ಗಂಗಾಜಲದ (Ganaga) ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ ಪ್ರಶ್ನೆ ಇರುವುದು ನಾನು ಏನು ಹೇಳುತ್ತಿದ್ದೇನೆ ಅಂತಲ್ಲ,ಕೇಂದ್ರ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿ (Pollution control board) ಏನು ಹೇಳಿದೆ ಅನ್ನೋದು ಎಂದಿದ್ದಾರೆ.

ಉತ್ತರ ಪ್ರದೇಶದ ರೋಗಗಳಿಗೆ ಗಂಗಾನದಿ ಕಲುಷಿತ ಕಾರಣ ಮಾಲಿನ್ಯ ನಿಯಂತ್ರಣ ಮಂಡಳಿ ಅಂತ ಹೇಳಿದೆ.ಕೇಂದ್ರ ಸರ್ಕಾರ ಈ ಬಗ್ಗೆ ರಿಪೋರ್ಟ್ ಕೊಟ್ಟಿದೆ. ಮನುಷ್ಯನ ದೇಹ, ಪ್ರಾಣಿ ದೇಹ ತೆಲುತ್ತಿವೆ ಅಂತ ಅವರದ್ದೆ ಮಂಡಳಿ ರಿಪೋರ್ಟ್ ಕೊಟ್ಟಿವೆ, ಆದ್ರೆ ಅದೆ ನೀರನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೀಗಾಗಿ ನಾನು ಅದನ್ನೆ ಪ್ರಶ್ನೆ ಮಾಡಿದ್ದೇನೆ ಅಷ್ಟೇ. ಏನನ್ನು ಮಾರಾಟ ಮಾಡುತ್ತಿದ್ದಾರೆ ಅಂತ ಕೇಳಿದ್ದೇನೆ.ನೀರಿದ್ರೆ ತಾನೆ ಮನುಷ್ಯ, ಎಲ್ಲ ನಾಗರಿಕತೆ ನದಿ ಪಕ್ಕದಲ್ಲಿ ಆರಂಭವಾಗಿದೆ.ಬನಾರಸ್, ಪ್ರಯಾಗ್ ರಾಜ್ ಪ್ರಾಚೀನ ನಗರಗಳು,ನಮ್ಮ ಪರಂಪರೆ ಉಳಿಸಬೇಕು.ಆದ್ರೆ ಕಮರ್ಷಿಯಲ್ ಬೇಡ, ಅದಷ್ಟನ್ನೇ ನಾನು ಹೇಳುತ್ತಿರುವುದು ಎಂದಿದ್ದಾರೆ.