ನಾಡಿ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷದ ಜೊತೆಗೆ ಹೊಸತನದ ಹುರುಪು ಮತ್ತು ಉತ್ಸಾಹ ಕೂಡ ಎಲ್ಲೆಡೆ ಮೂಡಲಿ. ಸುತ್ತ ಪರಿಸರದಲ್ಲೂ, ಎಲ್ಲರ ಬದುಕಲ್ಲೂ ಹೊಸ ಚೈತನ್ಯ ಚಿಮ್ಮಲಿ…
ಈ ಹಾರೈಕೆಯೊಂದಿಗೆ ʼಪ್ರತಿಧ್ವನಿʼ ನಿಮ್ಮ ನಿರೀಕ್ಷೆಗೆ ತಕ್ಕಂತೆ ಬದಲಾಗುತ್ತಿದೆ. ನಿಮಗೆ ಇನ್ನಷ್ಟು ಹೊಸತನವನ್ನು ಕೊಡಲು ನಾವು ಸಜ್ಜಾಗಿದ್ದೇವೆ. ಹಾಗಾಗಿ ಇಂದಿನಿಂದ ಹೊಸತನ ಮೈಗೂಡಿಸಿಕೊಂಡು, ಹೊಸ ವಿನ್ಯಾಸದೊಂದಿಗೆ ವಿಭಿನ್ನ ಬರಹ, ವಿಶೇಷ ದೃಶ್ಯ ಹೊತ್ತ ‘ಪ್ರತಿಧ್ವನಿ’ ನಿಮ್ಮ ಮುಂದೆ ಬರಲಿದೆ.
ಎಂದಿನಂತೆ ಸುದ್ದಿ, ಸುದ್ದಿ ವಿಶ್ಲೇಷಣೆ, ಅಭಿಮತಗಳ ಜೊತೆಗೆ ಇದೀಗ ನಿಮಗಾಗಿ ಸಿನಿಮಾ, ರಂಗಭೂಮಿ, ಕ್ರೀಡೆ ಮುಂತಾದ ಮನರಂಜನೆ ವಲಯದ ಆಗುಹೋಗು, ಗಾಸಿಪ್, ಸೆಲೆಬ್ರಿಟಿಗಳ ಸಂದರ್ಶನಗಳಿಗೂ ನಿಮ್ಮ ‘ಪ್ರತಿಧ್ವನಿ‘ ವೇದಿಕೆಯಾಗಲಿದೆ. ಜೊತೆಗೆ ಹೊಸ ಅಂಕಣಗಳು ಕೂಡ ನಮ್ಮ ಓದುಗರಿಗೆ ಹೊಸ ವರ್ಷದ ಉಡುಗೊರೆಯಾಗಿ ಸೇರಿಕೊಂಡಿವೆ.
ಹೀಗೆ ವಿನ್ಯಾಸ ಮತ್ತು ಹೂರಣ; ಎರಡರಲ್ಲೂ ಹೊಸತನ ತುಂಬಿಕೊಂಡು ಹೊಸ ವರ್ಷಕ್ಕೆ ನಿಮ್ಮನ್ನು ಎದುರುಗೊಳ್ಳುತ್ತಿದೆ ಕನ್ನಡದ ಅತ್ಯಂತ ವಿಶ್ವಾಸಾರ್ಹ ಮತ್ತು ವೃತ್ತಿಪರ ‘ಪ್ರತಿಧ್ವನಿ’ ಮೀಡಿಯಾ.
ನಿಮ್ಮ ಸಹಕಾರ ಮತ್ತು ಬೆಂಬಲ ಸದಾ ಇರಲಿ…