ಭುವನೇಶ್ವರ: ಪ್ರದಾನಿ ನರೇಂದ್ರ ಮೋದಿ (Narendra Modi) ಆಗಾಗ ಸರಳತೆ ಮೆರೆದು, ಜನರ ಮನ ಗೆಲ್ಲುತ್ತಿದ್ದರು. ಈಗ ಮಂಡಿಯೂರಿ ವೃದ್ಧೆಯೊಬ್ಬರ ಕಾಲಿಗೆ ನಮಸ್ಕರಿಸಿದ್ದು, ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
![](https://pratidhvani.com/wp-content/uploads/2024/05/Kamala-Maharana-1.png)
ವೀಡಿಯೋ ವೈರಲ್ ಬೆನ್ನಲ್ಲೇ ಆ ವೃದ್ಧೆಯ ಕುರಿತು ಚರ್ಚೆಗಳು ಶುರುವಾಗಿವೆ. ಈ ವೃದ್ಧೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಫೆಬ್ರವರಿ 26 ರಂದು 98 ನೇ ಆವೃತ್ತಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು.
![](https://pratidhvani.com/wp-content/uploads/2024/05/NARENDRA-MODI-TEMPLE.png)
ಕಮಲಾ ಮಹಾರಾಣಾ (Kamala Maharana) ಎಂಬುವುದು ವೃದ್ಧೆಯ ಹೆಸರು. ಒಡಿಶಾ ಮೂಲದ ಇವರು ತ್ಯಾಜ್ಯ ವಸ್ತುಗಳನ್ನು ಬಳಸಿ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಗುರುತಿಸಿ ಕೊಂಡಾಡಿದ್ದಾರೆ.
![](https://pratidhvani.com/wp-content/uploads/2024/05/GO1Xa5TXMAAtNHk.jpg)
ಪ್ರಧಾನಿಯವರು ಚುನಾವಣಾ ರ್ಯಾಲಿಯ ಹಿನ್ನೆಲೆಯಲ್ಲಿ ಒಡಿಶಾದ ಕೇಂದ್ರಪಾರಕ್ಕೆ ತೆರಳಿದ್ದರು. ನಂತರ ಅಲ್ಲಿ ಕಮಲಾ ಮಹಾರಾಣಾ ಅವರನ್ನು ಭೇಟಿಯಾದರು. ಈ ವೇಳೆ ಕಮಲಾ ಅವರು ಮೋದಿಯವರ ಕಾಲಿಗೆ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಕೂಡ ಮಂಡಿಯೂರಿ ಕಮಲಾ ಕಾಲಿಗೆ ನಮಸ್ಕರಿಸಿದ್ದಾರೆ. ಇದನ್ನು ಕಂಡ ಜನರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಪ್ರಧಾನಿಯ ಸರಳತೆಗೆ ಎಲ್ಲರೂ ಮುಖವಿಸ್ಮಿತರಾಗಿದ್ದಾರೆ.