• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ತಂದೆಯಂದಿರಲ್ಲಿ ಪ್ರಸವಾನಂತರ ಖಿನ್ನತೆ ಮತ್ತು ಪರಿಹಾರೋಪಾಯಗಳು

ಫಾತಿಮಾ by ಫಾತಿಮಾ
June 13, 2023
in ಅಂಕಣ
0
ತಂದೆಯಂದಿರಲ್ಲಿ ಪ್ರಸವಾನಂತರ ಖಿನ್ನತೆ ಮತ್ತು ಪರಿಹಾರೋಪಾಯಗಳು
Share on WhatsAppShare on FacebookShare on Telegram

ಹೊಸ ಮಗುವನ್ನು ಪ್ರಪಂಚಕ್ಕೆ ಸ್ವಾಗತಿಸುವಾಗ ಮತ್ತು ಪೋಷಕತ್ವದ ಜವಾಬ್ದಾರಿ ಹೆಗಲೇರುವಾಗ ಅಮ್ಮಂದಿರು ಮಾನಸಿಕ ಸಮಸ್ಯೆಗಳಿಗೆ, ಖನ್ನತೆಗಳಿಗೆ ಜಾರುವುದು ಹೊಸತೇನಲ್ಲ, ಪುರುಷರೂ ಸಹ ತಮ್ಮ ಸಂಗಾತಿಗೆ ಹೆರಿಗೆಯಾದ ನಂತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಹತ್ತರಲ್ಲಿ ಒಂದು ತಂದೆ ಪ್ರಸವಾನಂತರ ಖಿನ್ನತೆ ಮತ್ತು ಆತಂಕದ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಅಧ್ಯಯನವೊಂದು ಹೇಳುತ್ತದೆ. 2019ರ ಒಂದು ಅಧ್ಯಯನದ ಪ್ರಕಾರ ತಮ್ಮ ಸಂಗಾತಿಯ ಮೊದಲ ಮೂರು ತಿಂಗಳ ಗರ್ಭದಧಾರಣೆಯ ಸಂದರ್ಭದಲ್ಲಿ ಗಂಡಂದಿರು ಹುಟ್ಟಲಿರುವ ಮಗುವಿನ ಬಗ್ಗೆ ಯೋಚಿಸಿ ಖಿನ್ನತೆಗೆ ಜಾರುತ್ತಾರೆ.

ADVERTISEMENT
Black father kissing forehead of newborn son

ಈ ಖಿನ್ನತೆಯು ಕೆಲವೊಮ್ಮೆ ಪಿತೃತ್ವದ ಸಂತೋಷಕ್ಕೆ ಅಡ್ಡಿಯಾಗಬಹುದು. ತಮ್ಮ ಮಗುವಿನ ಜೊತೆ ಮುಕ್ತವಾಗಿ ಬೆರೆಯಲು ಅವಕಾಶ ನೀಡದೇ ಇರಬಹುದು. ಪ್ರಸವಾನಂತರ ಬದುಕು ಹೊಸದಾಗಿ ತಿರುವು ಪಡೆದುಕೊಳ್ಳುವುದರಿಂದ ಅಪ್ಪ ಅಮ್ಮ ಇಬ್ಬರಿಗೂ ಹೊಂದಾಣಿಕೆ ಅನಿವಾರ್ಯ. ಇದು‌ ಮಗುವಿನ ತಂದೆಯಲ್ಲಿ ಪ್ರಸವಾನಂತರದ ಖಿನ್ನತೆ (PPD- postpartum depression) ಯನ್ನು ಉಂಟುಮಾಡುತ್ತದೆ. ಪ್ರಸವಾನಂತರದ ಖಿನ್ನತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸದಿದ್ದರೆ ಅದು ಕಾಲಾನಂತರದಲ್ಲಿ ದೀರ್ಘಕಾಲದ ಖಿನ್ನತೆಯಾಗಿ ಸಹ ಬದಲಾಗಬಹುದು ಎನ್ನುತ್ತಾರೆ ಖಾರ್ಘರ್‌ನ ಮದರ್‌ಹುಡ್ ಆಸ್ಪತ್ರೆಯ ಸಲಹೆಗಾರರಾಗಿರುವ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ಪ್ರತಿಮಾ ಥಾಮ್ಕೆ.

ಅಪ್ಪಂದಿರಲ್ಲಿ ಪ್ರಸವಾನಂತರದ ಖಿನ್ನತೆಯ ಚಿಹ್ನೆಗಳು

  1. ಪುರುಷರು ಖಿನ್ನತೆಯ ವಿವಿಧ ಚಿಹ್ನೆಗಳನ್ನು ಪ್ರದರ್ಶಿಸುತ್ತಾರೆ ಮತ್ತು ಆಗಾಗ್ಗೆ ಹತಾಶೆ ಅಥವಾ ಕೋಪಗೊಳ್ಳುತ್ತಾರೆ, ಸುಲಭವಾಗಿ ಕೋಪಗೊಳ್ಳುತ್ತಾರೆ ಮತ್ತು ಆತಂಕಕ್ಕೊಳಗಾಗುತ್ತಾರೆ.
  2. ಅವರಿಗೆ ಮಗುವಿನೊಂದಿಗೆ ಸಂಬಂಧ ಬೆಳೆಸಲು ಸಾಧ್ಯವಾಗುವುದಿಲ್ಲ, ಅವರು ಆಗಾಗ್ಗೆ ಗೊಂದಲಕ್ಕೊಳಗಾಗುತ್ತಾರೆ, ಉದ್ವಿಗ್ನರಾಗುತ್ತಾರೆ, ಅಸಹಾಯಕರಾಗುತ್ತಾರೆ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಅನಿಶ್ಚಿತರಾಗುತ್ತಾರೆ.
  3. ಸಂಗಾತಿಯೊಂದಿಗೆ ಅವರ ಸಂಬಂಧವು ಅನ್ಯೋನ್ಯವಾಗಿರುವುದಿಲ್ಲ ಮತ್ತು ಆಗಾಗ ಜಗಳ ಕಾಯುತ್ತಾರೆ.
  4. ಅಂತಹ ಪುರುಷರು ಮಗುವಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ ಮತ್ತು ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ.
  5. ತಾಯಿ ಮಗುವಿನ ಬಾಂಧವ್ಯದ ಬಗ್ಗೆ ಅಸೂಯೆ ಪಡುತ್ತಾರೆ.
  6. ಖಿನ್ನತೆಗೊಳಗಾದ ಪುರುಷರು ಕೆಲವೊಮ್ಮೆ ಮಾದಕ ವ್ಯಸನಿಗಳಾಗುವ ಸಾಧ್ಯತೆಯೂ ಇರುತ್ತದೆ.

ಪ್ರಸವಾನಂತರದ ಖಿನ್ನತೆಯ ಕಾರಣಗಳು

ತಮ್ಮ ಸಂಗಾತಿಯ ಗರ್ಭಾವಸ್ಥೆಯಲ್ಲಿ ಮತ್ತು ಪ್ರಸವದ ನಂತರ ತಂದೆಯು ಟೆಸ್ಟೋಸ್ಟೆರಾನ್ ಮತ್ತು ಇತರ ಹಾರ್ಮೋನ್‌ನಲ್ಲಿ ಕುಸಿತವನ್ನು ಅನುಭವಿಸುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ, ಇದು ಅವರ ಖಿನ್ನತೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಜೊತೆಗೆ ತಮ್ಮ ಹೆಂಡತಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಗದಿರುವುದು ಮತ್ತು ಅವರ ಸಂಗಾತಿ ಮತ್ತು ಮಕ್ಕಳೊಂದಿಗೆ ಸಂಪರ್ಕ ಕಡಿತಗೊಂಡಿರುವ ಭಾವನೆ ಕೂಡ ಖಿನ್ನತೆಗೆ ಕಾರಣವಾಗಿರುತ್ತದೆ.

“ವೈವಾಹಿಕ ಸಂಬಂಧವು ಸಂಗಾತಿಯ ಬೆಂಬಲ ಮತ್ತು ಸಂಬಂಧದ ತೃಪ್ತಿಯನ್ನು ಒಳಗೊಂಡಿರುತ್ತದೆ, ಇವೆರಡೂ ತಂದೆಯ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಅನೇಕ ಬಾರಿ, ಹೊಸ ಅಪ್ಪಂದಿರು ಶಿಶುಗಳ ಆರೈಕೆಯ ಬಗ್ಗೆ ತಿಳಿದಿರುವುದಿಲ್ಲ ಮತ್ತು ಶಿಶುಗಳನ್ನು ಹೇಗೆ ನಿರ್ವಹಿಸಬೇಕು ಎಂಬುವುದರ ಬಗ್ಗೆಯೂ ತಿಳಿದಿರುವುದಿಲ್ಲ ” ಎಂದು ಡಾ ಥಮ್ಕೆ ಹೇಳುತ್ತಾರೆ.

ಪ್ರಸವಾನಂತರದ ಖಿನ್ನತೆಯನ್ನು ನಿಭಾಯಿಸಲು ಸಲಹೆಗಳು

  1. ಸಂಗಾತಿಯ ಬಗ್ಗೆ ಯಾವುದೇ ಪೂರ್ವಾಗ್ರಹ ಇಟ್ಟುಕೊಳ್ಳದೇ ಅವರಿಗೆ ಬೆಂಬಲವಾಗಿ ನಿಲ್ಲಬೇಕು.
  2. ಇತರ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಮಾತನಾಡಿ ನೈತಿಕ ಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸುವುದು.
  3. ಖಿನ್ನತೆಯ ಲಕ್ಷಣಗಳಾದ ಹತಾಶೆ, ಆತಂಕ, ಒತ್ತಡ, ಉದ್ರೇಕ, ಆತಂಕ, ಮಗುವಿನ ವಿಚಾರದಲ್ಲಿ ಆಸಕ್ತಿಯ ಕೊರತೆ, ಒಂಟಿತನ ಮುಂತಾದವುಗಳನ್ನು ಗಮನಿಸುವುದು ಮತ್ತು ಮನಶಾಸ್ತ್ರಜ್ಞರನ್ನು ಸಂಪರ್ಕಿಸುವುದು.
Tags: coping strategiesdepressionPostpartum depressionPostpartum depression in fathers
Previous Post

ಸಾಮಾಜಿಕ ತಳಹದಿಯೂ ಭ್ರಷ್ಟಾಚಾರದ ಬೇರುಗಳೂ

Next Post

ಹಾಡಹಗಲೇ ವಿದೇಶಿಗನ ಮೇಲೆ ಹಲ್ಲೆ ಯತ್ನ : ಬೆಂಗಳೂರು ಪೊಲೀಸ್​ ಕಮಿಷನರ್​ ಸ್ಪಷ್ಟನೆ

Related Posts

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ
ಅಂಕಣ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

by ಪ್ರತಿಧ್ವನಿ
May 23, 2026
0

ನಾ ದಿವಾಕರ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಆಳುವ ವರ್ಗಗಳು ಜನಸಾಮಾನ್ಯರಿಗೆ ಮಿತವ್ಯಯದ ಉಪದೇಶ ಮಾಡುವುದು ಈ ಜನರ ಸಂಕಟಗಳು ಹೆಚ್ಚಾದಾಗ ಅಲ್ಲ, ಮಾರುಕಟ್ಟೆಗೆ ಬಲವಾದ ಹೊಡೆತ ಬಿದ್ದು ಬುಡ...

Read moreDetails
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

May 18, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
Next Post
ಹಾಡಹಗಲೇ ವಿದೇಶಿಗನ ಮೇಲೆ ಹಲ್ಲೆ ಯತ್ನ : ಬೆಂಗಳೂರು ಪೊಲೀಸ್​ ಕಮಿಷನರ್​ ಸ್ಪಷ್ಟನೆ

ಹಾಡಹಗಲೇ ವಿದೇಶಿಗನ ಮೇಲೆ ಹಲ್ಲೆ ಯತ್ನ : ಬೆಂಗಳೂರು ಪೊಲೀಸ್​ ಕಮಿಷನರ್​ ಸ್ಪಷ್ಟನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada