ಗರ್ಭಕಂಠದ ಕ್ಯಾನ್ಸರ್ನಿಂದ ಮಾಡೆಲ್ ಹಾಗೂ ನಟಿ Poonam Pandey ಮೃತಪಟ್ಟಿರುವ ವಿಷಯ ಸಾಕಷ್ಟು ಸದ್ದು ಮಾಡಿದ್ದ ಬೆನ್ನಲ್ಲೇ ಪೂನಂ ಪಾಂಡೆ ಜೀವಂತವಾಗಿದ್ದಾರೆ ಎಂಬ ಅಚ್ಚರಿ ಮಾಹಿತಿ ಹೊರಬಿದ್ದಿದ್ದು, ಇದನ್ನು ಖುದ್ದು ಖಚಿತಪಡಿಸಿರುವ 32ರ ಹರೆಯದ ಮಾಡೆಲ್, ʻನಾನು ಇಲ್ಲಿದ್ದೇನೆ, ಬದುಕಿದ್ದೇನೆ’ ಎಂದು ಹೇಳಿಕೆ ನೀಡಿರುವ ವಿಡಿಯೋವೊಂದು ಇದೀಗ Social Mediaದಲ್ಲಿ ವೈರಲ್ ಆಗಿದೆ.
ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಬಾಲಿವುಡ್ ಸೇರಿದಂತೆ ಎಲ್ಲೆಡೆ ಆಘಾತ ಮೂಡಿಸಿತ್ತು. ಆದರೆ ತಮ್ಮ ಸಾವಿನ ಸುದ್ದಿ ಸುಳ್ಳು ಎಂದು ಸಾಬೀತಪಡಿಸಿರುವ ಪೂನಂ ಪಾಂಡೆ, ಈ ಸಂಬಂಧ Instagramನಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಾವು ಆರೋಗ್ಯವಾಗಿದ್ದು, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿ ಮಾಡಲಾಗಿದೆ ಎಂದು ಘೋಷಿಸಿದರು.
ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಪೂನಂ ಪಾಂಡೆ ವಿಭಿನ್ನ ವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಫೆಬ್ರವರಿ 2ರಂದು, ಮಾಡೆಲ್-ನಟಿಯೂ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹರಡಿತ್ತು. ಅಲ್ಲದೇ ಪೂನಂ ಪಾಂಡೆ ಸಾವಿನ ಸುದ್ದಿಯನ್ನು ಆಕೆಯ ಮ್ಯಾನೇಜರ್ ಖಚಿತಪಡಿಸಿದ್ದರಲ್ಲದೆ, ಅವರ ತಂಡವು ಇನ್ಸ್ಟಾಗ್ರಾಮ್ನಲ್ಲಿ ಅಧಿಕೃತ ಪ್ರಕಟಣೆಯ ಮೂಲಕ ಅದನ್ನು ಪ್ರಕಟಿಸಿತ್ತು. ಆದರೆ ಹಿಂದಿನ ವರದಿಗೆ ವಿರುದ್ಧವಾಗಿ, ಇಂದು ಪೂನಂ ಆರೋಗ್ಯವಾಗಿದ್ದಾರೆ ಎಂದು ಬಹಿರಂಗಪಡಿಸಲಾಗಿದೆ. ಪೂನಂ ಪಾಂಡೆ ಅವರ ಈ ಹುಚ್ಚಾಟ ಹಲವರಲ್ಲಿ ಗೊಂದಲ ಮೂಡಿಸಿದೆ, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ಸಹ ವ್ಯಕ್ತವಾಗುತ್ತಿವೆ.
#PoonamPandey #modelactor #cervicalcancer #Instagram