RCB ಅಂದ್ರೆ ಹಾಗೇನೆ.. RCB ಗತ್ತು ವಿಶ್ವಕ್ಕೆ ಗೊತ್ತು ಅಂತ ಸುಮ್ಮನೆ ಹೇಳಲ್ಲ. ಕಪ್ ಗೆಲ್ಲಲಿ ಸೋಲಲಿ ಅಭಿಮಾನಿಗಳ ಅಭಿಮಾನ .. ತಂಡಕ್ಕಿರುವ ಕ್ರೇಜ್ ಮಾತ್ರ ಯಾವತ್ತೂ ಕಡಿಮೆಯಾಗಲ್ಲ. ಅದಕ್ಕೆ ಮತ್ತೊಂದು ನಿದರ್ಶನ ಬೆಂಗಳೂರಿನಲ್ಲಿ ನಡೆದ ಈ ಪಂದ್ಯ.

ಹೌದು ಬೆಂಗಳೂರಿನಲ್ಲಿ ನಿನ್ನೆ RCB ಮತ್ತು MI ನಡುವೆ WPL ಪಂದ್ಯ ನಡೆದಿತ್ತು. ತವರಿನಲ್ಲಿ RCB ವನಿತೆಯರ ಆಗಮನಕ್ಕಾಗಿ ಕಾತುರದಿಂದ ಕಾದು ಕುಳಿತಿದ್ದ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದರು.
ಇನ್ನು ಫುಲ್ ಜೋಶ್ ನಲ್ಲಿದ್ದ ಪ್ರೇಕ್ಷಕರು ಮೊದಲ ಓವರ್‌ನಿಂದಲೇ RCB ಆಟಗಾರರನ್ನು ಹುರಿದುಂಬಿಸಲು ಶುರು ಮಾಡಿದ್ದರು. ಅದಕ್ಕೆ ತಕ್ಕಂತೆ ಇತ್ತ ಎಲ್ಲಿಸ್ ಪೆರಿ ಕೂಡ ಆರಂಭದಿಂದಲೇ ಆರ್ಭಟಿಸಲು ಶುರು ಮಾಡಿದ್ದರು.

ಹೀಗೆ RCB ಅಭಿಮಾನಿಗಳ ಜೋಶ್ ಮುಗಿಲು ಮುಟ್ಟುವಷ್ಟು ಎತ್ತರಕ್ಕಿತ್ತು. ಇದರಿಂದ ಕೊಂಚ ಕಂಗೆಟ್ಟ MI ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೈದಾನದಲ್ಲೇ ಸ್ವಲ್ಪ ಹೊತ್ತು ತಮ್ಮ ಕಿವಿ ಮುಚ್ಚಿಕೊಂಡೇ ಫೀಲ್ಡಿಂಗ್ ಮಾಡಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದೆ.






