ಪ್ರೊ ಕಬ್ಬಡಿಯ ಲೀಗ್ (Pro Kabaddi) ಹಂತದ ಪಂದ್ಯಾವಳಿಗಳು ಮುಕ್ತಾಯವಾಗಿದ್ದು ಯಾವ್ ಯಾವ ತಂಡಗಳು ಪ್ಲೇ ಆಫ್ಗೆ ಪ್ರವೇಶಿಸಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಬೆಂಗಳೂರು ಬುಲ್ಸ್ , ಪುಣೇರಿ ಪಲ್ಟನ್ ಸೇರಿದಂತೆ ಇನ್ನು ನಾಲ್ಕು ತಂಡಗಳು ಪ್ಲೇ ಆಫ್ಗೆ ಪ್ರವೇಶಿಸಿದೆ. ತೆಲುಗು ಟೈಟನ್ಸ್, ಬೆಂಗಾಲ್ ವಾರಿಯರ್ಸ್, ಯು ಮುಂಬಾ ಮತ್ತು ತಮಿಳು ತಲೈವಾಸ್ ತಂಡಗಳು ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿವೆ.
ನಿನ್ನೆ ನಡೆದ ಪ್ರೋ ಕಬ್ಬಡಿ ಲೀಗ್ ನ ಕೊನೆಯ ಪಂದ್ಯಾವಳಿಗಳ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಶನಿವಾರ ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್, ಹರಿಯಾಣ ಸ್ಟೀಲರ್ಸ್, ಪುನೇರಿ ಪಲ್ಟನ್, ಗುಜರಾತ್ ಜೈಂಟ್ಸ್ , ಜೈಪುರ್ ಪಿಂಕ್ ಪ್ಯಾಂಥರ್ಸ್, ಯು ಮುಂಬಾ ತಂಡಗಳ ರೋಚಕ ಪಂದ್ಯ ನಡೆದಿದಿತ್ತು. ಯಾವ ತಂಡ ಫೈನಲ್ ಪ್ರವೇಶಿಸಬಹುದು ಮತ್ತು ಯಾವ ತಂಡ ಪ್ಲೇ ಆಫ್ ತಲುಪಬಹುದು ಎಂಬ ಸ್ಪಷ್ಟ ಉತ್ತರ ನೆನ್ನೆ ನಡೆದ ಪಂದ್ಯದಲ್ಲಿ ಸಿಕ್ಕಿದೆ.
ಜೈಪುರ ಮತ್ತು ಹರಿಯಾಣದ ಸೋಲಿನಿಂದಾಗಿ ಬೆಂಗಳೂರು ಬುಲ್ಸ್ ಪ್ಲೇಆಫ್ಗೆ ಕನಸು ಜೀವಂತವಾಗಿದೆ, ಆದರೆ ಪುಣೇರಿ ಪಲ್ಟನ್ ತಂಡ ಜೈಪುರವನ್ನು ಸೋಲಿಸುವ ಮೂಲಕ ಪ್ಲೇಆಫ್ ತಲುಪಿದ್ದು ನಿಜಕ್ಕೂ ರೋಚಕ.

ಫೆಬ್ರವರಿ 21 ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ, 3ನೇ ಸ್ಥಾನದಲ್ಲಿರುವ ಯುಪಿ ಯೋಧಾ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಪುಣೇರಿ ಪಲ್ಟಾನ್ ಅನ್ನು ಎದುರಿಸಲಿದೆ. ಆದರೆ 2ನೇ ಎಲಿಮಿನೇಟರ್ನಲ್ಲಿ 5ನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಮತ್ತು 4ನೇ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ಪರಸ್ಪರ ಮುಖಾಮುಖಿಯಾಗಲಿವೆ. ಎಲಿಮಿನೇಟರ್ ನಲ್ಲಿ ಗೆದ್ದವರು ಫೆಬ್ರವರಿ 23ರಂದು ನಡೆಯಲಿರುವ ಸೆಮಿ ಫೈನಲ್ 1 ಮತ್ತು 2 ರಲ್ಲಿ ಆಡಲಿದ್ದಾರೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ ಮತ್ತು ಡಬಾಂಗ್ ಡೆಲ್ಲಿ ತಂಡಗಳ ವಿರುದ್ಧ ಸೆನಸಾಡಲಿದ್ದಾರೆ. ಫೆಬ್ರವರಿ 25 ರಂದು ಫೈನಲ್ ಪಂದ್ಯ ನಡೆಯಲಿದೆ.
ಪ್ಲೇಆಫ್ಗೆ ಅರ್ಹತೆ ಪಡೆದ ತಂಡಗಳು
ಪಾಟ್ನಾ ಪೈರೇಟ್
ದಬಾಂಗ್ ದೆಹಲಿ ಕೆ.ಸಿ
ಯು ಪಿ ಯೋಧಾ
ಗುಜರಾತ್ ಜೈಂಟ್ಸ್
ಬೆಂಗಳೂರು ಬುಲ್ಸ್
ಪುಣೇರಿ ಪಲ್ಟನ್
