ಉಡುಪಿಯ ಮಣಿಪಾಲದ ಮಾಹೆ ವಿವಿಯ ಎಂಐಟಿ ಕಾಲೇಜಿನಲ್ಲಿ ಶಿಕ್ಷಕನೋರ್ವ ತರಗತಿಯಲ್ಲಿ ಪಾಠ ಮಾಡುವ ವೇಳ ಮುಸ್ಲಿಂ ಸಮುದಾಯದ ವಿದ್ಯಾರ್ಥಿಯನ್ನು ಕಸಬ್ ಎಂದು ಸಂಬೋಧಿಸಿದ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಮತ್ತು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಹಮ್ಜ ಎಂಬ ವಿದ್ಯಾರ್ಥಿಗೆ ರವೀಂದ್ರಣಾತ್ ಎಂಬ ಶಿಕ್ಷಕನ್ನು ಮಾತನಾಡುತ್ತಾ ಕಸಬ್ ಎಂದು ಶಬ್ದ ಬಳಸಿದ್ದರು. ಈ ವೇಳ ಇದಕ್ಕೆ ಆಕ್ಷೇಪಿಸಿದ್ದ ವಿದ್ಯಾರ್ಥಿ ಶಿಕ್ಷಕನ ಬೆವರಿಳಿಸಿದ ಮತ್ತು ನಂತರ ಶಿಕ್ಷಕ ಈ ಬಗ್ಗೆ ವಿದ್ಯಾರ್ಥಿಯ ಬಳಿ ಕ್ಷಮೆಯಾಚಿಸದ್ದರು.
ನಾನು ಉದ್ದೇಶಪೂರ್ವಲವಾಗಿ ಆ ಪದ ಬಳಸಿಲ್ಲ ಹಾಸ್ಯದ ದಾಟಿಯಲ್ಲಿ ನೀಡಿದ ಹೇಳಿಕೆಗೆ ನಾನು ಕ್ಷಮೆಯಾಚಿಸುತ್ತೇನೆ ನೀನು ನನ್ನ ಮಗನಿದ್ದಂತೆ ಎಂದು ಪ್ರಾಧ್ಯಾಪಕ ವಿದ್ಯಾರ್ಥಿಯ ಬಳಿ ನಂತರ ಕ್ಷಮೆಯಾಚಿಸಿದ್ದರು.
26/11 ಕೃತ್ಯ ಹಾಸ್ಯಾಸ್ಪದವಲ್ಲ ಒಂದು ವೇಳೆ ನಾವು ನಿಮ್ಮನ್ನು ಉಗ್ರರೆಂದು ಕರೆದರೆ ನೀವು ಸುಮ್ಮನಿರುತ್ತೀರಾ ಎಂದು ವಿದ್ಯಾರ್ಥಿ ಶಿಕ್ಷಕನನ್ನು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ ಮತ್ತು ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ ಎಂದು ವಿದ್ಯಾರ್ಥಿ ಪ್ರಾಧ್ಯಾಪಕನನ್ನು ತರಾಟೆಗೆ ತೆಗೆದುಕೊಂಡಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಾಹೆ ವಿವಿಯೂ ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ ಮತ್ತು ಆಂತರಿಕ ತನಿಖೆ ನಡೆಸುವಂತೆ ಸಿಬ್ಬಂದಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗೆ ಕೌನ್ಸೆಲಿಂಗ್ ಮಾಡಲಾಗಿದ್ದು ನಂತರ ವಿದ್ಯಾರ್ಥಿಯೂ ತನ್ನ ವಾಟ್ಸಪ್ ಸೇಟಸ್ನಲ್ಲಿ ಶುಕ್ಷಕರು ಉದ್ದೇಶಪೂರ್ವಕವಾಗಿ ಹಾಗೆ ಮಾತಡಿಲ್ಲ ಎಂದು ಬರೆದುಕೊಂಡಿದಾನೆ ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ.