ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಗೆ ಭರದಿಂದ ಸಿದ್ದತೆ ನಡೆಸುತ್ತಿರುವ ಕಾಂಗ್ರೆಸ್ ಪ್ರತಿದಿನ ಬಿಜೆಪಿ ವಿರುದ್ಧ ಒಂದಲ್ಲ ಇಂದು ರೀತಿ ತೀವ್ರ ವಾಗ್ದಾಳಿ ನಡೆಸುತ್ತಿದೆ. ಕಾಂಗ್ರೆಸ್ ನಾಯಕಿ, ಯುಪಿ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಮೋದಿ ವಿರುದ್ಧ ಕಿಡಿಕಾರಿದ್ದು 8,000 ಕೋಟಿ ರೂಪಾಯಿ ನೀಡಿ ಖಾಸಗಿ ವಿಮಾನ ಖರೀದಿ ಮಾಡುವ ಪ್ರಧಾನಿಯವರಿಗೆ ರೈತರ ಕಬ್ಬಿನ ಬಾಕಿ ಹಣ 4,000 ಕೋಟಿ ರೂ. ನೀಡಲು ಆಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದ ಕಾಂಗ್ರೆಸ್ ಪ್ರತಿಜ್ಞಾ ರ‍್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಕೋವಿಡ್ ಸಂದರ್ಭದಲ್ಲಿ 8,000 ಕೋಟಿ ರೂಪಾಯಿ ನೀಡಿ ಖಾಸಗಿ ವಿಮಾನ ಖರೀದಿ ಮಾಡುವ ಪ್ರಧಾನಿಯವರಿಗೆ ರೈತರ ಕಬ್ಬಿನ ಬಾಕಿ ಹಣ 4,000 ಕೋಟಿ ರೂ. ನೀಡಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ನೂತನ ಸಂಸತ್ ಕಟ್ಟಡ ನಿರ್ಮಾಣಕ್ಕಾಗಿ ಕೇಂದ್ರ 20,000 ಕೋಟಿ ರೂ. ನೀಡುತ್ತಿದೆ. ಆದರೆ, ರೈತರ ಬಗ್ಗೆ ಗಮನ ಹರಿಸಲು ಅವರ ಬಳಿ ಸಮಯವಿಲ್ಲ.ಕೃಷಿ ಕಾಯ್ದೆ ಹೋರಾಟದ ವೇಳೆ ಮಡಿದ ರೈತರಿಗೆ ಪ್ರಧಾನಿ ಯಾವುದೇ ಗೌರವ ನೀಡಲಿಲ್ಲ ಆದರೆ ಅಭಿವೃದ್ಧಿ ಆಧಾರದ ಮೇಲೆ ಕಾಂಗ್ರೆಸ್ ಉತ್ತರ ಪ್ರದೇಶ ಚುನಾವಣೆ ಎದುರಿಸಲಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 20 ಲಕ್ಷ ಉದ್ಯೋಗ, ಪ್ರತಿ ಜಿಲ್ಲೆಯಲ್ಲೂ ಉತ್ಪಾದನಾ ಕೇಂದ್ರ ತೆರೆಯಲಾಗುವುದು ಎಂದು ವಾಗ್ದಾಳಿ ನಡೆಸಿದರು