ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಡಿಜಿ ಡಾ || ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸೆಸ್ ಉಪಸ್ಥಿತಿಯಲ್ಲಿ ಜಾಗತಿಕ ಆಯುಷ್ ಶೃಂಗಸಭೆಯನ್ನು ಉದ್ಘಾಟಿಸಿದ್ದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ದೇಶದ ಆಯುಷ್ ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸಲು ಶೀಘ್ರದಲ್ಲೇ ಆಯುಷ್ ಮಾರ್ಕ್ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಆಯುಷ್ ಉತ್ಪನ್ನಗಳ ಗುಣಮಟ್ಟಕ್ಕೆ ಹೊಂದಿಕೊಳ್ಳುವ ಸಾಂಪ್ರಾದಾಯಿಕ ಔಷಧಗಳನ್ನು ಗುರುತಿಸಿ ದೃಢೀಕರಿಸಲಾಗುವುದು. ಭಾರತಕ್ಕೆ ಚಿಕಿತ್ಸೆಗೆ ಬರುವವರಿಗೆ ಆಯುಷ್ ವೀಸಾ ಎಂಬ ಹೊಸ ಕೆಟಗರಿಯನ್ನು ಪ್ರಾರಂಭಿಸಲಾಗುವುದು ಎಂದು ಮಾತನಾಡುವ ವೇಳ ಹೇಳಿದ್ದಾರೆ.







