• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಪ್ರತಾಪ್‌ ಸಿಂಹ ಹಾಗೂ ಸಿ.ಟಿ ರವಿ ಬಿಜೆಪಿ ವಿರುದ್ಧ ವಾಗ್ದಾಳಿ.. ಏನಿದು ಮಸಲತ್ತು..?

ಕೃಷ್ಣ ಮಣಿ by ಕೃಷ್ಣ ಮಣಿ
June 14, 2023
in ಅಂಕಣ
0
ಪ್ರತಾಪ್‌ ಸಿಂಹ ಹಾಗೂ ಸಿ.ಟಿ ರವಿ ಬಿಜೆಪಿ ವಿರುದ್ಧ ವಾಗ್ದಾಳಿ.. ಏನಿದು ಮಸಲತ್ತು..?
Share on WhatsAppShare on FacebookShare on Telegram

ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷ ವಿರೋಧ ಪಕ್ಷದಲ್ಲಿ ಇದ್ದಾಗ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ 40 ಪರ್ಸೆಂಟ್‌ ಆರೋಪ, ಬಿಟ್ ಕಾಯಿನ್‌ನಲ್ಲಿ ಸಾವಿರಾರು ಕೋಟಿ ಹಗರಣ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಿರಿ. ಇನ್ನು ಪಿಎಸ್‌ಐ ಹಗರಣದಲ್ಲಿ ಯಾಱರು ಭಾಗಿಯಾಗಿದ್ದಾರೆ ಎಂಬುದನ್ನು ನಿಮ್ಮ ಸರ್ಕಾರದಲ್ಲಿ ಸೂಕ್ತ ತನಿಖೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡಿ ಎಂದು ಸಂಸದ ಪ್ರತಾಪ್‌ ಸಿಂಹ ಒತ್ತಾಯ ಮಾಡಿದ್ದಾರೆ. ಬಿಜೆಪಿಯವರು ಭಾಗಿಯಾಗಿದ್ರೆ ಅಂತಹ ನಾಯಕರನ್ನು ಹಿಡಿದು ತಂದು ಶಿಕ್ಷೆ ಕೊಡಿ ಎಂದು ಮೈಸೂರಿನಲ್ಲಿ ಗುಡುಗಿದ್ದಾರೆ. ಇದರ ಜೊತೆಗೆ ಸೀನಿಯರ್ಸ್ ನಾಯಕರು ಅಡ್ಜಸ್ಟ್‌ಮೆಂಟ್ ರಾಜಕೀಯ ಯಾಕೆ ಮಾಡ್ತೀರಿ ಎಂದು ಮತ್ತೊಂದು ಬಾಂಬ್‌ ಹಾಕಿದ್ದಾರೆ.

ADVERTISEMENT

ಕಾಂಗ್ರೆಸ್‌ ವಿರುದ್ಧ ಬುಟ್ಟಿಯಲ್ಲಿ ಹಾವು ತೋರಿಸಿದ್ದ ಬಿಜೆಪಿ..!

ಪ್ರತಾಪ್‌ ಸಿಂಹ ಆರೋಪಕ್ಕೆ ಇದೂ ಒಂದೂ ಕಾರಣ. ಕಳೆದ ಬಾರಿ ಅಧಿಕಾರ ಹಿಡಿದಿದ್ದ ಬಿಜೆಪಿ, ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಅರ್ಕಾವತಿ ಹಗರಣ, ಡಿ-ನೋಟಿಫಿಕೇಶನ್, ಕೆಂಪಣ್ಣ ಆಯೋಗದ ವರದಿ ಬಗ್ಗೆ ತನಿಖೆ ಮಾಡ್ತೇವೆ ಎಂದು ಆಗ್ಗಾಗ್ಗೆ ಬುಟ್ಟಿಯಲ್ಲಿ ಹಾವು ತೋರಿಸುವ ಕೆಲಸವನ್ನು ಮಾತ್ರವೇ ಮಾಡಿತ್ತು. ಆದರೆ ತನಿಖೆಯನ್ನು ನಮ್ಮ ಸರ್ಕಾರ ಇದ್ದಾಗಲೂ ಮಾಡಲಿಲ್ಲ. ಈಗ ನೀವೂ ಕೂಡ ನಮ್ಮ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ಮಾಡುವುದಿಲ್ಲ. ಕಾಂಗ್ರೆಸ್‌ ಪಕ್ಷ ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕರನ್ನು ಹೆದರಿಸುವುದು. ಅದೇ ರೀತಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಬಿಜೆಪಿ ನಾಯಕರನ್ನು ಹೆದರಿಸುವುದು ಅಷ್ಟೇ ನಡೆಯುತ್ತದೆ. ಯಾಕಂದ್ರೆ ರಾಜಕಾರಣದಲ್ಲಿ ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಳ್ತೀರಿ ಎಂದು ನೇರವಾಗಿಯೇ ಹೇಳಿದ್ದಾರೆ. ಬಿಜೆಪಿ ಅಕ್ರಮಗಳ ಬಗ್ಗೆ ತನಿಖೆ ಮಾಡಿ ಶಿಕ್ಷೆ ಕೊಡಿಸಿದ್ರೆ. ನಿಮ್ಮ ಕಾಲಿಗೆ ಬಿದ್ದು ಪಾದಪೂಜೆ ಮಾಡುತ್ತೇನೆ ಎಂದು ಹೇಳಿದ್ದೇನೆ, ಈಗಲೂ ಅದೇ ಮಾತಿಗೆ ಬದ್ಧ ಎಂದಿದ್ದಾರೆ.

ಸಂಸದ ಸಿಂಹ ಮಾತಿಗೆ ದನಿಗೂಡಿಸಿದ ಸಿ.ಟಿ ರವಿ..!

ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಅಡ್ಜೆಸ್ಟ್‌ಮೆಂಟ್ ರಾಜಕೀಯ ಹೇಳಿಕೆ ಬಗ್ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯಿಸಿದ್ದು, ಕೆಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಮಾತಾಡ್ತೀವಿ ಎಂದಿದ್ದಾರೆ. ಆದರೆ ಇದೇ ಸಿ.ಟಿ ರವಿ ನಮ್ಮ ನಾಯಕರು ಮಾಡಿದ ರಾಜಿ ರಾಜಕಾರಣ ಮಾಡದಿದ್ದರೆ ನಾವು ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿಗೆ ನಾವು ಬರುತ್ತಿರಲಿಲ್ಲ. ಎದುರಾಳಿಗಳನ್ನು ಬೀದಿಗೆ ನಿಲ್ಲಿಸಲು ಸಾಕಷ್ಟು ಅವಕಾಶವಿತ್ತು. ಅರ್ಕಾವತಿ, ಸೋಲಾರ್‌ ಪ್ಯಾನಲ್‌ ಅಕ್ರಮದ ಬಗ್ಗೆ ತನಿಖೆ ನಡೆಸಿದ್ದರೆ, ನಾವು ಆರೋಪಿಗಳಾಗುವ ಅವಶ್ಯಕತೆ ಇರಲಿಲ್ಲ ಎಂದಿದ್ದರು. ಕೆಲವರ ಹೊಂದಾಣಿಕೆ ರಾಜಕೀಯದಿಂದ ನಾವು ಅಂದರೆ ಬಿಜೆಪಿ ಈ ರೀತಿಯ ಸೋಲಿಗೆ ಕಾರಣ ಎಂದೂ ತಿಳಿಸಿದ್ದರು. ಇದೀಗ ಸಿ.ಟಿ ರವಿ ಮಾತನ್ನೇ ಸಂಸದ ಪ್ರತಾಪ್‌ ಸಿಂಹ ಪುನರುಚ್ಛಾರ ಮಾಡಿದ್ದಾರೆ. ಇವರಿಬ್ಬರ ಮಾತು ಯಾರ ಕಡೆಗೆ ಬೊಟ್ಟು ಮಾಡುತ್ತಿದೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.

ಬಿಎಸ್‌ವೈ ವಿರುದ್ಧ ಕಿಡಿ, ವಿಜಯೇಂದ್ರ ಸಿಲುಕಿಸಲು ಸ್ಕೆಚ್‌..!

ಈ ಹಿಂದೆ ಬಿ.ಎಸ್‌ ಯಡಿಯೂರಪ್ಪ ಸಿದ್ದರಾಮಯ್ಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್‌ ವಿರುದ್ಧ ಯಾವುದೇ ತನಿಖೆ ಮಾಡಲಿಲ್ಲ. ಒಂದು ವೇಳೆ ತನಿಖೆ ಮಾಡಿದ್ದರೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರನ್ನು ಕಾನೂನು ಕುಣಿಕೆಯಲ್ಲಿ ಸಿಲುಕಿಸಬಹುದಿತ್ತು. ಆ ಬಳಿಕ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ಯಡಿಯೂರಪ್ಪ ಅವರ ಹಾದಿಯನ್ನೇ ಅನುಸರಿಸಿತ್ತು. ಇದೀಗ ಬಿಟ್‌ಕಾಯಿನ್‌, ಪಿಎಸ್‌ಐ ಹಗರಣ ಸೇರಿದಂತೆ ಹಲವಾರು ಹಗರಣದಲ್ಲಿ ಬಿ.ವೈ ವಿಜಯೇಂದ್ರ ಅವರ ಕೈವಾಡ ಇದೆ ಎನ್ನುವುದು ಬಿಜೆಪಿ ನಾಯಕರ ಗುಮಾನಿ. ಇದೀಗ ಬಹುತೇಕ ನಾಯಕರನ್ನು ಸೋಲಿಸಲು ಯಡಿಯೂರಪ್ಪ ಅವರೇ ಕಾರಣ ಎನ್ನುವ ಲೆಕ್ಕಾಚಾರ ಇದ್ದು, ತನಿಖೆಗೆ ಆಗ್ರಹ ಮಾಡುವ ಮೂಲಕ ವಿಜಯೇಂದ್ರ ಅವರನ್ನೇ ಸಿಲುಕಿಸಿದ್ರೆ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಹಿಡಿತ ತೆಗೆದುಕೊಳ್ಳಲು ಅನುಕೂಲ ಎನ್ನುವ ಸಂಚು ಅಡಗಿದೆ ಎನ್ನಬಹುದು. ಬಿ.ಎಲ್‌ ಸಂತೋಷ್‌‌ ಟೀಂನಿಂದ ಬಿಜೆಪಿಗೆ ಸೋಲಾಯ್ತು ಎನ್ನುವ ಮಾತುಗಳ ನಡುವೆ ಯಡಿಯೂರಪ್ಪ ಹಾಗು ಸಿದ್ದರಾಮಯ್ಯ ನಡುವೆ ನಡೆದಿದ್ದ ಒಪ್ಪಂದದಿಂದಲೇ ಬಿಜೆಪಿಗೆ ಸೋಲಾಯ್ತು ಎನ್ನುವುದನ್ನು ಪ್ರದರ್ಶನ ಮಾಡುವ ಲೆಕ್ಕಾಚಾರ ಅಡಗಿದೆ.

ಕೃಷ್ಣಮಣಿಪ್ರತಾಪ್‌ ಸಿಂಹ ಹಾಗು ಸಿ.ಟಿ ರವಿ ಬಿಜೆಪಿ ವಿರುದ್ಧ ವಾಗ್ದಾಳಿ.. ಏನಿದು ಮಸಲತ್ತು..?

ಕೃಷ್ಣಮಣಿ

Tags: BJPBY VijayendraCompromise PoliticsCT RavieshwarappaPratap SinghYeddyurappa
Previous Post

ಸಂಸದ ಪ್ರತಾಪ್​ ಸಿಂಹರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ : ಸಿಎಂ ಸಿದ್ದರಾಮಯ್ಯ

Next Post

ಡಿಸಿಎಂ ಡಿ.ಕೆ ಶಿವಕುಮಾರರನ್ನು ಅಡಕತ್ತರಿಯಲ್ಲಿ ಸಿಲುಕಿಸಿದ್ದು ಯಾರು..?

Related Posts

Top Story

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 12, 2025
0

“ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಬೆಳಗಾವಿಯ ಸರ್ಕಿಟ್ ಹೌಸ್ ಹಾಗೂ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳ...

Read moreDetails

ಬಗರ್ ಹುಕುಂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು-ಭೂ ಮಾಫಿಯಾ ವಿರುದ್ಧ ಕ್ರಿಮಿನಲ್ ಪ್ರಕರಣ: ಕೃಷ್ಣ ಬೈರೇಗೌಡ

December 12, 2025

ಅಧಿವೇಶನದ ಬಳಿಕ ಡಿಕೆಶಿ ಸಿಎಂ ಆಗೇ ಆಗ್ತಾರೆ…!! ‌ ಯತೀಂದ್ರಗೆ ಕೌಂಟರ್‌ ನೀಡಿದ ಇಕ್ಬಾಲ್‌ ಹುಸೇನ್.

December 12, 2025

ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಖರೀದಿ ಮಾಡಲ್ಲ, ಬಾಡಿಗೆ ಪಡೆಯಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

December 9, 2025

ಗಣ್ಯ ವ್ಯಕ್ತಿಗಳ ಪ್ರಯಾಣಕ್ಕೆ ಚಾಪರ್, ವಿಮಾನ ಬಾಡಿಗೆ ಕುರಿತ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್‌..

December 9, 2025
Next Post
ಡಿಸಿಎಂ ಡಿ.ಕೆ ಶಿವಕುಮಾರರನ್ನು ಅಡಕತ್ತರಿಯಲ್ಲಿ ಸಿಲುಕಿಸಿದ್ದು ಯಾರು..?

ಡಿಸಿಎಂ ಡಿ.ಕೆ ಶಿವಕುಮಾರರನ್ನು ಅಡಕತ್ತರಿಯಲ್ಲಿ ಸಿಲುಕಿಸಿದ್ದು ಯಾರು..?

Please login to join discussion

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!