ಪ್ರಜ್ವಲ್ ರೇವಣ್ಣನ (Prajwal revanna) ಮೆಡಿಕಲ್ ಚೆಕಪ್ ಗೆ ಒಳಪಡುವ ಮುನ್ನ ಎಸ್ ಐ ಟಿ (SIT) ಪ್ರಾಥಮಿಕ ವಿಚಾರಣೆಯನ್ನು ನಡೆಸಿದೆ. ಈ ಸಂದರ್ಭದಲ್ಲಿ ಹೊಳೆನರಸೀಪುರ ಕೇಸ್ ನಲ್ಲಿ ದೂರು ನೀಡಿದ್ದ ಮಹಿಳೆ ಹಾಗು ಇತರ ವಿಚಾರ ಗಳ ಬಗ್ಗೆ ಪ್ರಶ್ನೆ ಪ್ರಶ್ನೆ ಮಾಡಲಾಗಿದೆ.
![](https://pratidhvani.com/wp-content/uploads/2024/05/March30-kidnap_d-1-1024x576.webp)
ಮಹಿಳೆ ನಿಮ್ಮ ಮನೆಯಲ್ಲಿ ಕೆಲಸ ಮಾಡ್ತಿದ್ದ ಸಮಯದಲ್ಲಿ ಅತ್ಯಾಚಾರ ಮಾಡಿದ್ದೀರಾ ಎಂಬ ಆರೋಪವಿದೆ ಎಂದು ಪ್ರಶ್ನೆ ಮಾಡಿದ್ದಾರೆ ಮತ್ತು ಈ ಹಿಂದೆ ಬಳಕೆ ಮಾಡ್ತಿದ್ದ ಮೊಬೈಲ್ (Mobile) ಎಲ್ಲಿ ಎಂದು SIT ಟೀಮ್ ಪ್ರಜ್ವಲ್ ನ ಪ್ರಶ್ನೆ ಮಾಡಿದೆ.
ಹಲವಾರು ವಿಚಾರ ಗಳ ಬಗ್ಗೆ ಎಸ್ ಐ ಟಿ ಅಧಿಕಾರಿಗಳಿಂದ ವಿಚಾರಣೆ ನಡೆಸಲಾಗಿದ್ದು, ಈಗ ಪ್ರಜ್ವಲ್ ಬಳಿ ಇರುವುದು ಹೊಸ ಮೊಬೈಲ್ ಎಂದು ತಿಳಿದುಬಂದಿದೆ. ಈಗ ವಶಕ್ಕೆ ಪಡೆದ ಮೊಬೈಲ್ ನಲ್ಲಿ ಯಾವ ಫೋಟೊ ಮತ್ತು ವಿಡಿಯೋ ಗಳು ಇಲ್ಲಾ ಎಂದು ಕಚಿತಪಡಿಸಿಕೊಳ್ಳಲಾಗಿದೆ.