಥಿಕ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಗೆ ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ಸಿಐಡಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.