• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

PSI ಅಕ್ರಮಕ್ಕೆ ಸಿಕ್ಕಿದೆ ಮಗದೊಂದು ಸಾಕ್ಷ್ಯ..!? ಸರ್ಕಾರದಿಂದ ಜಾಣನಡೆ !!

ಕೃಷ್ಣ ಮಣಿ by ಕೃಷ್ಣ ಮಣಿ
January 26, 2023
in Uncategorized
0
PSI ಅಕ್ರಮಕ್ಕೆ ಸಿಕ್ಕಿದೆ ಮಗದೊಂದು ಸಾಕ್ಷ್ಯ..!? ಸರ್ಕಾರದಿಂದ ಜಾಣನಡೆ !!
Share on WhatsAppShare on FacebookShare on Telegram

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಪಿಎಸ್‌ಐ ಅಕ್ರಮ ಸಾವಿರಾರು ಉದ್ಯೋಗ ಆಕಾಂಕ್ಷಿಗಳಿಗೆ ನಿರಾಸೆ ಉಂಟು ಮಾಡಿದೆ. ಕಷ್ಟಪಟ್ಟು ಓದಿ ಕೆಲಸ ಗಿಟ್ಟಿಸುವ ಆಲೋಚನೆಯಲ್ಲಿದ್ದ ಆಕಾಂಕ್ಷಿಗಳು ಕಂತೆ ಕಂತೆ ನೋಟುಗಳು ಕೆಲಸ ಗಿಟ್ಟಿಸುತ್ತಿರುವುದನ್ನು ನೋಡಿ ಕೆಲಸಕ್ಕೆ ಸೇರುವ ಹುಮ್ಮಸ್ಸನ್ನು ಕಳೆದುಕೊಂಡಿದ್ದಾರೆ. ಈ ನಡುವೆ 545 ಮಂದಿ ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಅಕ್ರಮಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ. CID ಬಂಧನದಲ್ಲಿ ಇರುವ ಆರ್ ಡಿ ಪಾಟೀಲ್ ಅಕೌಂಟ್ ಗೆ ಬರೋಬ್ಬರಿ 20 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಆರ್ ಡಿ ಪಾಟೀಲ್ ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳೇ ಕೇಸ್ ಮುಚ್ಚಿ ಹಾಕಲು 3 ಕೋಟಿ ರೂಪಾಯಿ ಕೇಳಿದ್ದಾರೆ ಎನ್ನುವ ಸ್ಫೋಟಕ ವಿಚಾರ ಬಹಿರಂಗ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಕೆಲವು ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲೂ ಭಾರೀ ವೈರಲ್ ಆಗಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಕಿಂಗ್ ಪಿನ್ ಆಗಿದ್ದ R.D.ಪಾಟೀಲ್ ಬೆಂಬಲಿಗರು ಬಿಡುಗಡೆ ಮಾಡಿದ್ದಾರೆ ಎನ್ನಲಾಗ್ತಿದೆ. 

ADVERTISEMENT

ಹಣಕ್ಕೆ ಡಿಮ್ಯಾಂಡ್ ಮಾಡಿದ್ದು ಯಾವ ಅಧಿಕಾರಿ..!?

ಸಿಐಡಿ ಅಧಿಕಾರಿಗಳು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆಂದು ಆರ್ ಡಿ ಪಾಟೀಲ್ ವಿಡಿಯೋ ಹರಿಬಿಟ್ಟಿದ್ದಾನೆ. ಸಿಐಡಿ ಅಧಿಕಾರಿಗಳು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾನೆ. ಸಿಐಡಿ ತನಿಖಾಧಿಕಾರಿ ಡಿವೈಎಸ್ ಪಿ ಶಂಕರಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. 3 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎಂದು ವೀಡಿಯೋ ಪೋಸ್ಟ್ ಮಾಡಿ ಕೋರ್ಟ್ ಗೆ ಬಂದು ಶರಣಾಗತಿ ಆಗಿದ್ದಾನೆ. 3 ಕೋಟಿ ಡಿಮ್ಯಾಂಡ್‌ಗೆ ಒಪ್ಪಿಕೊಂಡು, ಅದರಲ್ಲಿ ₹76 ಲಕ್ಷ ಕೊಟ್ಟಿದ್ದೀನಿ. ನಮ್ಮ ಅಳಿಯನ ಮ‌ೂಲಕ 76 ಲಕ್ಷ ರೂpಆಯಿ ಹಣ ತಲುಪಿಸಿದ್ದೇನೆ. ನಾನು ಬೇಲ್ ಮೇಲೆ ಬರುತ್ತಿದ್ದ ಹಾಗೆ ಹಣಕ್ಕಾಗಿ ಸಿಬ್ಬಂದಿಯನ್ನ ಕಳುಹಿಸಿದ್ರು. ಹಣವಿಲ್ಲದಿದ್ರೆ ಬಂಧಿಸುವುದಾಗಿ ಹೇಳಿದ್ರು ಎಂದು ಪಾಟೀಲ್ ಆರೋಪ ಮಾಡಿದ್ದಾನೆ. 

ಮೂರು ಆಡಿಯೋದಲ್ಲಿ ಏನಿದೆ ಸಂಭಾಷಣೆ..!?

ಕಿಂಗ್ ಪಿನ್ R.D.ಪಾಟೀಲ್ ಬೆಂಬಲಿಗರು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿರುವ 3 ಆಡಿಯೋಗಳಲ್ಲಿ DySP ಶಂಕರಗೌಡ ಜೊತೆ ಸಂಭಾಷಣೆ ಮಾಡಿರುವುದು ಎನ್ನಲಾಗ್ತಿದೆ. PSI ಕೇಸಲ್ಲಿ ಸಹಕರಿಸಲು ಹಣದ ಆಫರ್ ನೀಡಿದ್ದ ಆರೋಪಿ, ಚಾರ್ಜ್ ಶೀಟ್ ಬೇಗ ಸಲ್ಲಿಸಲು ಹಣದ ಆಫರ್ ಮಾಡಿದ್ದಾನೆ. ರೊಕ್ಕ ಇಂಪಾರ್ಟೆಂಟ್ ಅಲ್ಲ, ಕೆಲಸ ಇಂಪಾರ್ಟೆಂಟ್ ಎಂದು ಶಂಕರಗೌಡಗೆ ರುದ್ರಗೌಡ ಪಾಟೀಲ್ ಹೇಳಿದ್ದಾನೆ. ನೀವು ಯಾರಿಗೆ ಹೇಳ್ತೀರೋ ಅವರಿಗೆ ದುಡ್ಡು ಕೊಡ್ತೇನೆ. ನಾಳೆ ಅಥವಾ ನಾಡಿದ್ದು ಪೇಮೆಂಟ್ ಕಳಿಸ್ತೇನೆ. ಈಗ 1.50 ಕೋಟಿ ರೂಪಾಯಿ ಪೇಮೆಂಟ್ ಮಾಡ್ತೀನಿ. ಇನ್ನೊಂದು ಕೋಟಿ ರೂಪಾಯಿ 16ಕ್ಕೆ ಕಳಿಸ್ತೇನೆ ಎಂದು DySP ಶಂಕರಗೌಡಗೆ ಹೇಳಿದ್ದಾನೆ. ಈ ಬಗ್ಗೆ  ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಪಿಎಸ್ಐ ಕೇಸ್ ನಲ್ಲಿ ಆರ್ ಡಿ ಪಾಟೀಲ್ ಬಂಧನ ಆಗಿದೆ. ಆರ್ ಡಿ‌ ಪಾಟೀಲ್ ಕಾಂಗ್ರೆಸ್ ಮುಖಂಡ, ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ರು ಎಂದಿದ್ದಾರೆ. 

ಆರ್ .ಡಿ ಪಾಟೀಲ್ ಬಗ್ಗೆ ಸಿಎಂ ಹೇಳಿದ್ದೇನು..?

ಆರ್ ಡಿ ಪಾಟೀಲ್ ತನಿಖಾಧಿಕಾರಿ ಹಣಕ್ಕೆ ಬೇಡಿಕೆ ಇಟ್ಟಿರೋ ವಿಡಿಯೋ ಬಿಡುಗಡೆ ಮಾಡಿರುವ ವಿಚಾರವಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಸಿಎಂ ಬೊಮ್ಮಾಯಿ, ಆರೋಪಿ ಎನು ಹೇಳಿದ್ದಾನೆ ಎನ್ನುವುದು ಅಲ್ಲಿಯ ಪೊಲೀಸ್ ತನಿಖಾಧಿಕಾರಿಗಳಿಗೆ ಗೊತ್ತಿದೆ. ತನಿಖೆ ಬಳಿಕ ಅಧಿಕಾರಿಯದ್ದು ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತೆವೆ. ಕೋರ್ಟ್ ಆದೇಶದ ಮೂಲಕ ತನಿಖೆ ನಡೆಯುತ್ತಿದೆ. ಮೊದಲು ಆರೋಪದ ಆಡಿಯೋ ಎನಿದೆ ನೋಡೋಣ, ತನಿಖೆ ಆಗುತ್ತೆ ಎಂದಿದ್ದಾರೆ. ಇನ್ನು ಸಿಎಂ ತೆರಳುತ್ತಿದ್ದ ಮಾರ್ಗದ ಉದ್ದಕ್ಕೂ ಆರ್ ಡಿ ಪಾಟೀಲ್ ಕಟೌಟ್, ಬ್ಯಾನರ್ಸ್ ರಾರಾಜಿಸಿವೆ, ಸಿಎಂಗೆ ಸ್ವಾಗತ ಕೋರಿ ಆರ್ ಡಿ ಪಾಟೀಲ್ ಹೆಸರಲ್ಲಿ ಬ್ಯಾನರ್ ಹಾಕಲಾಗಿತ್ತು. ಆದರೆ ಸಿಎಂಗೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕೆ ತೆರವು ಮಾಡಲಾಗಿದೆ. 

ಎಲ್ಲಾ ಆರೋಪಿಗಳೂ ರಿಲೀಸ್ , ಆರ್ .ಡಿ ಪಾಟೀಲ್ ಬಂಧನ..!

ಪಿಎಸ್ ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಕಲಬುರಗಿ ಬಿಜೆಪಿ ನಾಯಕಿ ಸೇರಿದಂತೆ ಬಹುತೇಕ ಎಲ್ಲಾ ಆರೋಪಿಗಳು ಜೈಲಿನಿಂದ ಬೇಲ್ ಮೇಲೆ ಬಿಡುಗಡೆ ಆಗಿದ್ದಾರೆ. ಆದರೆ D R ಪಾಟೀಲ್ ಜಾಮೀನು ಪಡೆದು ಹೊರಕ್ಕೆ ಬಂದ ಬಳಿಕ ಪೊಲೀಸರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ, ವಿಚಾರಣೆಗೆ ಹಾಜರಾಗಲಿಲ್ಲ ಎನ್ನುವ ಕಾರಣಕ್ಕೆ ಅರೆಸ್ಟ್ ಮಾಡಲು ನಿರ್ಧಾರ ಮಾಡಿದ್ದರು. ಆದರೆ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ಡಿ.ಆರ್ ಪಾಟೀಲ್ , ಕೋರ್ಟ್ ಎದುರು ಶರಣಾಗಿದ್ದಾನೆ. ಆದರೆ 20 ಲಕ್ಷ ರೂಪಾಯಿ ಹಣ ಹಾಕಿರುವುದು, 3 ಕೋಟಿ ಲಂಚ ಕೇಳಿರುವುದು, ಅದರಲ್ಲಿ 76 ಲಕ್ಷ ರೂಪಾಯಿ ಸಂದಾಯ ಮಾಡಿದ್ದೇನೆ ಎನ್ನುವುದು ಸಾಕಷ್ಟು ಅನುಮಾನಗಳನ್ನು ಮೂಡಿಸುತಿದೆ. ಸರ್ಕಾರ ಮಾತ್ರ ಏನೂ ನಡೆದೇ ಇಲ್ಲ ಎನ್ನವ ಹಾಗೆ ಮೌನಕ್ಕೆ ಶರಣಾಗಿದೆ. ಭ್ರಷ್ಟಾಚಾರ ಎಂಬ ರಾಕ್ಷಸನ ಆರ್ಭಟ ರಾಜ್ಯದಲ್ಲಿ ಮಿತಿಮೀರಿದೆ. ಮುಂದೆ ಬರುವ ಸರ್ಕಾರ ಆದರೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಿದ್ರೆ ಉತ್ತಮ. 

Tags: BJPCongress Partyಬಿಜೆಪಿ
Previous Post

ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್, ಈಗ ಪಂಚಮಸಾಲಿಗಳ ಸರದಿ..!

Next Post

ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್​, ಈಗ ಪಂಚಮಸಾಲಿಗಳ ಸರದಿ..!

Related Posts

ಆಯುರ್ವೇದಿಕ್ ಚಿಕಿತ್ಸೆ ಟೆಂಟ್: 40 ಲಕ್ಷ ವಂಚಿಸಿದ್ದ ನಕಲಿ ಸ್ವಾಮೀಜಿ ಬಂಧನ
Uncategorized

ಆಯುರ್ವೇದಿಕ್ ಚಿಕಿತ್ಸೆ ಟೆಂಟ್: 40 ಲಕ್ಷ ವಂಚಿಸಿದ್ದ ನಕಲಿ ಸ್ವಾಮೀಜಿ ಬಂಧನ

by ಪ್ರತಿಧ್ವನಿ
December 10, 2025
0

ಬೆಂಗಳೂರು: ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದು ಐಟಿ ಕಂಪನಿಯ ಉದ್ಯೋಗಿಗೆ ಬರೋಬ್ಬರಿ 40 ಲಕ್ಷ ವಂಚಿಸಿದ್ದ ನಕಲಿ ಸ್ವಾಮೀಜಿ ವಿನಯ್ ಗುರೂಜಿ ಸೇರಿ ಇಬ್ಬರನ್ನ ಜ್ಞಾನಭಾರತಿ...

Read moreDetails
Belagavi Politics: ಲಕ್ಷ್ಮಣ್‌ ಸವದಿಗೆ ತೀವ್ರ ನಿರಾಸೆ ತಂದಿಟ್ಟ ಜಾರಕಿಹೊಳಿ ಬ್ರದರ್ಸ್‌ ತಂತ್ರ

Belagavi Politics: ಲಕ್ಷ್ಮಣ್‌ ಸವದಿಗೆ ತೀವ್ರ ನಿರಾಸೆ ತಂದಿಟ್ಟ ಜಾರಕಿಹೊಳಿ ಬ್ರದರ್ಸ್‌ ತಂತ್ರ

December 13, 2025
*ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಆರ್.ವಿ. ದೇವರಾಜ್ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ*

*ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಆರ್.ವಿ. ದೇವರಾಜ್ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ*

December 2, 2025
ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು

ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು

November 17, 2025

ಜಪಾನಿನ ನೈಡೆಕ್ ಕಂಪನಿಯ ಆರ್ಚರ್ಡ್ ಹಬ್ ಗೆ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ್..

November 15, 2025
Next Post
ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್​,  ಈಗ ಪಂಚಮಸಾಲಿಗಳ ಸರದಿ..!

ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್​, ಈಗ ಪಂಚಮಸಾಲಿಗಳ ಸರದಿ..!

Please login to join discussion

Recent News

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!
Top Story

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

by ಪ್ರತಿಧ್ವನಿ
December 14, 2025
“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿ & ಸ್ನೇಹಿತರ ಗಲಾಟೆ

ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿ & ಸ್ನೇಹಿತರ ಗಲಾಟೆ

December 14, 2025
Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

December 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada