ತಮ್ಮ ಬಿಳಿ ಕೂದಲನ್ನು ಕಪ್ಪಾಗಿಸಿಕೊಳ್ಳಲು ಹೆಚ್ಚು ಜನ ಹೇರ್ ಡೈ ಬಳಸುತ್ತಾರೆ. ಅದರಲ್ಲೂ ಚಿಕ್ಕ ವಯಸ್ಸಿನವರೆಗೂ ಕೂಡ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗ್ತಾ ಇದೆ ಇದರಿಂದಾಗಿ ಅವರು ಕೂಡ ಬಳಸುತ್ತಾರೆ.. ಆದ್ರೆ ಹೇರ್ ಡೈ ಬಳಸುವುದರಿಂದ ಆ ಕ್ಷಣಕ್ಕೆ ಕೂದಲು ಕಪ್ಪಾಗಬಹುದು ಆದರೆ ಅದರಿಂದಾಗಿ ಕೂದಲಿಗೆ ಸಾಕಷ್ಟು ಸಮಸ್ಯೆ ಆಗುತ್ತದೆ.ಏನು ತೊಂದರೆ ಅನ್ನುವ ಮಾಹಿತಿ ಇಲ್ಲಿದೆ.

ಚರ್ಮಕ್ಕೆ ತೊಂದರೆ
ಹೇರ್ ಡೈ ಆಗಾಗ ಬಳಸುವುದರಿಂದ ಇರ್ರಿಟೇಷನ್ ಹೆಚ್ಚಿರುತ್ತದೆ.ಕೆಲವರಿಗೆ ಮುಖ,ಕುತ್ತಿಗೆ ಭಾಗದಲ್ಲಿ ತುರಿಕೆ ಉಂಟಾಗುತ್ತದೆ. ಹಾಗೂ ಸ್ಕಾಲ್ಪ್ ಅಲ್ಲಿ ಬರ್ನಿಂಗ್ ಸೆನ್ಸೇಶನ್ ಶುರುವಾಗಿದೆ.
ಡ್ರೈನೆಸ್
ಹೇರ್ ಡೈ ಬಳಸುವುದು ಬಿಳಿ ಕೂದಲ ಸಮಸ್ಯೆ ಹೆಚ್ಚಾಗುವುದರ ಜೊತೆಗೆ ಕೂದಲು ಮತ್ತೆ ಸ್ಕಾಲ್ಪ್ ತುಂಬಾನೆ ಡ್ರೈ ಆಗುತ್ತದೆ..ಇದರಿಂದ ಡ್ಯಾಂಡ್ರಫ್ ಸಮಸ್ಯೆ ಶುರುವಾಗುತ್ತದೆ.

ಹೇರ್ ಲಾಸ್
ಹೇರ್ ಡೈ ನಲ್ಲಿ ಇರುವಂತಹ ಹೆಚ್ಚು ಕೆಮಿಕಲ್ ಇಂದಾಗಿ ಕೂದಲು ಉದುರುವುದು ಹೆಚ್ಚಾಗುತ್ತದೆ..ಅದ್ರಲ್ಲೂ ಕೆಲವರು ತಿಂಗಳಲ್ಲಿ ೨-೩ ಭಾರಿ ಡೈ ಬಳಸುವುದರಿಂದ ಹೀಗಾಗುತ್ತದೆ.












