- ಬಿಲ್ ಗೇಟ್ಸ ಅಮೇರಿಕಾದ ಅತ್ಯಂತ ಹೆಚ್ಚು ಕೃಷಿಭೂಮಿ ಹೊಂದಿರುವ ವ್ಯಕ್ತಿ
- NBC ಯ ಪ್ರಕಾರ ಅವರ ವಾಷಿಂಗ್‌ಟನ್ ರಾಜ್ಯದಲ್ಲಿನ ಕೃಷಿಭೂಮಿಯಲ್ಲಿ ಬೆಳೆಯುವ ಆಲೂಗಡ್ಡೆ ಮ್ಯಾಕ್‌ಡೊನಾಲ್ಡ್ಸ್ ಗೆ ಫ್ರೆಂಚ್ ಫ್ರೈ ತಯಾರಿಸಲು ಉಪಯೋಗವಾಗುತ್ತದೆ.
- ಈ ಕೃಷಿಭೂಮಿ ಎಷ್ಟು ವಿಸ್ತಾರವಾಗಿದೆ ಎಂದರೆ ಅದನ್ನು ಬಾಹ್ಯಾಕಾಶದಿಂದ ಕಾಣಬಹುದಾಗಿದೆ.
ಬಿಲ್ ಗೇಟ್ಸ ಅಮೇರಿಕಾದ ಅತ್ಯಂತ ಹೆಚ್ಚು ಕೃಷಿಭೂಮಿ ಹೊಂದಿರುವ ವ್ಯಕ್ತಿ ಆಗಿದ್ದಾರೆ ಮತ್ತು NBC ವರದಿಯೊಂದರ ಪ್ರಕಾರ ಅವರ ವಾಷಿಂಗ್‌ಟನ್ ರಾಜ್ಯದಲ್ಲಿನ ಕೃಷಿಭೂಮಿಯಲ್ಲಿ ಬೆಳೆಯುವ ಆಲೂಗಡ್ಡೆ ಮ್ಯಾಕ್‌ಡೊನಾಲ್ಡ್ಸ್ ಗೆ ಫ್ರೆಂಚ್ ಫ್ರೈ ತಯಾರಿಸಲು ಉಪಯೋಗವಾಗುತ್ತದೆ.
ದ ಲ್ಯಾಂಡ್ ರಿಪೋರ್ಟ್ ಮತ್ತು ತನ್ನ ಸಂಶೋಧನೆಯ ಮಾಹಿತಿಯನ್ನು ಆಧಾರವಾಗಿಸಿ, NBC ಈ ಕೃಷಿಭೂಮಿ ಎಷ್ಟು ವಿಸ್ತಾರವಾಗಿದೆ ಎಂದರೆ ಅದನ್ನು ಬಾಹ್ಯಾಕಾಶದಿಂದ ಕಾಣಬಹುದಾಗಿದೆ ಎಂದು ವರದಿ ಮಾಡಿದೆ.
ಗೇಟ್ಸ್ ಅವರು 18 ರಾಜ್ಯಗಳ ವ್ಯಾಪ್ತಿಯಲ್ಲಿ 269,000 ಎಕರೆಗಳಷ್ಟು ಕೃಷುಭೂಮಿಯನ್ನು ಹೊಂದಿದ್ದಾರೆ. ಹೀಗಾಗಿ ಅವರು ಅಮೇರಿಕಾದ ಅತ್ಯಂತ ಹೆಚ್ಚು ಕೃಷಿಭೂಮಿ ಉಳ್ಳುವ ವ್ಯಕ್ತಿ ಆಗಿದ್ದಾರೆ.
ಮ್ಯಾಕ್‌ಡೊನಾಲ್ಡ್ಸ್ ಮತ್ತು ಗೇಟ್ಸ್ ಅವರು ಈ ವರದಿಯ ಬಗೆಗಿನ ಅವರ ಅಭಿಪ್ರಾಯವನ್ನು ಇನ್ಸೈಡರ್ ಕೋರಿದಾಗ, ಅದಕ್ಕೆ ಪ್ರತಿಕ್ರಿಯಿಸಿಲ್ಲ.
ದ ಲ್ಯಾಂಡ್ ರಿಪೋರ್ಟ್ ಪ್ರಕಾರ ಈ ಎಲ್ಲಾ ಕೃಷಿಭೂಮಿ ಗೇಟ್ಸ್ ಅವರ ನೇರ ಮಾಲೀಕತ್ವದಲ್ಲಿ ಹಾಗು ಅವರ ಹೂಡಿಕೆ ಗುಂಪಾದ ಕಾಸ್ಕೇಡ್ ಮೂಲಕ ಮಾಲೀಕತ್ವದಲ್ಲಿದೆ. ಇತ್ತೀಚೆಗಷ್ಟೇ ಕಾಸ್ಕೇಡ್ ಅನ್ನು ಅನುಚಿತ ಕಾರ್ಯಸ್ಥಳ ವರ್ತನೆ ಎಂದು ಆರೋಪಿಸಲಾಗಿದೆ ಎಂದು ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿತ್ತು.
ಗೇಟ್ಸ್ ಮತ್ತು ಅವರ ಮಾಜಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್ 27 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಘೋಷಿಸಿದ ನಂತರ ಗೇಟ್ಸ್ ಅವರ ಆಸ್ತಿ ಸೂಕ್ಷ್ಮ ಪರಿಶೀಲನೆಗೆ ಒಳಗಾಗಿತ್ತು. ಬ್ಲೂಮ್ಸ್ಬರ್ಗ್ ಎಸ್ಟಿಮೇಟ್ಸ್ ಪ್ರಕಾರ ಗೇಟ್ಸ್ ಅವರು 144 ಬಿಲಿಯನ್ ಅಮೇರಿಕನ್ ಡಾಲರ್ಗಳಷ್ಟು ಬೆಳೆ ಬಾಳುತ್ತಾರೆ ಮತ್ತು ಹಾಗಾಗಿ ಅವರು ಜಗತ್ತಿನ ನಾಲ್ಕನೆ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ವಿಚ್ಛೇದನದ ನಂತರ ಫ್ರೆಂಚ್ ಗೇಟ್ಸ್ ಜಗತ್ತಿನ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಅವರಿಬ್ಬರು ನ್ಯಾಯಾಂಗದ ವ್ಯಾಪ್ತಿಯಾಚೆಗೆ ತಮ್ಮ ಖಾಸಗಿ ಆಸ್ತಿಯನ್ನು ವಿಭಜಿಸಿಕೊಳ್ಳಲಿದ್ದಾರೆ ಎಂದು TMZ ಮೊದಲು ವರದಿ ಮಾಡಿತ್ತು.










