• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಪ್ರಜ್ವಲ್‌ ರೇವಣ್ಣ ಮಾಡಿದ್ದು ತಪ್ಪೋ..? ಪೆನ್‌ಡ್ರೈವ್‌ ಹಂಚಿದವರದ್ದು ತಪ್ಪೋ..?

ಪ್ರತಿಧ್ವನಿ by ಪ್ರತಿಧ್ವನಿ
May 1, 2024
in ಇದೀಗ, ದೇಶ, ರಾಜಕೀಯ
0
ಪ್ರಜ್ವಲ್‌ ರೇವಣ್ಣ ಮಾಡಿದ್ದು ತಪ್ಪೋ..? ಪೆನ್‌ಡ್ರೈವ್‌ ಹಂಚಿದವರದ್ದು ತಪ್ಪೋ..?
Share on WhatsAppShare on FacebookShare on Telegram

ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿದೆ. ಕಾಂಗ್ರೆಸ್‌ ನಾಯಕರು ಸಾಧ್ಯವಾದಷ್ಟು ರಾಜಕಾರಣಕ್ಕೆ ಬಳಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ. ಕಾಂಗ್ರೆಸ್‌ ಬೆಂಬಲಿತ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದೆ. ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಗಲ್ಲಿಗೇರಿಸಬೇಕು ಎಂದು ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್‌ ಪಕ್ಷದಿಂದ ಅಮಾನತು ಮಾಡಿರುವ ಜೆಡಿಎಸ್‌ ನಾಯಕರು, ದೇಶದ ಕಾನೂನು ಪ್ರಕಾರ ಪ್ರಜ್ವಲ್‌ ರೇವಣ್ಣ ಮಾಡಿರುವ ತಪ್ಪಿಗೆ ಶಿಕ್ಷೆಯಾಗಲಿ ಎಂದು ಸಹಮತ ಸೂಚಿಸಿದ್ದಾರೆ. ಪ್ರಜ್ವಲ್‌ ರೇವಣ್ಣ ಬಗ್ಗೆ ಮಾತ್ರ ವಿಚಾರ ಕೇಂದ್ರೀಕೃತವಾತವಾಗಿದೆ. ಆದರೆ ಆ ವಿಡಿಯೋದಲ್ಲಿ ಇರುವ

ADVERTISEMENT

ಪ್ರಜ್ವಲ್‌ ಕಾನೂನು ಪ್ರಕಾರ ತಪ್ಪಿತಸ್ಥ ಆಗುವುದು ಅನುಮಾನ..!

ಪ್ರಜ್ವಲ್‌ ರೇವಣ್ಣ ಮಹಿಳೆಯರ ಜೊತೆಗೆ ಲೈಂಗಿಕ ಕ್ರಿಯೆ ಮಾಡಿರುವುದನ್ನು ಯಾರೊಬ್ಬರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅದೂ ಅಲ್ಲದೆ ಅಷ್ಟೊಂದು ಮಹಿಳೆಯರುವ ಜೊತೆಗಿನ ವೈಯಕ್ತಿಕ ಸಂಗತಿಗಳನ್ನು ವಿಡಿಯೋ ಮಾಡಿದ್ದು ಮೂರ್ಖತನದ ಪರಮಾವಧಿ ಎಂದರೂ ಸುಳ್ಳಲ್ಲ, ವಯಸ್ಕ ಮಹಿಳೆ ಹಾಗು ಪುರುಷ ಪರಸ್ಪರ ಸಮ್ಮತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸುವುದು ಕಾನೂನು ಪ್ರಕಾರ ತಪ್ಪಲ್ಲ. ಮಹಿಳೆಯ ಸಮ್ಮತಿಯೊಂದಿಗೆ ವಿಡಿಯೋ ಮಾಡಿಕೊಂಡಿದ್ದರೂ ಅದು ಕಾನೂನು ಪ್ರಕಾರ ತಪ್ಪಾಗುವುದಿಲ್ಲ. ಆದರೆ ಸಾಮಾಜಿಕವಾಗಿ ಓರ್ವ ಜನಪ್ರತಿನಿಧಿ ಆ ರೀತಿ ನಡೆದುಕೊಂಡಿರುವುದನ್ನು ಜನರು ಹೇಗೆ ಸ್ವೀಕಾರ ಮಾಡ್ತಾರೆ ಎನ್ನುವುದೇ ಕುತೂಹಲಕಾರಿ ಸಂಗತಿ.

ರಾಜಕೀಯ ತೆವಲಿಗೆ ಬಳಕೆ ಮಾಡಿಕೊಂಡಿದ್ದು ತಪ್ಪು..!

ಈ ಎಲ್ಲಾ ವಿಡಿಯೋ ಇಂದಿನದ್ದು ಅಲ್ಲ. ಸರಿ ಸುಮಾರು ನಾಲ್ಕೈದು ವರ್ಷಗಳ ಹಿಂದಿನ ಘಟನೆಗಳು ಎಂದು ಹೇಳಲಾಗ್ತಿದೆ. ವಿಡಿಯೋ ಮಾಡಿಟ್ಟುಕೊಂಡಿದ್ದು, ಪ್ರಜ್ವಲ್‌ ಮಾನಸಿಕತೆಯ ಪ್ರತೀಕ ಎನ್ನಬಹುದು. ಆದರೆ ಆ ವಿಡಿಯೋಗಳನ್ನು ಕಳವು ಮಾಡಿ, ಬೇರೊಬ್ಬರಿಗೆ ಹಂಚಿಕೆ ಮಾಡಿದ್ದು, ಲೋಕಸಭಾ ಚುನಾವಣೆಗೂ ಮುನ್ನ ದಿನ ಪೆನ್‌ ಡ್ರೈವ್‌ ಮಾಡಿ ಸಿಕ್ಕ ಸಿಕ್ಕ ಕಡೆ ಹಂಚಿಕೆ ಮಾಡಿರುವುದು ಮಹಾ ಅಪೃಆದ. ಅದೂ ಅಲ್ಲದೆ ಯಾವುದೇ ಮಹಿಳೆಯರ ಮುಖಗಳನ್ನು ಮರೆಮಾಚದೆ ವಿಡಿಯೋಗಳನ್ನು ಹಂಚಿಕೆ ಮಾಡಿದವರೇ ಈಗ ಮಹಿಳೆಯರ ರಕ್ಷಣೆಗಾಗಿ ಪ್ರತಿಭಟನೆ ಮಾಡುತ್ತಿರುವುದು ದುರಂತದ ವಿಚಾರ.

H.D ಕುಮಾರಸ್ವಾಮಿ ಹೇಳುತ್ತಿರೋದ್ರಲ್ಲಿ ನ್ಯಾಯ ಇದೆ..

ಪ್ರಜ್ವಲ್‌ ರೇವಣ್ಣ ತಪ್ಪು ಮಾಡಿದ್ದಾನೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಆ ತಪ್ಪಿಗೆ ಕಾನೂನು ಪ್ರಕಾರ ಶಿಕ್ಷೆ ಆಗುವುದಿದ್ದರೆ ಆಗಲಿ ಎನ್ನುವುದು ಕುಮಾರಸ್ವಾಮಿ ಹೇಳಿಕೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರೆ..! ಹೆದರಿಸಿ ಬೆದರಿಸಿ ಕಾಮಕೇಳಿಗೆ ಬಳಸಿಕೊಂಡಿದ್ದರೆ ಖಂಡಿತ ಶಿಕ್ಷೆ ಆಗುತ್ತದೆ. ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದೇ ಕುಮಾರಸ್ವಾಮಿ ಪ್ರತಿಪಾದಿಸುತ್ತಿದ್ದಾರೆ. ಇನ್ನು ಮಹಿಳೆಯರ ಮುಖವನ್ನು ಬ್ಲರ್‌ ಮಾಡದೆ ಬಿಟ್ಟಿರುವುದು ಎಷ್ಟು ಸರಿ..? ಆ ಕುಟುಂಬಗಳ ಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಆದರೆ ವಿಡಿಯೋಗಳ ಸಂಚಲನ ತಡೆಯುವ ಕೆಲಸ ಮಾಡಿಲ್ಲ. ಮೊದಲು ಹರಿದಾಡುತ್ತಿರುವ ವಿಡಿಯೋ ತಡೆಯುವ ಕೆಲಸ ಮಾಡಬೇಕಿತ್ತು. ಹೆಣ್ಣುಮಕ್ಕಳಿಗೆ ನ್ಯಾಯಬೇಕು ಎಂದು ಆಗ್ರಹಿಸುತ್ತ ಮೊಬೈಲ್‌ನಿಂದ ಮೊಬೈಲ್‌ಗೆ ವಿಡಿಯೋ ಕಳುಹಿಸುತ್ತಿರುವುದು ಅಪರಾಧ ಅಲ್ಲವೇ..?

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಂಸದ ಪ್ರಜ್ವಲ್‌ ರೇವಣ್ಣಸಿದ್ದರಾಮಯ್ಯ
Previous Post

Amazon has 143 billion reasons to keep adding more perks to Prime

Next Post

ಏಕಲವ್ಯನ ಲವ್ ಸ್ಟೋರಿ.. ಮೆಸೇಜ್ ಮಾಡದಂತೆ ಹೆಬ್ಬೆರಳು ಕಟ್..!

Related Posts

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..
Top Story

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

by ಪ್ರತಿಧ್ವನಿ
April 16, 2026
0

ಬೆಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ನಡೆಯುತ್ತಿದ್ದು, ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ಷೇತ್ರ ವಿಂಗಡಣೆ, ಜನಗಣತಿ ಹಾಗೂ ಮಹಿಳಾ ಮೀಸಲಾತಿ...

Read moreDetails
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!

ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!

April 16, 2026
ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

April 16, 2026
ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

April 15, 2026
Next Post
ಏಕಲವ್ಯನ ಲವ್ ಸ್ಟೋರಿ.. ಮೆಸೇಜ್ ಮಾಡದಂತೆ ಹೆಬ್ಬೆರಳು ಕಟ್..!

ಏಕಲವ್ಯನ ಲವ್ ಸ್ಟೋರಿ.. ಮೆಸೇಜ್ ಮಾಡದಂತೆ ಹೆಬ್ಬೆರಳು ಕಟ್..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada