• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

Exclusive: ನೀರಿನ ದರ ಏರಿಕೆ: ಜಲ ಮಂಡಳಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ !

ಪ್ರತಿಧ್ವನಿ by ಪ್ರತಿಧ್ವನಿ
May 7, 2022
in ಕರ್ನಾಟಕ
0
Exclusive: ನೀರಿನ ದರ ಏರಿಕೆ: ಜಲ ಮಂಡಳಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ !
Share on WhatsAppShare on FacebookShare on Telegram

ಹಲವು ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿರುವ ಬೆಂಗಳೂರು ಜನರಿಗೆ, ಕೊರೋನಾ ನಾಲ್ಕನೇ ಅಲೆ ಹೊತ್ತಲ್ಲೇ ಮತ್ತೊಂದು ಮೆಗಾ ಶಾಕ್ ಕಾದಿದೆ. ಸಾಲು ಸಾಲು ಬೆಲೆ ಏರಿಕೆಗೆ ಕಂಗಾಲಾಗಿರುವ ಜನರ ಜೇಬಿಗೆ BWSSB ಇಂದ ‘ಜಲ ಕತ್ತರಿ’ ಬೀಳಲಿದೆ. ಕರೆಂಟ್ ಬಿಲ್, ಗಾರ್ಬೆಜ್ ಬಿಲ್ ಅಂತ ಹೊರೆ ಹೊತ್ತಿರುವ ಸಿಲಿಕಾನ್ ಸಿಟಿ ಮಂದಿ ಇದೀಗ ವಾಟರ್ ಬಿಲ್‌ ಏರಿಕೆಯ ಹೊರೆಯನ್ನೂ ಹೊತ್ತುಕೊಳ್ಳಬೇಕಿದೆ. 

ADVERTISEMENT

ಕೊರೋನಾ ನಾಲ್ಕನೇ ಅಲೆ ಭೀತಿ ಹೊತ್ತಲ್ಲೆ ರಾಜಧಾನಿ ಮಂದಿಗೆ ಮತ್ತೊಂದು ಮೆಗಾ ಶಾಕ್ !

ತೈಲ ಬೆಲೆ ಏರಿಕೆ, ಅಡುಗೆ ಎಣ್ಣೆ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ, ಹಾಲಿನ ದರ ಏರಿಕೆ, ವಿದ್ಯುತ್ ದರ ಏರಿಕೆ ಹೀಗೆ ಸಾಲು ಸಾಲು ಏರಿಕೆ‌ ಹೊರೆ ಅನುಭವಿಸಿದ ಬೆಂಗಳೂರು ಜನರು ಈಗ ಮತ್ತೊಂದು ದರ ಏರಿಕೆಗೆ ಸಜ್ಜಾಗಬೇಕಿದೆ. ಈ ಬಾರಿ ದರ‌ ಏರಿಕೆ ಅಖಾಡಕ್ಕೆ ಬೆಂಗಳೂರು ಜಲ ಮಂಡಳಿ ಬಂದಿದ್ದು, ಮುಂದಿನ ವಾರದಿಂದ ಬಾಟರ್ ಬಿಲ್ ನಲ್ಲಿ ಏರಿಕೆ ಕಾಣಲಿದೆ. ವಾಟರ್ ಬಿಲ್ ಏರಿಕೆ ಮಾಡುವಂತೆ BWSSB ಸರ್ಕಾರಕ್ಕೆ ಪಸ್ತವಾನೆ ಈಗಾಗಲೇ ಸಲ್ಲಿಸಿದೆ.

ಸತತ ಬೆಲೆ ಏರಿಕೆ ಬಿಸಿ ನಡುವೆ ಸಿಲಿಕಾನ್ ಸಿಟಿ ಜನರಿಗೆ 5% ವಾಟರ್ ಶಾಕ್ !

ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಈಗ ವಾಟರ್ ಬಿಲ್ ಟೆನ್ಷನ್ ಶುರುವಾಗಲಿದೆ. ಪ್ರತಿ ಸಾವಿರ ಲೀಟರ್ ನೀರಿನದ ದರಕ್ಕೆ 5% ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಇರುವ ದರದಲ್ಲಿ  ಕಮರ್ಷಿಯಲ್ ಸೇರಿದಂತೆ ಎಲ್ಲಾ ವಾಟರ್ ದರ 5% ರಷ್ಟು ಹೆಚ್ಚಳಕ್ಕೆ ಚಿಂತನೆ ನಡೆಸಲಾಗಿದೆ. ಆದರೆ ಕೈಗಾರಿಕಾ ಬಳಕೆ ಹಾಗೂ ಈಜುಕೊಳಗಳ ಬಳಕೆಗಳ ದರದಲ್ಲಿ 8% ದರ ಏರಿಕೆ ನಿಗದಿ ಮಾಡಲು‌ ಕೋರಲಾಗಿದೆ. ಸರ್ಕಾರಕ್ಕೆ ಸಲ್ಲಿಸಲಾಗಿರುವ ಈ ಪ್ರಸ್ತಾವನೆಯ ಭವಿಷ್ಯ ಮುಂದಿನ ವಾರ ಗೊತ್ತಾಗಲಿದೆ.

ಈಗಿರುವ ಗೃಹ ಬಳಕೆಯ ನೀರಿನ ದರ !
• 1,000 Ltr : ₹7 (0 to 8,000 Ltr ವರೆಗೆ)• 1,000 Ltr : ₹11 (8,001 to 25,000 Ltr ವರೆಗೆ)• 1,000 Ltr : ₹26 (25,001 to 50,000 Ltr ವರೆಗೆ)• 1,000 Ltr : ₹45 (50,000 ಮೇಲ್ಪಟ್ಟಂತೆ Ltrಗೆ)

ಈಗಿರುವ ವಾಣಿಜ್ಯ ಬಳಕೆಯ ನೀರಿನದ ದರ ! 

• 1,000 Ltr : ₹50 (0 to 10,000 Ltr ವರೆಗೆ)• 1,000 Ltr : ₹57 (10,001 to 25,000 Ltr ವರೆಗೆ)• 1,000 Ltr : ₹65 (25,001 to 50,000 Ltr ವರೆಗೆ)• 1,000 Ltr : ₹76 (50,001 to 75,000 Ltr ವರೆಗೆ)• 1,000 Ltr : ₹86 (75,000 ಮೇಲ್ಪಟ್ಟಂತೆ Ltrಗೆ)
• ಕೈಗಾರಿಕಾ ಬಳಕೆಯ ನೀರಿನದ ದರ : 1,000 Ltrಗೆ ₹90• ಈಜುಕೊಳಕ್ಕೆ ಬಳಕೆಯ ನೀರಿನ ದರ : 1,000 Ltrಗೆ ₹90
ಗೃಹ ಬಳಕೆ ಮೇಲೆ 5% ವಾಟರ್ ಬಿಲ್ ಏರಿಕೆ !
– ಪ್ರತಿ ಸಾವಿರ ಲೀಟರ್ ಗೆ ₹7 ದರ, ಈ ದರಕ್ಕೆ 5% ಏರಿಕೆಯಾದರೆ ₹7.35 ಆಗಲಿದೆ : 35 ಪೈಸೆ ಹೆಚ್ಚಳ- ಮೊದಲ ಹಂತದ 8 ಸಾವಿರ ಲೀಟರ್ ಗೆ ₹56, ಇದಕ್ಕೆ 5% ಏರಿಕೆಯಾದರೆ ₹58.80 ಆಗಲಿದೆ : ₹2.80 ಹೆಚ್ಚಳ

ಕೈಗಾರಿಕಾ ಬಳಕೆ‌ ಮೇಲೆ 8% ವಾಟರ್ ಬಿಲ್ ಏರಿಕೆ !

– ಪ್ರತಿ ಸಾವಿರ ಲೀಟರ್ ಗೆ ₹90 ದರ, ಈ ದರಕ್ಕೆ 8% ಏರಿಕೆಯಾದರೆ 97.20 ಆಗಲಿದೆ : ₹7.20 ಹೆಚ್ಚಳ
ವಾಟರ್ ದರ ಏರಿಕೆ ಬಗ್ಗೆ ಜಲಮಂಡಳಿ ಇಂಜಿನಿಯರ್ ಇನ್ ಚೀಫ್ ಸುರೇಶ್ ಮಾಹಿತಿ ನೀಡಿದ್ದು, 2013ರಲ್ಲಿ ಕೊನೆಯ ಬಾರಿಗೆ ಜಲ ಮಂಡಳಿ ದರ ಏರಿಕೆ ಮಾಡಿತ್ತು. ಅದಾಗಿ 9 ವರ್ಷಗಳಾಯಿತು, ಇದೀಗ ದರ ಏರಿಸುವ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಸಾವಿರ ಲೀಟರ್ ಗೆ 5% ಹಾಗೂ ಕೈಗಾರಿಕಾ ಬಳಕೆಗೆ 8% ದರ ಏರಿಕೆಗೆ ಪ್ರಸ್ತಾವನೆ ನೀಡಲಾಗಿದೆ. ಮುಂದಿನ ವಾರ ಸರ್ಕಾರ ಈ ಬಗ್ಗೆ ತಮ್ಮ ಅಂತಿಮ ನಿರ್ಧಾರ ಪ್ರಕಟ ಮಾಡಲಿದೆ ಎಂದಿದ್ದಾರೆ.

ಒಟ್ಟಾರೆ ದರ ಏರಿಕೆಯ ಹೊಡೆತಕ್ಕೆ ಪದೇ ಪದೇ ಬಲಿಯಾಗುತ್ತಿರುವ ಬೆಂಗಳೂರಿನ ಜನರ ಪಾಡು ಹೇಳತೀರದ್ದಾಗಿದೆ.‌ ಇದೀಗ ವಾಟರ್ ಬಿಲ್‌ ಕೂಡ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದ್ದೇ ಆದಲ್ಲಿ, 8 ಸಾವಿರ ಲೀಟರ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆ ಮಾಡುತ್ತಿರುವ ಜನರಿಗೆ ಭಾರೀ ಹೊಡೆತ ಕೊಡಲಿದೆ. 

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಪಿಎಸ್‌ ಐ ನೇಮಕಾತಿ ಅಕ್ರಮ ತನಿಖೆಗೆ 2 ವಿಶೇಷ ತಂಡ ರಚಿಸಿ ಆದೇಶ

Next Post

ಕಸ್ಟಡಿ ಸಾವು: ಕೊಲೆ ಪ್ರಕರಣದಲ್ಲಿ ಪೊಲೀಸರ ಬಂಧನಕ್ಕೆ ತಮಿಳುನಾಡು ಸರ್ಕಾರ ನಿರ್ಧಾರ.!

Related Posts

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್
Top Story

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

by ಪ್ರತಿಧ್ವನಿ
May 25, 2026
0

ಚೆನೈ : ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಮೇಕೆದಾಟು ನೀರಾವರಿ ಯೋಜನೆಗೆ ತಮಿಳುನಾಡಿನ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹಿಂದಿನ ಸರ್ಕಾರಗಳು ಇದರ ವಿರುದ್ಧ ನಿಲುವನ್ನು ಹೊಂದಿದ್ದವು, ಅದರಂತೆ...

Read moreDetails
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
Next Post
ಕಸ್ಟಡಿ ಸಾವು: ಕೊಲೆ ಪ್ರಕರಣದಲ್ಲಿ ಪೊಲೀಸರ ಬಂಧನಕ್ಕೆ ತಮಿಳುನಾಡು ಸರ್ಕಾರ ನಿರ್ಧಾರ.!

ಕಸ್ಟಡಿ ಸಾವು: ಕೊಲೆ ಪ್ರಕರಣದಲ್ಲಿ ಪೊಲೀಸರ ಬಂಧನಕ್ಕೆ ತಮಿಳುನಾಡು ಸರ್ಕಾರ ನಿರ್ಧಾರ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada