ಕಾಶ್ಮೀರದ ಪಹಲ್ಗಾಮ್ ದಾಳಿಕೋರರನ್ನ ಹುಡುಕಿ ಹುಡುಕಿ ಹೊಡೀತೀವಿ ಎಂದು ಉಗ್ರರು ಹಾಗು ಉಗ್ರ ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ನೇರ ಸಂದೇಶ ರವಾನೆ ಮಾಡಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತದ ರಾಜತಾಂತ್ರಿಕ ಯುದ್ಧ ಶುರು ಎನ್ನುವ ಸಂದೇಶ ರವಾನಿಸಿದ್ದಾರೆ. ಬಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನಮೋ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಉಗ್ರರು ಮತ್ತು ಉಗ್ರರ ಬೆನ್ನಿಗಿರುವವರಿಗೆ ಎಚ್ಚರಿಕೆ ಸಂದೇಶ ನೀಡಿದ್ದು, ಉಗ್ರರ ದಾಳಿಯಿಂದ ಮೃತಪಟ್ಟ ಕುಟುಂಬಗಳ ಜೊತೆಗೆ ಇಡೀ ದೇಶ ನಿಲ್ಲುತ್ತದೆ ಎಂದಿದ್ದಾರೆ.

ನಮ್ಮವರನ್ನು ಕೊಂದವರ ಮೇಲೆ ಇಡೀ ದೇಶದ ಸಿಟ್ಟಿದೆ. ಪ್ರತೀ ಉಗ್ರರನ್ನು ಹುಡುಕಿ, ಹುಡುಕಿ ತಕ್ಕ ಶಿಕ್ಷೆ ವಿಧಿಸುತ್ತೇವೆ. ಶಾಂತಿ, ಸುರಕ್ಷತೆ ವಿಚಾರದಲ್ಲಿ ರಾಜಿ ಆಗುವ ಮಾತೇ ಇಲ್ಲ. ದಾಳಿ ಮಾಡಿದವರಿಗೆ ಕಲ್ಪನೆಗೂ ಮೀರಿದ ಪ್ರತ್ಯುತ್ತರ ನೀಡುತ್ತೇವೆ. ಯಾರೂ ಊಹಿಸಲೂ ಸಾಧ್ಯವಾಗದ ಶಿಕ್ಷೆಯನ್ನು ನಾವು ವಿಧಿಸುತ್ತೇವೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ದಾಳಿ ನಡೆದಿದೆ. ಮುಗ್ದ ಜನರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಇಡೀ ದೇಶವೇ ಇದರಿಂದ ದುಃಖಿತವಾಗಿದೆ. ಕೋಟಿ ಕೋಟಿ ಭಾರತೀಯರು ದುಃಖಿತರಾಗಿದ್ದಾರೆ. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡ್ತಿದೆ. ಈ ದಾಳಿಯಲ್ಲಿ ಕೆಲವರು ಮಕ್ಕಳನ್ನು ಕಳೆದುಕೊಂಡ್ರು, ಇನ್ನು ಕೆಲವರು ತಮ್ಮ ಸಹೋದರರನ್ನ ಕಳೆದುಕೊಂಡ್ರು, ಇನ್ನೂ ಕೆಲವರು ತಮ್ಮ ಜೀವನಸಾಥಿಯನ್ನ ಕಳೆದುಕೊಂಡ್ರು. ಮೃತರಲ್ಲಿ ಕನ್ನಡಿಗರು, ಮರಾಠಿಗರು, ಗುಜರಾತಿಯರೂ ಇದ್ರು. ಕಾರ್ಗಿಲ್ನಿಂದ ಕನ್ಯಾಕುಮಾರಿವರೆಗೂ ಆಕ್ರೋಶ ಇದೆ. ಈ ದಾಳಿ ಕೇವಲ ಪ್ರವಾಸಿಗರ ಮೇಲೆ ಆದ ದಾಳಿ ಅಲ್ಲ. ಭಾರತದ ಆತ್ಮದ ಮೇಲೆ ದಾಳಿ ಮಾಡುವ ದುಸ್ಸಾಹಸ ಮಾಡಿದ್ದಾರೆ. ಅತ್ಯಂತ ಸ್ಪಷ್ಟವಾಗಿ ನಾನು ಹೇಳಲು ಬಯಸುತ್ತೇನೆ. ಈ ದಾಳಿ ಮಾಡಿರುವವರು, ದಾಳಿಗೆ ಸಹಕಾರ ನೀಡಿದವರಿಗೆ ಶಿಕ್ಷೆ ಆಗುತ್ತದೆ. ಅವರು ಊಹಿಸಲೂ ಆಗದಂತಹಾ ಶಿಕ್ಷೆಯನ್ನ ವಿಧಿಸುತ್ತೇವೆ. ಭಯೋತ್ಪಾದನೆಗೆ ಉಳಿದ ಸಣ್ಣ ಜಾಗವನ್ನೂ ನೆಲಸಮ ಮಾಡಬೇಕಿದೆ. ಸಣ್ಣ ಜಾಗವನ್ನೂ ನೆಲಸಮ ಮಾಡುವ ಸಮಯ ಈಗ ಬಂದಿದೆ ಎಂದಿದ್ದಾರೆ.

ಶಾಂತಿ, ಸುರಕ್ಷತೆ ವಿಚಾರದಲ್ಲಿ ರಾಜಿ ಮಾತೇ ಇಲ್ಲ, ದಾಳಿ ಮಾಡಿದವರ ಕಲ್ಪನೆಗೂ ಮೀರಿದ ಪ್ರತ್ಯುತ್ತರ ನೀಡುತ್ತೇವೆ. ನಮ್ಮ ದೇಶ ಉಗ್ರರ ವಿರುದ್ಧ ಇದೆ.. ಉಗ್ರರ ಸಂಹಾರಕ್ಕೆ ಕ್ರಮ ತೆಗೆದುಕೊಳ್ತೇವೆ. ಮಾನವೀಯತೆ ಪರ ಇರೋರು ಜೊತೆಗಿದ್ದಾರೆ. ಶಾಂತಿ ಮತ್ತು ಸುರಕ್ಷತೆ ದೇಶದ ಅಭಿವೃದ್ಧಿಗೆ ಅವಶ್ಯಕ. ಶಾಂತಿ, ಸುರಕ್ಷತೆ ವಿಚಾರದಲ್ಲಿ ರಾಜಿ ಮಾತೇ ಇಲ್ಲ ಎಂದು ಬಿಹಾರದಲ್ಲಿ ಪಾಕಿಸ್ತಾನಕ್ಕೆ ಮೋದಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.








