ಚಿತ್ರದುರ್ಗ ಮುರುಘಾ ಶ್ರೀಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನವೆಂಬರ್ 15ಕ್ಕೆ ಮುಂದೂಡಿದೆ.
ಮುರುಘಾ ಶ್ರೀಗೆ ಜಾಮೀನು ನೀಡುವ ಸಂಬಂಧ ಈಗಾಗಲೇ ಹೈಕೋರ್ಟ್ ನೀಡಿರುವ ಪ್ರತಿಯನ್ನು ಮುರುಘಾ ಶ್ರೀಗಳ ಪರ ವಕೀಲರಾದ ಸಂದೀಪ್ ಪಾಟೀಲ್ ಶುಕ್ರವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು. ಈ ವೇಳೆ ಶ್ಯೂರಿಟಿ ಪ್ರತಿಗಳನ್ನು ಪರಿಶೀಲಿಸುವ ಸಂಬಂಧ ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿದೆ.

ಶಾಸಕ ಕೆ.ಸಿ.ವಿರೇಂದ್ರ (ಪಪ್ಪಿ) ಅವರ ಸಹೋಧರ ಕೆ.ಸಿ.ನಾಗರಾಜ್ ಹಾಗೂ ಮಧುಸೂದನ್ ಎಂಬುವರಿಂದ ಶ್ಯೂರಿಟಿ ಹಾಕಿದ್ದು, ಇದರೊಟ್ಟಿಗೆ ಎರಡು ಲಕ್ಷ ರೂ. ಬಾಂಡ್ ಸಲ್ಲಿಸಿದ್ದಾರೆ.











