ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ (Wayanad) ಮುಂದಿನ ತಿಂಗಳು ನವೆಂಬರ್ 13 ರಂದು ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಈ ಬಾರಿ ಈ ಕ್ಷೇತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಇದೇ ಮೊದಲ ಬಾರಿಗೆ ಪ್ರಿಯಾಂಕ ಗಾಂಧಿ (Priyanka gandhi) ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಹೌದು, ಇಷ್ಟೂ ದಿನಗಳ ಕಾಲ ಕೇಲ ಪ್ರಚಾರ, ಭಾಷಣ, ಜನಸ್ಪಂದನೆ ಎಂದು ಕಾಂಗ್ರೆಸ್ (Congress) ಪರವಾಗಿ ಸಂಚರಿಸುತ್ತ ಸಹೋದರ ರಾಹುಲ್ ಗಾಂಧಿ (Rahul gandhi) ಬೆನ್ನಿಗೆ ನಿಂತಿದ್ದ ಪ್ರಿಯಾಂಕ, ಚುನಾಣಾ ರಾಜಕಾರಣದಿಂದ ದೂರ ಉಳಿದಿದ್ದರು. ಆದ್ರೆ ಇದೀಗ ಪ್ರಿಯಾಂಗ ಮೊಟ್ಟ ಮೊದಲ ಬಾರಿಗೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡ್ತಿದ್ದಾರೆ.
ಹೀಗಾಗಿ ಪುತ್ರಿ ಪ್ರಿಯಾಂಕ ಪರ ಪ್ರಚಾರಕ್ಕೆ ಖದ್ದು ಸೋನಿಯಾ ಗಾಂಧಿ (Sonia gandhi) ಎಂಟ್ರಿ ಕೊಡ್ತಿದ್ದಾರೆ. ನಾಳೆ ಪ್ರಿಯಾಂಕ ಗಾಂಧಿ ಪರವಾಗಿ ಕಾಂಗ್ರೆಸ್ ವತಿಯಿಂದ ಬೃಹತ್ ರ್ಯಾಲಿ ಆಯೋಜಿಸಲಾಗಿದ್ದು, ಯಾಲಿಯಲ್ಲಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ.