ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿ ಇದ್ದಾಗ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ 40 ಪರ್ಸೆಂಟ್ ಆರೋಪ, ಬಿಟ್ ಕಾಯಿನ್‌ನಲ್ಲಿ ಸಾವಿರಾರು ಕೋಟಿ ಹಗರಣ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಿರಿ. ಇನ್ನು ಪಿಎಸ್‌ಐ ಹಗರಣದಲ್ಲಿ ಯಾಱರು ಭಾಗಿಯಾಗಿದ್ದಾರೆ ಎಂಬುದನ್ನು ನಿಮ್ಮ ಸರ್ಕಾರದಲ್ಲಿ ಸೂಕ್ತ ತನಿಖೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯ ಮಾಡಿದ್ದಾರೆ. ಬಿಜೆಪಿಯವರು ಭಾಗಿಯಾಗಿದ್ರೆ ಅಂತಹ ನಾಯಕರನ್ನು ಹಿಡಿದು ತಂದು ಶಿಕ್ಷೆ ಕೊಡಿ ಎಂದು ಮೈಸೂರಿನಲ್ಲಿ ಗುಡುಗಿದ್ದಾರೆ. ಇದರ ಜೊತೆಗೆ ಸೀನಿಯರ್ಸ್ ನಾಯಕರು ಅಡ್ಜಸ್ಟ್‌ಮೆಂಟ್ ರಾಜಕೀಯ ಯಾಕೆ ಮಾಡ್ತೀರಿ ಎಂದು ಮತ್ತೊಂದು ಬಾಂಬ್ ಹಾಕಿದ್ದಾರೆ.

ಕಾಂಗ್ರೆಸ್ ವಿರುದ್ಧ ಬುಟ್ಟಿಯಲ್ಲಿ ಹಾವು ತೋರಿಸಿದ್ದ ಬಿಜೆಪಿ..!
ಪ್ರತಾಪ್ ಸಿಂಹ ಆರೋಪಕ್ಕೆ ಇದೂ ಒಂದೂ ಕಾರಣ. ಕಳೆದ ಬಾರಿ ಅಧಿಕಾರ ಹಿಡಿದಿದ್ದ ಬಿಜೆಪಿ, ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಅರ್ಕಾವತಿ ಹಗರಣ, ಡಿ-ನೋಟಿಫಿಕೇಶನ್, ಕೆಂಪಣ್ಣ ಆಯೋಗದ ವರದಿ ಬಗ್ಗೆ ತನಿಖೆ ಮಾಡ್ತೇವೆ ಎಂದು ಆಗ್ಗಾಗ್ಗೆ ಬುಟ್ಟಿಯಲ್ಲಿ ಹಾವು ತೋರಿಸುವ ಕೆಲಸವನ್ನು ಮಾತ್ರವೇ ಮಾಡಿತ್ತು. ಆದರೆ ತನಿಖೆಯನ್ನು ನಮ್ಮ ಸರ್ಕಾರ ಇದ್ದಾಗಲೂ ಮಾಡಲಿಲ್ಲ. ಈಗ ನೀವೂ ಕೂಡ ನಮ್ಮ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರನ್ನು ಹೆದರಿಸುವುದು. ಅದೇ ರೀತಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಬಿಜೆಪಿ ನಾಯಕರನ್ನು ಹೆದರಿಸುವುದು ಅಷ್ಟೇ ನಡೆಯುತ್ತದೆ. ಯಾಕಂದ್ರೆ ರಾಜಕಾರಣದಲ್ಲಿ ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಳ್ತೀರಿ ಎಂದು ನೇರವಾಗಿಯೇ ಹೇಳಿದ್ದಾರೆ. ಬಿಜೆಪಿ ಅಕ್ರಮಗಳ ಬಗ್ಗೆ ತನಿಖೆ ಮಾಡಿ ಶಿಕ್ಷೆ ಕೊಡಿಸಿದ್ರೆ. ನಿಮ್ಮ ಕಾಲಿಗೆ ಬಿದ್ದು ಪಾದಪೂಜೆ ಮಾಡುತ್ತೇನೆ ಎಂದು ಹೇಳಿದ್ದೇನೆ, ಈಗಲೂ ಅದೇ ಮಾತಿಗೆ ಬದ್ಧ ಎಂದಿದ್ದಾರೆ.

ಸಂಸದ ಸಿಂಹ ಮಾತಿಗೆ ದನಿಗೂಡಿಸಿದ ಸಿ.ಟಿ ರವಿ..!
ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಅಡ್ಜೆಸ್ಟ್‌ಮೆಂಟ್ ರಾಜಕೀಯ ಹೇಳಿಕೆ ಬಗ್ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯಿಸಿದ್ದು, ಕೆಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಮಾತಾಡ್ತೀವಿ ಎಂದಿದ್ದಾರೆ. ಆದರೆ ಇದೇ ಸಿ.ಟಿ ರವಿ ನಮ್ಮ ನಾಯಕರು ಮಾಡಿದ ರಾಜಿ ರಾಜಕಾರಣ ಮಾಡದಿದ್ದರೆ ನಾವು ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿಗೆ ನಾವು ಬರುತ್ತಿರಲಿಲ್ಲ. ಎದುರಾಳಿಗಳನ್ನು ಬೀದಿಗೆ ನಿಲ್ಲಿಸಲು ಸಾಕಷ್ಟು ಅವಕಾಶವಿತ್ತು. ಅರ್ಕಾವತಿ, ಸೋಲಾರ್ ಪ್ಯಾನಲ್ ಅಕ್ರಮದ ಬಗ್ಗೆ ತನಿಖೆ ನಡೆಸಿದ್ದರೆ, ನಾವು ಆರೋಪಿಗಳಾಗುವ ಅವಶ್ಯಕತೆ ಇರಲಿಲ್ಲ ಎಂದಿದ್ದರು. ಕೆಲವರ ಹೊಂದಾಣಿಕೆ ರಾಜಕೀಯದಿಂದ ನಾವು ಅಂದರೆ ಬಿಜೆಪಿ ಈ ರೀತಿಯ ಸೋಲಿಗೆ ಕಾರಣ ಎಂದೂ ತಿಳಿಸಿದ್ದರು. ಇದೀಗ ಸಿ.ಟಿ ರವಿ ಮಾತನ್ನೇ ಸಂಸದ ಪ್ರತಾಪ್ ಸಿಂಹ ಪುನರುಚ್ಛಾರ ಮಾಡಿದ್ದಾರೆ. ಇವರಿಬ್ಬರ ಮಾತು ಯಾರ ಕಡೆಗೆ ಬೊಟ್ಟು ಮಾಡುತ್ತಿದೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.
ಬಿಎಸ್‌ವೈ ವಿರುದ್ಧ ಕಿಡಿ, ವಿಜಯೇಂದ್ರ ಸಿಲುಕಿಸಲು ಸ್ಕೆಚ್..!
ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಸಿದ್ದರಾಮಯ್ಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಯಾವುದೇ ತನಿಖೆ ಮಾಡಲಿಲ್ಲ. ಒಂದು ವೇಳೆ ತನಿಖೆ ಮಾಡಿದ್ದರೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಕಾನೂನು ಕುಣಿಕೆಯಲ್ಲಿ ಸಿಲುಕಿಸಬಹುದಿತ್ತು. ಆ ಬಳಿಕ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ಯಡಿಯೂರಪ್ಪ ಅವರ ಹಾದಿಯನ್ನೇ ಅನುಸರಿಸಿತ್ತು. ಇದೀಗ ಬಿಟ್‌ಕಾಯಿನ್, ಪಿಎಸ್‌ಐ ಹಗರಣ ಸೇರಿದಂತೆ ಹಲವಾರು ಹಗರಣದಲ್ಲಿ ಬಿ.ವೈ ವಿಜಯೇಂದ್ರ ಅವರ ಕೈವಾಡ ಇದೆ ಎನ್ನುವುದು ಬಿಜೆಪಿ ನಾಯಕರ ಗುಮಾನಿ. ಇದೀಗ ಬಹುತೇಕ ನಾಯಕರನ್ನು ಸೋಲಿಸಲು ಯಡಿಯೂರಪ್ಪ ಅವರೇ ಕಾರಣ ಎನ್ನುವ ಲೆಕ್ಕಾಚಾರ ಇದ್ದು, ತನಿಖೆಗೆ ಆಗ್ರಹ ಮಾಡುವ ಮೂಲಕ ವಿಜಯೇಂದ್ರ ಅವರನ್ನೇ ಸಿಲುಕಿಸಿದ್ರೆ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಹಿಡಿತ ತೆಗೆದುಕೊಳ್ಳಲು ಅನುಕೂಲ ಎನ್ನುವ ಸಂಚು ಅಡಗಿದೆ ಎನ್ನಬಹುದು. ಬಿ.ಎಲ್ ಸಂತೋಷ್ ಟೀಂನಿಂದ ಬಿಜೆಪಿಗೆ ಸೋಲಾಯ್ತು ಎನ್ನುವ ಮಾತುಗಳ ನಡುವೆ ಯಡಿಯೂರಪ್ಪ ಹಾಗು ಸಿದ್ದರಾಮಯ್ಯ ನಡುವೆ ನಡೆದಿದ್ದ ಒಪ್ಪಂದದಿಂದಲೇ ಬಿಜೆಪಿಗೆ ಸೋಲಾಯ್ತು ಎನ್ನುವುದನ್ನು ಪ್ರದರ್ಶನ ಮಾಡುವ ಲೆಕ್ಕಾಚಾರ ಅಡಗಿದೆ.
ಕೃಷ್ಣಮಣಿಪ್ರತಾಪ್ ಸಿಂಹ ಹಾಗು ಸಿ.ಟಿ ರವಿ ಬಿಜೆಪಿ ವಿರುದ್ಧ ವಾಗ್ದಾಳಿ.. ಏನಿದು ಮಸಲತ್ತು..?

ಕೃಷ್ಣಮಣಿ