ಯಾವುದೇ ನಿಯಮಾವಳಿಗಳಿಗೆ ಒಗ್ಗಿಸದೆ ಕೇಂದ್ರ ಸರ್ಕಾರ ಲಸಿಕೆಗೆ ಈಗ ಕೊಟ್ಟಿರುವ ಅನುಮೋದನೆ ಭವಿಷ್ಯದಲ್ಲಿ ಲಸಿಕೆಗಳ ವಸ್ತುನಿಷ್ಠ ಮೌಲ್ಯಮಾಪನಗಳಿಗೆ ತೊಡಕಾಗಿ ಪರಿಣಮಿಸಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಲಸಿಕೆ ತೆಗೆದುಕೊಳ್ಳುವುದು ಸ್ವಯಂಪ್ರೇರಿತ ಎಂದು ಸರ್ಕಾರ ಸಮರ್ಥಿಸಿಕೊಂಡರೂ ಕೂಡ ಲಸಿಕೆ ಹಾಕಿಸಿಕೊಳ್ಳದವರಿಗೆ ಅಗತ್ಯ ಸೇವೆಗಳ ನಿರಾಕರಣೆ ಮಾಡಲಾಗುತ್ತಿದೆ.
ಕೋವಿಡ್ ಲಸಿಕೆ ಕಡ್ಡಾಯಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಅಗಸ್ಟ್ 9ರಂದು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಕೇಂದ್ರದ ಲಸಿಕೆ ನಿರ್ವಹಣಾ ಸಮಿತಿಯ ಮಾಜಿ ಮಾಜಿ ಸದಸ್ಯ ಡಾ. ಜೇಕಬ್ ಪುಲಿಯೆಲ್ ಅವರು ಸಲ್ಲಿಸಿರುವ ಮನವಿಯಲ್ಲಿ ವೈದ್ಯಕೀಯ ತಪಾಸಣೆ ಮತ್ತು ಲಸಿಕೆ ಹಂಚಿಕೆಯ ದತ್ತಾಂಶವನ್ನು ಬಹಿರಂಗೊಳಿಸುವಂತೆ ಕೋರಿಕೊಂಡಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಪುಲಿಯೆಲ್ ಪರ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ವಕ್ಕಲಾತ್ತುವಹಿಸಿಕೊಂಡಿದ್ದರು. ಈ ಸಂಬಂಧ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠ ಆರೋಗ್ಯ ಸಚಿವಾಲಯದಿಂದ ಪ್ರತಿಕ್ರಿಯೆ ಕೇಳಿತು. ಕೊರೋನಾ ಲಸಿಕೆಯ ಪಾರದರ್ಶಕತೆ ಕುರಿತಾದ ಈ ಅರ್ಜಿಯನ್ನು ಸ್ವೀಕರಿಸಿದ ಕಾರಣಕ್ಕೆ ಲಸಿಕೆ ಪರಿಣಾಮಕಾರಿಯಲ್ಲ ಎಂಬ ಸಂದೇಶ ರವಾನೆಯಾಗುವ ಸಂಭವವ ಎದುರು ನೋಡಿದ ಮಾನ್ಯ ನ್ಯಾಯಪೀಠ, ತಕ್ಷಣಕ್ಕೇ ಮಧ್ಯಂತರ ಆದೇಶ ಹೊರಡಿಸಲು ನಿಕರಾರಿಸಿತ್ತು.
ಡಾ. ಜೇಕಬ್ ಪುಲಿಯೆಲ್ (ಪ್ರಶಾಂತ್ ಭೂಷಣ್) ಅರ್ಜಿಯ ಪ್ರಮುಖಾಂಶಗಳು :
ಅಗತ್ಯ ಸೇವೆಗಳನ್ನು ಪಡೆಯುವ ಸಲುವಾಗಿ ಕೊರೋನಾ ಲಸಿಕೆ ಒತ್ತಾಯಪೂರ್ವಕವಾಗಿ ಜನತೆಗೆ ಲಸಿಕೆ ಹಾಕಿಸಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರದ ಸವಿಂಧಾನ ಬಾಹಿರ ನಡೆ ಮತ್ತು ನಾಗರಿಕರ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ಸರ್ಕಾರ ಅಗತ್ಯ ಸೇವೆ ಅಥವಾ ಕೆಲಸಕ್ಕೆ ಹಾಜರಾಗಬೇಕಾದರೆ ಎಂಬ ನೆಪದಲ್ಲಿ ದೇಶದಲ್ಲಿ ಲಸಿಕೆ ಕಡ್ಡಾಯಮಾಡಿದೆ. ಸಂಪೂರ್ಣ ಮತ್ತು ಸೂಕ್ತ ರೀತಿಯ ಪರೀಕ್ಷೆಯಿಲ್ಲದೆ ಲಸಿಕೆಗೆ ದೇಶದಲ್ಲಿ ತುರ್ತು ಅನುಮೋದನೆ ನೀಡಲಾಗಿದೆ. ಹೀಗಾಗಿ ಲಸಿಕೆ ಬಗ್ಗೆಗಿನ ಸಂಪೂರ್ಣ ವಿವರ ಬಹಿರಂಗಗೊಳಿಸದೆ ಲಸಿಕೆ ಕಡ್ಡಾಯಗೊಳಿಸಿರುವು ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟುಮಾಡಿದಂತೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಜನರು ಸ್ವಯಂ ಪ್ರೇರಿತರಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳತ್ತಿದ್ದಾರೆ ಎಂದು ಸರ್ಕಾರವು ಅನೇಕ ಆರ್ಟಿಐಗಳಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಕೂಡ ದೇಶದಾದ್ಯಂತ ವಿವಿಧ ಪ್ರಾಧಿಕಾರಗಳು ಈಗ ಲಸಿಕೆ ಕಡ್ಡಾಯಗೊಳಿಸುತ್ತಿದೆ ಎಂಬ ವಿಚಾರ ಈ ಅರ್ಜಿ ಎತ್ತಿಹಿಡಿದಿದೆ. ಸಂವಿಧಾನದ 21ನೇ ವಿಧಿಯ ಪ್ರಕಾರ ಒರ್ವ ವ್ಯಕ್ತಿ ಆತನ ಆರೋಗ್ಯಕ್ಕೆ ಸಂಬಂಧಿಸಿದ ಸ್ವಾಯತ್ತೆತಯ ಹಕ್ಕು ಹಾಗೂ ಸ್ವಯಂ ನಿರ್ಧಾರದ ಹಕ್ಕು ಹೊಂದಿರುತ್ತಾನೆ ಎಂಬ ವಿಚಾರ ಅರ್ಜಿಯಲ್ಲಿ ಉಲ್ಲೇಖಿಸುತ್ತಾ, ಕೆ ಎಸ್ ಪುಟ್ಟಸ್ವಾಮಿ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣವನ್ನು ನೆನಪಿಸಿಕೊಳ್ಳಲಾಗಿದೆ. ಸದ್ಯ ಬಳಸಿಕೊಳ್ಳಲಾಗುತ್ತಿರುವ ಲಸಿಕೆಯ ಸುರಕ್ಷತೆಯ ಬಗ್ಗೆ ಯಾವುದೇ ಸಮರ್ಪಕ ರೀತಿಯ ಅಧ್ಯಯನಗಳು ನಡೆಯದೆ, ಅದರ ಪಾರದರ್ಶಕತೆಯನ್ನೂ ಸಾರ್ವಜನಿಕರಿಗೆ ಬಹಿರಂಗಗೊಳಿಸದೆ ತುರ್ತಾಗಿ ಲಸಿಕೆ ಬಳಕೆಗೆ ಕೇಂದ್ರ ಸರ್ಕಾರ ಪರವಾನಗೆ ನೀಡಲಾಗಿದೆ.
ಕೇಂದ್ರ ಸರ್ಕಾರ ಹೀಗೆ ಯಾವುದೇ ಪೂರ್ವ ಅಧ್ಯಯನ ನಡೆಸದೆ ತುರ್ತಾಗಿ ಲಸಿಕೆಗೆ ಅನುಮೋದನೆ ಕೊಟ್ಟಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅನುಸರಿಸುತ್ತಿರುವ ವೈಜ್ಞಾನಿಕ ನಿಯಗಳ ಸ್ಪಷ್ಟ ಉಲ್ಲಂಘನನೆಯಾಗಿದೆ. ಹೀಗೆ ಯಾವುದೇ ನಿಯಮಾವಳಿಗಳಿಗೆ ಒಗ್ಗಿಸದೆ ಕೇಂದ್ರ ಸರ್ಕಾರ ಲಸಿಕೆಗೆ ಈಗ ಕೊಟ್ಟಿರುವ ಅನುಮೋದನೆ ಭವಿಷ್ಯದಲ್ಲಿ ಲಸಿಕೆಗಳ ವಸ್ತುನಿಷ್ಠ ಮೌಲ್ಯಮಾಪನಗಳಿಗೆ ತೊಡಕಾಗಿ ಪರಿಣಮಿಸಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಲಸಿಕೆ ತೆಗೆದುಕೊಳ್ಳುವುದು ಸ್ವಯಂಪ್ರೇರಿತ ಎಂದು ಸರ್ಕಾರ ಸಮರ್ಥಿಸಿಕೊಂಡರೂ ಕೂಡ ಲಸಿಕೆ ಹಾಕಿಸಿಕೊಳ್ಳದವರಿಗೆ ಅಗತ್ಯ ಸೇವೆಗಳ ನಿರಾಕರಣೆ ಮಾಡಲಾಗುತ್ತಿದೆ.
ವಕೀಲ ಪ್ರಶಾಂತ್ ಭೂಷಣ್ ಈ ಸಂಬಂಧ ಎರಡು ಹಂತದ ವಾದವನ್ನು ಮಂಡಿಸಿದ್ದಾರೆ. ಜನರಿಗೆ ತಮ್ಮ ಆಯ್ಕೆಯನ್ನು ಮುಕ್ತವಾಗಿ ಆಯ್ಕೆ ಮಾಡಲು ಅನುವಾಗುವಂತೆ ಪ್ರಾಯೋಗಿಕವಾಗಿ ದತ್ತಾಂಶ ಬಹಿರಂಗಗೊಳಿಸುವಂತೆ ಆದೇಶಿಸಲು ಕೋರಿಕೊಂಡಿದ್ದಾರೆ. ಅಕಸ್ಮಾತ್ ಲಸಿಕೆ ಪಾರದರ್ಶಕತೆ ಉಳಿಸಿಕೊಂಡಿಲ್ಲ ಎಂದಾದಲ್ಲಿ ಜನರಿಗೆ ಲಸಿಕೆಯ ಮೇಲಿನ ವಿಶ್ವಾಸ ಕಳೆದುಕೊಳ್ಳಲಿದ್ದಾರೆ. ಮತ್ತು ಲಸಿಕೆ ಹಾಕಿಸಿಕೊಳ್ಳಲು ಜನರಲ್ಲಿ ಹಿಂಜರಿಕೆಯ ಭಾವ ಮೂಡಲಿದೆ ಎಂದು ವಾದ ಮಂಡಿಸಿದ್ದಾರೆ.

ವಾದ ಆಲಿಸಿದ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠ, ಅರ್ಜಿದಾರರ ಸಾಮಾಜಿಕ ಕಳಕಳಿಯನ್ನು ಪ್ರಶಂಸಿಸುತ್ತಲೇ ಸದ್ಯ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಲಸಿಕೆ ಅಭಿಯಾನವನ್ನು ಏಕಾಏಕಿಯಾಗಿ ಸ್ಥಗಿತಗೊಳಿಸಲು ಸೂಚಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದೇ ವೇಳೆ ಅರ್ಜಿದಾರರು ಲಸಿಕೆ ವಿರೋಧಿಯಲ್ಲ ಎಂಬುವುದನ್ನು ಪೀಠ ಸ್ಪಷ್ಟ ಪಡಿಸಿದೆ. ಸದ್ಯದ ಮಟ್ಟಿಗೆ ಲಸಿಕೆ ಬಗ್ಗೆ ನಡೆದ ಅಧ್ಯಯನಗಳು ವೈರಾಣುವಿನ ಹೊಸ ಮಾದರಿಯ ತಳಿಗಳಿಗೂ ಪ್ರತಿರೋಧಕವಾಗಿ ಕೆಲಸ ಮಾಡುತ್ತಿರುವುದನ್ನು ನ್ಯಾಯಾಪೀಠ ನೆನಪಿಸಿಕೊಂಡಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯವಾದಿ ಪ್ರಶಾಂತ್ ಭೂಷಣ್, ಬಲವಂತವಾದ ಆದೇಶಗಳು ಜನರ ಮೂಲಭೂತವಾದ ಆಯ್ಕೆಯ ಹಕ್ಕಿನ ಉಲ್ಲಂಘನೆಯಾಗಿದ್ದು, ಶೀಘ್ರವೇ ಈ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸುವಂತೆ ನ್ಯಾಯಾಲಯಕ್ಕೆ ಕೇಳಿಕೊಂಡರು.


