
ಬೆಂಗಳೂರು: ಸದಾ ಕೆಲಸ, ಶಿಸ್ತಿನಲ್ಲಿ ಮುಳುಗಿರುವ ಪೊಲೀಸರೆಲ್ಲ ಒಟ್ಟಿಗೆ ಸೇರಿ ದೀಪಾವಳಿ ಆಚರಿಸಿದ ಸಂಭ್ರಮಕ್ಕೆ ಚಾಮರಾಜಪೇಟೆ ಸಿಎಆರ್ ಗ್ರೌಂಡ್ ಸಾಕ್ಷಿಯಾಯಿತು.
ಬೆಂಗಳೂರು ನಗರ ಪಶ್ಚಿಮ ವಿಭಾಗದ ಪೊಲೀಸರಿಂದ ನಡೆದ ದೀಪಾವಳಿ ಆಚರಣೆಯಲ್ಲಿ ಖುದ್ದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಭಾಗಿಯಾಗಿ ಪೊಲೀಸರ ಮಕ್ಕಳ ಜೊತೆ ಹಸಿರು ಪಟಾಕಿ ಹಚ್ಚಿ ಸಿಹಿ ಹಂಚಿದರು.
ಈ ಆಚರಣೆ ವೇಳೆ ಪಶ್ಚಿಮ ವಿಭಾಗದ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕುಟುಂಬದವರು ಭಾಗಿಯಾಗಿದ್ದರು. ಸ್ವತಃ ಪಟಾಕಿ ಹಚ್ಚಿ ಕಮಿಷನರ್ ಸೀಮಂತ್ ಕುಮಾರ್ ದೀಪಾವಳಿ ಆಚರಿಸಿದರು.

ಇನ್ನೂ ನಗರದ ಅನೇಕ ಪೊಲೀಸ್ ವಸತಿಗೃಹಗಳಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಅನೇಕ ಪೊಲೀಸ್ ಠಾಣೆಗಳಲ್ಲೂ ಅಧಿಕಾರಿ, ಸಿಬದಬಂದಿ ವರ್ಗದವರು ಪಟಾಕಿ ಸಿಡಿಸಿ, ಸಿಹಿ ಹಂಚಿ ದೀಪಾವಳಿ ಆಚರಿಸಿದ್ದಾರೆ.
