ಸಿಎಂ ಸಿದ್ದರಾಮಯ್ಯ (Cm siddaramaiah) ಮತ್ತು ಗೃಹ ಸಚಿವರ ಬಗ್ಗೆ ಪ್ರತಾಪ್ ಸಿಂಹ (Prathap simha) ವ್ಯಂಗ್ಯ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಶಾಸಕ ಪ್ರದೀಪ್ ಈಶ್ವರ್ (Pradeep ishwar) ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಪ್ರತಾಪ್ ಸಿಂಹ ಲಜ್ಜೆಗೆಟ್ಟ ಮಾಜಿ ಸಂಸದ.ಪ್ರತಾಪ್ ಸಿಂಹ ಅವರೇ ಪೊಲೀಸರ ಮೇಲೆ ಜೀಪ್ ನುಗ್ಗಿಸೋಕೆ ಆಗುತ್ತಾ ? ಸಂಸತ್ ಗೆ ಪಾಸ್ ಕೊಡೋಕೆ ನಿಮ್ಮಂತೆ ಆಯೋಗ್ಯರೇ ನಮ್ಮ ಗೃಹ ಸಚಿವರು ?ಪರಮೇಶ್ವರ್ ಬಗ್ಗೆ ಮಾತನ್ನಾಡುವಾಗ ಮಿತಿ ಇರಲಿ ಎಂದು ಹೇಳಿದ್ದಾರೆ.

ನನ್ನ ಧರ್ಮದ ಬಗ್ಗೆ ಮಾತನ್ನಾಡಿದ್ರೆ ರಕ್ತ ಕುದಿಯುತ್ತೆ.ಹೀಗಿರುವಾಗ ಅವರ ಧರ್ಮವನ್ನು ಬೈಯ್ದರೆ ಸುಮ್ಮನೆ ಇರ್ತಾರಾ ?ನಮ್ಮ ಮುಖ್ಯಮಂತ್ರಿಗಳನ್ನ ಲಜ್ಜೆಗೆಟ್ಟವನು ಅಂತೀರಾ ? ಪರಮೇಶ್ವರ್ ಬಗ್ಗೆ ಧಮ್, ತಾಕತ್ ಇದೆಯಾ ಅಂತೀರ ? ನಿಮ್ಮನ್ನ ಒದ್ದು ಒಳಗೆ ಹಾಕದೆ ನಮ್ಮ ಸಾಹೇಬ್ರು ಯಾಕೆ ಸುಮ್ಮನೆ ಬಿಟ್ಟಿದ್ದಾರೆ ಹೇಳಿಪರಮೇಶ್ವರ್ ಸಾಹೇಬ್ರು ಸೈಲೆಂಟ್ ಇದ್ದಾರೆ ಎಂದಿದ್ದಾರೆ.
ನಿನ್ನೆ ಪ್ರತಾಪ್ ಸಿಂಹಮೇಲೆ ಎಫ್ ಐಆರ್ ದಾಖಲಾಗಿದೆ.ಅಬ್ದುಲ್ ಕಲಾಂರನ್ನ ಮಿಸೈಲ್ ಮ್ಯಾನ್ ಅಂತೇವೆ.ರಾಷ್ಟ್ರಪತಿಗಳಾಗಿದ್ದಾಗ ಬಹಳಷ್ಟು ಸಹಿ ಹಾಕಿದ್ದರುಅಬ್ದುಲ್ ಕಲಾಂ ಅವರು ಮುಸ್ಲಿರಲ್ಲವೇ ? ಈ ರೀತಿ ವರ್ತಿಸಿದ್ರೆ ಮುಂದೆ ಜನರೇ ನಿಮಗೆ ಬುದ್ಧಿ ಕಲಿಸುತ್ತಾರೆ.

ಅಶೋಕಣ್ಣ, ರವಿಯಣ್ಣ ದೊಡ್ಡ ಹಿಂದೂ ಅಂತಾರೆ, ಅವರೆಲ್ಲ ದೊಡ್ಡ ಡೋಂಗಿ ಹಿಂದೂಗಳುನೀವು ಧರ್ಮವನ್ನು ಏನಾದರೂ ಓದಿಕೊಂಡಿದ್ದೀರಾ ? ಎಂದು ಪ್ರಶ್ನೆ ಮಾಡಿದ್ದಾರೆ.






