
ಜನವರಿ 13ರಂದು ಶುರುವಾಗಿದ್ದ ಮಹಾಕುಂಭಮೇಳ ಇಂದು ಶಿವರಾತ್ರಿ ದಿನ ಕೊನೆಗೊಳ್ಳಲಿದೆ.. ಹಾಗಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಲಕ್ಷಾಂತರ ಭಕ್ತರು ಹರಿದು ಬರ್ತಿದ್ದಾರೆ.. ಇಂದು ಅಮೃತ ಸ್ನಾನ ಮಾಡುವ ಮೂಲಕ ಸಾಧುಗಳು ಮಹಾಕುಂಭವನ್ನು ಮುಗಿಸಲಿದ್ದಾರೆ. ಫೆಬ್ರವರಿ 26ರ ಬೆಳಗ್ಗೆ 11.08 ಗಂಟೆಗೆ ಶುರುವಾಗುವ ಅಮೃತ ಸ್ನಾನ, ಫೆಬ್ರವರಿ 27ರ ಬೆಳಗ್ಗೆ 8.54ಕ್ಕೆ ಮುಕ್ತಾಯ ಆಗಲಿದೆ. ಇದು ಮಹಾಕುಂಭದಲ್ಲಿ ಅತ್ಯಂತ ಶ್ರೇಷ್ಠ ಸ್ನಾನ ಎನ್ನಲಾಗಿದೆ.

ಶಿವರಾತ್ರಿ ಹಬ್ಬಕ್ಕಾಗಿ ಹುಬ್ಬಳ್ಳಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಬ್ಬಳ್ಳಿಯ ಜಿಮ್ಖಾನಾ ಮೈದಾನದಲ್ಲಿ ಕ್ಷಮತಾ ಸಂಸ್ಥೆ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಅದ್ಧೂರಿಯಾಗಿ ಶಿವರಾತ್ರಿ ಹಬ್ಬ ಆಚರಿಸಲಾಗ್ತಿದೆ. ಮಹಾಶಿವರಾತ್ರಿಗೆ ಕಾಶಿ ವಿಶ್ವನಾಥೇಶ್ವರ ದರ್ಶನ ಮಾಡಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜಿಮ್ಖಾನಾ ಮೈದಾನದಲ್ಲಿ ಕಾಶಿ ವಿಶ್ವನಾಥ ಮಾದರಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದರ ಜೊತೆಗೆ ಶಿವರಾತ್ರಿಗೆ ಸಂಗೀತ ಸುಧೆ ಹರಿಸಲು, ನೃತ್ಯ ಮಾಡಲು ಹಲವಾರು ಕಲಾವಿದರು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ.

ಇಂದು ಮಹಾಶಿವರಾತ್ರಿ ಹಿನ್ನೆಲೆ ಮಂಡ್ಯದ ಕೆರಗೋಡಿನಲ್ಲಿ ಅದ್ದೂರಿ ಎರಡನೇ ವರ್ಷದ ಪಂಚಲಿಂಗೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಡ್ಯ ಶಾಸಕ ಗಣಿಗ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ನಟ, ನಟಿಯರು, ಬಿಗ್ ಬಾಸ್ ಸ್ಪರ್ಧಿಗಳು ಸೇರಿದಂತೆ ಪ್ರಖ್ಯಾತ ಗಾಯಕರು ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಾಕಷ್ಟು ಜನ ಆಗಮಿಸಬೇಕು ಎಂದು ನಟ ದೃವ ಸರ್ಜಾ ಮನವಿ ಮಾಡಿಕೊಂಡಿದ್ದಾರೆ.