ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಆರಂಭಿಸಿದ್ದಾರೆ.
ನಾಳೆ ಬೆಳಿಗ್ಗೆಯವರೆಗೂ ಇಲ್ಲೇ ಧ್ಯಾನ ಮಾಡುವ ನರೇಂದ್ರ ಮೋದಿ, ಚಿಕಾಗೋದ ಸರ್ವಧರ್ಮ ಸಮ್ಮೇಳನಕ್ಕೆ ಹೋಗುವ ಮುನ್ನ ಕನ್ಯಾಕುಮಾರಿಯಲ್ಲಿ ಧ್ಯಾನದಲ್ಲಿ ಮಗ್ನರಾಗಲಿದ್ದಾರೆ.
ಈಗ ವಿವೇಕಾನಂದರ ಮತ್ತೊಂದು ಹೆಸರಾದ ನರೇಂದ್ರ ಹೆಸರಿನ ಮೋದಿಯಿಂದ ಅದೇ ಸ್ಥಳದಲ್ಲಿ ಧ್ಯಾನ ಮಾಡುತ್ತಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಧ್ಯಾನ ಮಗ್ನರಾಗಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಸುಮಾರು 45 ಗಂಟೆಗಳ ಕಾಲ ಕನ್ಯಾಕುಮಾರಿ ಯಾತ್ರೆ ಕೈಗೊಂಡಿರುವ ಮೋದಿ,
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನ್ಯಾಕುಮಾರಿಯಿಂದಲೇ ಚುನಾವಣಾ ಪ್ರಚಾರ ಭಾಷಣಕ್ಕೆ ಚಾಲನೆ ನೀಡಿದ್ರು.